ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೂಡಿಕೆದಾರರಿಗೆ ರೆಡ್‌ ಕಾರ್ಪೆಟ್ ಹಾಕಿ ಸ್ವಾಗತಿಸುತ್ತೇವೆ- ಪ್ರಧಾನಿ ಮೋದಿ

|
Google Oneindia Kannada News

ದೆಹಲಿ, ಜುಲೈ 9: ''ಭಾರತವು ವಿಶ್ವದ ಅತ್ಯಂತ ಮುಕ್ತ ಆರ್ಥಿಕತೆಗಳಲ್ಲಿ ಒಂದಾಗಿದೆ. ಎಲ್ಲಾ ಜಾಗತಿಕ ಕಂಪನಿಗಳು ಬಂದು ಭಾರತದಲ್ಲಿ ತಮ್ಮ ಅಸ್ತಿತ್ವವನ್ನು ಸ್ಥಾಪಿಸಲು ನಾವು ರೆಡ್ ಕಾರ್ಪೆಟ್ ಹಾಕುತ್ತಿದ್ದೇವೆ'' ಎಂದು ಪ್ರಧಾನಿ ಇಂಡಿಯಾ ಗ್ಲೋಬಲ್ ವೀಕ್ 2020 ಕಾರ್ಯಕ್ರಮದಲ್ಲಿ ಕರೆ ನೀಡಿದ್ದಾರೆ.

Recommended Video

Reimagining the Future of Internet-Enabled Mobility Services in Bengaluru by Rajeev Gowda Part - 1

ಬ್ರಿಟನ್‌ನಲ್ಲಿ ಆಯೋಜಿಸಲಾಗಿರುವ ಇಂಡಿಯಾ ಗ್ಲೋಬಲ್ ವೀಕ್ 2020 ಕಾರ್ಯಕ್ರಮದ ಉದ್ಘಾಟನಾ ಭಾಷಣ ಮಾಡಿದ ಮೋದಿ ಕೊರೊನಾ ವೈರಸ್ ಬಿಕ್ಕಟ್ಟಿನಲ್ಲಿ ಭಾರತ ಹೇಗೆ ಕಾರ್ಯನಿರ್ವಹಿಸಿದೆ, ಆರ್ಥಿಕತೆಯನ್ನು ಹೇಗೆ ನಿಯಂತ್ರಿಸಿದೆ ಎಂದು ಮೋದಿ ತಿಳಿಸಿದರು.

PM Modi Welcomes all global companies to establish their presence in India

''ಭಾರತವು ಒಂದೆಡೆ ಜಾಗತಿಕ ಸಾಂಕ್ರಾಮಿಕ ರೋಗದ ವಿರುದ್ಧ ಬಲವಾದ ಹೋರಾಟ ನಡೆಸುತ್ತಿದೆ. ಜನರ ಆರೋಗ್ಯದ ಮೇಲೆ ಹೆಚ್ಚಿನ ಗಮನ ಹರಿಸುವುದರೊಂದಿಗೆ, ಆರ್ಥಿಕತೆಯ ಚೇತರಿಕೆ ಮೇಲೆಯೂ ಸಮಾನವಾಗಿ ಗಮನ ಹರಿಸಿದೆ'' ಎಂದು ಮೋದಿ ಹೇಳಿದ್ದಾರೆ.

''ಔಷಧ ಉದ್ಯಮವು ಭಾರತಕ್ಕೆ ಮಾತ್ರವಲ್ಲ ಇಡೀ ಜಗತ್ತಿಗೆ ಒಂದು ಆಸ್ತಿ ಎಂದು ಸಾಂಕ್ರಾಮಿಕ ರೋಗವು ಮತ್ತೊಮ್ಮೆ ತೋರಿಸಿದೆ. ಜಾಗತಿಕ ಔಷಧಿಗಳ ಬೆಲೆಯನ್ನು ಕಡಿಮೆ ಮಾಡುವಲ್ಲಿ ಇದು ಪ್ರಮುಖ ಪಾತ್ರ ವಹಿಸಿದೆ'' ಎಂದು ಮೋದಿ ತಿಳಿಸಿದರು.

''ಭಾರತವು ಪ್ರತಿಭೆಯ ಶಕ್ತಿಶಾಲಿಯಾಗಿದ್ದು, ಇನ್ನು ಹೆಚ್ಚಿನ ಕೊಡುಗೆ ನೀಡಲು ಉತ್ಸುಕವಾಗಿದೆ. ಭಾರತೀಯ ಟೆಕ್ ಉದ್ಯಮ ಮತ್ತು ಟೆಕ್ ವೃತ್ತಿಪರರನ್ನು ಯಾರು ಮರೆಯುವಂತಿಲ್ಲ'' ಎಂದು ದೇಶದ ಶಕ್ತಿ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

'ಕೊವಿಡ್ ಲಸಿಕೆ ಪತ್ತೆಯಾದ ನಂತರ ಅದನ್ನು ಅಭಿವೃದ್ಧಿಪಡಿಸುವಲ್ಲಿ ಮತ್ತು ಉತ್ಪಾದನೆಯನ್ನು ಹೆಚ್ಚಿಸುವಲ್ಲಿ ಭಾರತವು ಪ್ರಮುಖ ಪಾತ್ರ ವಹಿಸುತ್ತದೆ ಎಂದು ನನಗೆ ಖಾತ್ರಿಯಿದೆ' ಎಂದು ಮೋದಿ ಗ್ಲೋಬಲ್ ವೀಕ್ ಕಾರ್ಯಕ್ರಮದ ಭಾಷಣದಲ್ಲಿ ಆತ್ಮವಿಶ್ವಾಸ ವ್ಯಕ್ತಪಡಿಸಿದರು.

English summary
India remains one of the most open economies in the world. We are laying a red carpet for all global companies to come and establish their presence in India - PM Narendra Modi at India Global Week 2020 .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X