ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಸೂದ್ ಜಾಗತಿಕ ಉಗ್ರ: ಭಾರತದ ಗೆಲುವು ಎಂದ ಪ್ರಧಾನಿ ಮೋದಿ

|
Google Oneindia Kannada News

ನವದೆಹಲಿ, ಏಪ್ರಿಲ್ 02: "ಪ್ರತಿ ಭಾರತೀಯನೂ ಹೆಮ್ಮೆ ಪಡುವಂಥ ದಿನ ಇದು. ಮಾನವೀಯ ಮೌಲ್ಯಗಳಲ್ಲಿ ನಂಬಿಕೆ ಇಟತ್ಟು ನಮ್ಮನ್ನು ಬೆಂಬಲಿಸಿದ ಜಾಗತಿಕ ಸಮುದಾಯಕ್ಕೆ ನಾನು ಕೃತಜ್ಞ" ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ಅಜರ್‌ನನ್ನು ಜಾಗತಿಕ ಉಗ್ರ ಎಂದು ಘೋಷಿಸಲು ಚೀನಾ ಸಹಮತಿ ಸಾಧ್ಯತೆ ಅಜರ್‌ನನ್ನು ಜಾಗತಿಕ ಉಗ್ರ ಎಂದು ಘೋಷಿಸಲು ಚೀನಾ ಸಹಮತಿ ಸಾಧ್ಯತೆ

ಜೈಶ್ ಇ ಮೊಹಮ್ಮದ್ ಉಗ್ರ ಮಸೂದ್ ಅಜರ್ ನನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಬುಧವಾರ 'ಜಾಗತಿಕ ಉಗ್ರ' ಎಂದು ಘೋಷಣೆ ಮಾಡಿದ್ದು, ಈ ನಡೆಯನ್ನು ಮೋದಿ ಸ್ವಾಗತಿಸಿದ್ದಾರೆ.

ಭಾರತಕ್ಕೆ ಜಯ, ಪಾಕಿಸ್ತಾನಕ್ಕೆ ಮುಖಭಂಗ: ಮಸೂದ್ ಅಜರ್ ಜಾಗತಿಕ ಉಗ್ರಭಾರತಕ್ಕೆ ಜಯ, ಪಾಕಿಸ್ತಾನಕ್ಕೆ ಮುಖಭಂಗ: ಮಸೂದ್ ಅಜರ್ ಜಾಗತಿಕ ಉಗ್ರ

"ಪ್ರತಿ ಭಾರತೀಯನೂ ಹೆಮ್ಮೆ ಪಡುವಂಥ ದಿನ ಇದು. ಜಾಗತಿಕ ಸಮುದಾಯ ಮತ್ತು ಮಾನವೀಯ ಮೌಲ್ಯಗಳಲ್ಲಿ ನಂಬಿಕೆ ಇಟ್ಟು ನಮ್ಮನ್ನು ಬೆಮಬಲಿಸಿದ ಎಲ್ಲರಿಗೂ ನಾನು ಕೃತಜ್ಞತೆ ಅರ್ಪಿಸುತ್ತೇನೆ. ಭಯೋತ್ಪಾದನೆಯ ಬಗೆಗಿನ ಭಾರತದ ಹೋರಾಟ ಮುಂದುವರಿಯಲಿದೆ. ನಮ್ಮ ಭೂಮಿಯಲ್ಲಿ ಶಾಂತಿ ಮತ್ತು ಭ್ರಾತೃತ್ವ ನೆಲೆಸುವವರೆಗೆ ನಾವು ಹೋರಾಡುತ್ತೇವೆ" ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

PM Modi tweets after UNSC declares Masood Azhar a global terrorist

ಫೆಬ್ರವರಿ 14 ರಂದು ನಡೆದ ಪುಲ್ವಾಮಾ ದಾಳಿಯಲ್ಲಿ ನಲವತ್ತಕ್ಕೂ ಹೆಚ್ಚು ಯೋಧರನ್ನು ಬಲಿತೆಗೆದುಕೊಂಡ ಘಟನೆಯಲ್ಲಿ ಮಸೂದ್ ಅಜರ್ ಕೈವಾಡದ ಬಗ್ಗೆ ಭಾರತ ವಿಶ್ವಸಂಸ್ಥೆಗೆ ಮನದಟ್ಟು ಮಾಡಿತ್ತು. ಅಷ್ಟೇ ಅಲ್ಲ, ಹಲವು ಉಗ್ರ ಚಟುವಟಿಕೆಯಲ್ಲಿ ಆತನ ಕೈವಾಡವಿರುವುದನ್ನೂ ಸ್ಪಷ್ಟಪಡಿಸಿತ್ತು. ಆದರೆ ಪಾಕಿಸ್ತಾನಿ ಮೂಲದ ಈ ಉಗ್ರನನ್ನು ಜಾಗತಿಕ ಉಗ್ರ ಎಂದು ಘೋಷಿಸಲು ಚೀನಾ ತೊಡಕನ್ನುಂಟು ಮಾಡಿತ್ತು.

English summary
After UN security council declares Jem leader Masood Azhar as globala terrorist, PM Narendra Modi tweeted, "Today is a day that would make every Indian proud! I thank the global community and all those who believe in humanitarian values for their support"
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X