ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೂತನ ರಕ್ಷಣಾ ಸಚಿವಾಲಯದ ಕಚೇರಿ ಉದ್ಘಾಟನೆ: ಸೆಂಟ್ರಲ್‌ ವಿಸ್ತಾ ಟೀಕಾಕಾರರ ವಿರುದ್ದ ಮೋದಿ ಕಿಡಿ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್‌ 16: ಪ್ರಧಾನ ಮಂತ್ರಿ ನರೇಂದ್ರ ಮೋದಿ ನವದೆಹಲಿಯಲ್ಲಿ ಗುರುವಾರ ಬೆಳಿಗ್ಗೆ ಹೊಸ ರಕ್ಷಣಾ ಸಚಿವಾಲಯ ಕಚೇರಿಯನ್ನು ಉದ್ಘಾಟನೆ ಮಾಡಿದರು. ಇದೇ ಸಂದರ್ಭದಲ್ಲಿ ಸೆಂಟ್ರಲ್‌ ವಿಸ್ತಾ ಯೋಜನೆಯ ಬಗ್ಗೆ ಟೀಕೆ ಮಾಡುವ ವಿರೋಧ ಪಕ್ಷದವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸೆಂಟ್ರಲ್‌ ವಿಸ್ತಾ ಯೋಜನೆಯು ಸುಮಾರು 20,000 ಕೋಟಿಯ ಯೋಜನೆಯಾಗಿದೆ. ಹೊಸ ಸಂಸತ್ತು ರಚನೆ ಹಾಗೂ ಹೊಸ ಕೇಂದ್ರ ಸರ್ಕಾರ ಕಚೇರಿ, ಹಾಗೆಯೇ ಉತ್ತರ ಮತ್ತು ದಕ್ಷಿಣ ಬ್ಲಾಕ್‌ಗಳ ನವೀಕರಣವು ಈ ಯೋಜನೆಯಲ್ಲಿ ಒಳಗೊಳ್ಳಲಿದೆ. ಈ ಯೋಜನೆಯ ವಿರೋಧಿಗಳು ಪ್ರಮುಖ ಸರ್ಕಾರಿ ಕಚೇರಿಗಳು ಮತ್ತು ಸಚಿವಾಲಯಗಳ ಸ್ಥಿತಿಗಿಂತ ಅಧಿಕವಾಗಿ ತಮ್ಮ ವೈಯಕ್ತಿಕ ಕಾರ್ಯಸೂಚಿಗಳ ಬಗ್ಗೆ ಹೆಚ್ಚು ಚಿಂತಿತರಾಗಿದ್ದಾರೆ ಎಂದು ಪ್ರಧಾನಿ ಮೋದಿ ಆರೋಪ ಮಾಡಿದ್ದಾರೆ.

'ಡಬಲ್‌ ಇಂಜಿನ್‌ ಸರ್ಕಾರ': ಯೋಗಿ ಸರ್ಕಾರವನ್ನು ಶ್ಲಾಘಿಸಿದ ಮೋದಿ'ಡಬಲ್‌ ಇಂಜಿನ್‌ ಸರ್ಕಾರ': ಯೋಗಿ ಸರ್ಕಾರವನ್ನು ಶ್ಲಾಘಿಸಿದ ಮೋದಿ

"ಈ ಪ್ರಮುಖ ಸೆಂಟ್ರಲ್‌ ವಿಸ್ತಾ ಯೋಜನೆಯನ್ನು ನಾಶಗೊಳಿಸಲು ಕೆಲವು ಜನರು ಹೇಗೆಲ್ಲಾ ಪ್ರಯತ್ನ ಮಾಡಿದ್ದಾರೆ ಎಂಬುವುದನ್ನು ನಾವು ನೋಡಿದ್ದೇವೆ. ಈ ಸೆಂಟ್ರಲ್‌ ವಿಸ್ತಾ ಯೋಜನೆಯ ಬಗ್ಗೆ ತಪ್ಪು ಮಾಹಿತಿಯನ್ನು ಹರಡಲು ಅವರು ತಮ್ಮ ವೈಯಕ್ತಿಕ ಅಜೆಂಡಾವನ್ನು ಹೇಗೆ ಬಳಸಿಕೊಂಡರು ಎಂಬುವುದನ್ನು ಕೂಡಾ ನಾವು ನೋಡಿದ್ದೇವೆ," ಎಂದಿದ್ದಾರೆ.

