ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಲಸೆ ಕಾರ್ಮಿಕರಿಗೆ ಮೋದಿ ಕೊಡಲಿದ್ದಾರೆ ಗಿಫ್ಟ್

|
Google Oneindia Kannada News

ಲಾಕ್‌ಡೌನ್ ಸಮಯದಲ್ಲಿ ತಮ್ಮ ಗ್ರಾಮಕ್ಕೆ ಮರಳಿದ ವಲಸೆ ಕಾರ್ಮಿಕರಿಗೆ ಸದ್ಯದಲ್ಲೇ ಮೋದಿ ಗುಡ್‌ನ್ಯೂಸ್ ನೀಡಲಿದ್ದಾರೆ. ಈಗ ವಲಸೆ ಕಾರ್ಮಿಕರು ಉದ್ಯೋಗಕ್ಕಾಗಿ ನಗರಗಳನ್ನು ಅವಲಂಬಿಸುವ ಅಗತ್ಯವಿಲ್ಲ. ಪ್ರಧಾನಿ ನರೇಂದ್ರ ಮೋದಿ ಈ ವಲಸಿಗರ ಉದ್ಯೋಗಕ್ಕಾಗಿ ಅದ್ಭುತ ಯೋಜನೆಯನ್ನು ಸಿದ್ಧಪಡಿಸಿದ್ದಾರೆ. ಮೊದಲ ಹಂತದಲ್ಲಿ 6 ರಾಜ್ಯಗಳ 25 ಸಾವಿರ ಕಾರ್ಮಿಕರಿಗೆ ಉದ್ಯೋಗ ಸಿಗಲಿದೆ.

Recommended Video

Sreesanth to make a comeback to Ranji cricket at the age of 37 | Oneindia Kannada

ಕೊರೊನಾವೈರಸ್ ಹರಡುವುದನ್ನು ತಡೆಗಟ್ಟಲು ವಿಧಿಸಲಾದ ಲಾಕ್‌ಡೌನ್ ಸಮಯದಲ್ಲಿ ಜೀವನೋಪಾಯವನ್ನು ಒದಗಿಸಲು ತಮ್ಮ ರಾಜ್ಯಕ್ಕೆ ಮರಳಿದ ವಲಸೆ ಕಾರ್ಮಿಕರನ್ನು ಸಬಲೀಕರಣಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಶನಿವಾರ (ಜೂನ್ 20) "ದೊಡ್ಡ" ಗ್ರಾಮೀಣ ಲೋಕೋಪಯೋಗಿ ಯೋಜನೆಯನ್ನು ಪ್ರಾರಂಭಿಸಲಿದ್ದಾರೆ.

ಕೊರೊನಾ ಎಫೆಕ್ಟ್: 12 ಲಕ್ಷ ವಿದೇಶಿ ಕಾರ್ಮಿಕರು ಸೌದಿ ಬಿಡುವ ಸಾಧ್ಯತೆ ಕೊರೊನಾ ಎಫೆಕ್ಟ್: 12 ಲಕ್ಷ ವಿದೇಶಿ ಕಾರ್ಮಿಕರು ಸೌದಿ ಬಿಡುವ ಸಾಧ್ಯತೆ

ಗುರುವಾರ ಅಧಿಕೃತ ಹೇಳಿಕೆಯಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಉಪಮುಖ್ಯಮಂತ್ರಿ ಸುಶೀಲ್ ಮೋದಿ ಅವರ ಸಮ್ಮುಖದಲ್ಲಿ ಮೋದಿ ಜೂನ್ 20 ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ 'ಗರಿಬ್ ಕಲ್ಯಾಣ್ ರೋಜಗರ್ ಅಭಿಯಾನ್' ಅನ್ನು ಪ್ರಾರಂಭಿಸಲಿದ್ದಾರೆ ಎಂದು ತಿಳಿಸಲಾಗಿದೆ. ಈ ಅಭಿಯಾನವನ್ನು ಬಿಹಾರದ ಖಗೇರಿಯಾ ಜಿಲ್ಲೆಯ ಬೆಲ್ಡೌರ್ ಬ್ಲಾಕ್‌ನ ತೆಲಿಹಾರ್ ಗ್ರಾಮದಿಂದ ಪ್ರಾರಂಭಿಸಲಾಗುವುದು.

PM Modi Will Launch Garib Kalyan Rojgar Abhiyaan On 20 June

ಈ ಯೋಜನೆಯ ಡಿಜಿಟಲ್ ಉಡಾವಣೆಯಲ್ಲಿ ಇತರ ಐದು ರಾಜ್ಯಗಳ ಮುಖ್ಯಮಂತ್ರಿ ಮತ್ತು ಕೆಲವು ಕೇಂದ್ರ ಸಚಿವರು ಸಹ ಭಾಗವಹಿಸಲಿದ್ದಾರೆ. 27 ಮಹತ್ವಾಕಾಂಕ್ಷೆಯ ಜಿಲ್ಲೆಗಳನ್ನು ಒಳಗೊಂಡ ಈ ಅಭಿಯಾನಕ್ಕೆ ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಜಾರ್ಖಂಡ್ ಮತ್ತು ಒಡಿಶಾದ ಒಟ್ಟು 116 ಜಿಲ್ಲೆಗಳಿಂದ 25 ಸಾವಿರಕ್ಕೂ ಹೆಚ್ಚು ವಲಸೆ ಕಾರ್ಮಿಕರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಈ ಜಿಲ್ಲೆಗಳಲ್ಲಿ ಸುಮಾರು ಮೂರನೇ ಎರಡರಷ್ಟು ವಲಸೆ ಕಾರ್ಮಿಕರನ್ನು ಸೇರಿಸಿಕೊಳ್ಳಲಾಗಿದೆ ಎಂದು ಹೇಳಲಾಗಿದೆ.

English summary
The Narendra Modi government will launch a massive rural public works scheme 'Garib Kalyan Rojgar Abhiyaan' on 20 June to provide livelihood to migrant workers and rural citizen.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X