ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರಿಸರಕ್ಕೆ ಪೂರಕವಾದ ಆಟಿಕೆಗಳನ್ನು ತಯಾರಿಸಲು ಮೋದಿ ಮನವಿ

|
Google Oneindia Kannada News

ನವದೆಹಲಿ,ಫೆಬ್ರವರಿ 27: ಪರಿಸರಕ್ಕೆ ಪೂರಕವಾದ ಆಟಿಕೆಗಳನ್ನು ತಯಾರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.

ಇಂದು ಭಾರತ ಆಟಿಕೆ ಮೇಳ 2021ಕ್ಕೆ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು, ಪರಿಸರ ಮತ್ತು ಮನಸ್ಸಿಗೆ ಎರಡಕ್ಕೂ ಪೂರಕವಾಗುವಂತಹ ಆಟಿಕೆಗಳನ್ನು ತಯಾರಿಸುವಂತೆ ಹೇಳಿದ್ದಾರೆ.

ನಿಮಗೆ ಬಹುಮತ ನೀಡಿರುವುದು ಬೇಜವಾಬ್ದಾರಿಯಿಂದ ವರ್ತಿಸಲು ಅಲ್ಲ: ಶಿವಸೇನಾ ವಾಗ್ದಾಳಿನಿಮಗೆ ಬಹುಮತ ನೀಡಿರುವುದು ಬೇಜವಾಬ್ದಾರಿಯಿಂದ ವರ್ತಿಸಲು ಅಲ್ಲ: ಶಿವಸೇನಾ ವಾಗ್ದಾಳಿ

ಆಟಿಕೆಗಳನ್ನು ಮರುಬಳಕೆ ಮಾಡುವುದು ಭಾರತೀಯರ ಜೀವನಶೈಲಿಯ ಒಂದು ಭಾಗ. ಬಹುತೇಕ ಭಾರತೀಯ ಆಟಿಕೆಗಳನ್ನು ಪರಿಸರ ಸ್ನೇಹಿ ವಸ್ತುಗಳನ್ನು ಬಳಸಿ ನೈಸರ್ಗಿಕವಾಗಿ ಹಲವು ಆಟಿಕೆಗಳನ್ನು ತಯಾರಿಸಲಾಗುತ್ತದೆ. ಅವುಗಳಲ್ಲಿ ಬಳಕೆ ಮಾಡುವ ಬಣ್ಣಗಳು ನೈಸರ್ಗಿಕವಾಗಿದ್ದು ಸುರಕ್ಷಿತವಾಗಿರುತ್ತದೆ ಎಂದು ಪ್ರಧಾನಿ ಹೇಳಿದರು.

PM Modi Urges ToymakersTo Try E-Markets

ಮಕ್ಕಳು ಆಟವಾಡುವ ಆಟಿಕೆಗಳನ್ನು ತಯಾರಿಸುವಾಗ ಸಾಧ್ಯವಾದಷ್ಟು ಮಕ್ಕಳ ಮನಸ್ಸನ್ನು ವಿಕಸಿಸುವಂತಹ ಪರಿಸರಕ್ಕೆ ಪೂರಕವಾದ ಆಟದ ಸಾಮಾನುಗಳನ್ನು ತಯಾರಿಸಿ. ಪ್ಲಾಸ್ಟಿಕ್ ಆಟಿಕೆಗಳನ್ನು ಸಾಧ್ಯವಾದಷ್ಟು ಕಡಿಮೆ ಬಳಕೆ ಮಾಡಬೇಕು.

ಪುನರ್ಬಳಕೆ ಮಾಡುವಂತಹ ವಸ್ತುಗಳನ್ನು ಬಳಸೋಣ ಎಂದು ಪ್ರಧಾನಿ ಮೋದಿ ಈ ಸಂದರ್ಭದಲ್ಲಿ ಆಟಿಕೆ ತಯಾರಕರಿಗೆ ಕರೆ ನೀಡಿದರು.ಈ ಮೇಳವು ಮಾರ್ಚ್ 2ರವರೆಗೆ ಇರಲಿದೆ. ಸುಮಾರು 30 ರಾಜ್ಯಗಳಿಂದ ಸಾವಿರಕ್ಕೂ ಹೆಚ್ಚು ಪ್ರದರ್ಶಕರು ಆಗಮಿಸಿದ್ದಾರೆ.ಸಾಂಪ್ರದಾಯಿಕ ಆಟಿಕೆಗಳ ಜತೆಗೆ, ಎಲೆಕ್ಟ್ರಿಕ್,ಪಜಲ್ ಆಟಿಕೆಗಳು ಕೂಡ ಇವೆ.

English summary
Our toys reflect reuse and recycling that has been a part of the Indian lifestyle. Most Indian toys are built out of natural and eco-friendly material. The colours used in them are natural and safe: PM Narendra Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X