PM Modi Slams Central Vista Critics As He Inaugurates New Defence Offices

ಹಾಗೆಯೇ "ನಮ್ಮ ದೇಶದ ಸಚಿವರುಗಳು ಕಾರ್ಯ ನಿರ್ವಹಿಸುವ ಈ ಕಟ್ಟಡಗಳ ಪರಿಸ್ಥಿತಿಯ ಬಗ್ಗೆ ಈ ವಿರೋಧ ಪಕ್ಷದವರು ಒಂದು ಬಾರಿಯೂ ಕೂಡಾ ಮಾತನಾಡಿಲ್ಲ. ಹೊಸ ರಕ್ಷಣಾ ಸಚಿವಾಲಯ ಕಚೇರಿಯ ಬಗ್ಗೆ ಈ ವಿರೋಧ ಪಕ್ಷದವರು ಒಂದು ಬಾರಿಯೂ ಉಲ್ಲೇಖವನ್ನು ಕೂಡಾ ಮಾಡಿಲ್ಲ. ಅವರು ಎಷ್ಟು ಕ್ರೂರವಾಗಿದ್ದಾರೆ," ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

"ಈ ವಿರೋಧ ಪಕ್ಷದವರು ಈ ಕಟ್ಟಡದ ಪರಿಸ್ಥಿತಿಯ ಬಗ್ಗೆ ಉಲ್ಲೇಖ ಮಾಡಿದ್ದರೆ, ಅವರ ಕಾರ್ಯಸೂಚಿಗಳು ಮತ್ತು ಸುಳ್ಳುಗಳು ಬಯಲಾಗುತ್ತಿತ್ತು," ಎಂದು ಹೇಳುವ ಮೂಲಕ ರಾಹುಲ್‌ ಗಾಂಧಿಗೆ ತಿರುಗೇಟು ನೀಡಿದ್ದಾರೆ. ಕಳೆದ ಮೇ ತಿಂಗಳಿನಲ್ಲಿ ಕಾಂಗ್ರೆಸ್‌ ಮುಖಂಡ, ವಯನಾಡು ಸಂಸದ ರಾಹುಲ್‌ ಗಾಂಧಿ, "ಸೆಂಟ್ರಲ್‌ ವಿಸ್ತಾ ಯೋಜನೆಯು ಸಂಪತ್ತಿನ ಕ್ರಿಮಿನಲ್‌ ದುರುಪಯೋಗ," ಎಂದು ಆರೋಪ ಮಾಡಿದ್ದರು. ಹಾಗೆಯೇ "ಈ ಹಣವನ್ನು ಸರ್ಕಾರ ಕೊರೊನಾ ವೈರಸ್‌ ಸೋಂಕಿನ ವಿರುದ್ದ ಹೋರಾಟ ನಡೆಸಲು ಬಳಸಿಕೊಳ್ಳಬಹುದು," ಎಂದು ಅಭಿಪ್ರಾಯ ಪಟ್ಟಿದ್ದರು.

ಪ್ರಧಾನಿ ಹುಟ್ಟು ಹಬ್ಬದ ಹಿನ್ನೆಲೆ ಬಿಜೆಪಿಯಿಂದ 'ಹ್ಯಾಪಿ ಬರ್ತ್‌ಡೇ ಪಿಎಂ' ಲಸಿಕೆ ಬೂಸ್ಟರ್‌ಪ್ರಧಾನಿ ಹುಟ್ಟು ಹಬ್ಬದ ಹಿನ್ನೆಲೆ ಬಿಜೆಪಿಯಿಂದ 'ಹ್ಯಾಪಿ ಬರ್ತ್‌ಡೇ ಪಿಎಂ' ಲಸಿಕೆ ಬೂಸ್ಟರ್‌

ಹಾಗೆಯೇ ರಾಹುಲ್‌ ಗಾಂಧಿ ಹಾಗೂ ಕಾಂಗ್ರೆಸ್‌ನ ಹಲವು ನಾಯಕರು ಕೇಂದ್ರ ಸರ್ಕಾರವು ಸೆಂಟ್ರಲ್‌ ವಿಸ್ತಾ ಯೋಜನೆಯನ್ನು ಸ್ಥಗಿತಗೊಳಿಸಬೇಕು ಎಂದು ಆಗ್ರಹ ಮಾಡಿದ್ದರು. ಇದರ ಬದಲಾಗಿ ವೈದ್ಯಕೀಯ ಸವಲತ್ತುಗಳನ್ನು ಅಧಿಕ ಮಾಡಬೇಕು ಎಂದು ಸರ್ಕಾರಕ್ಕೆ ಕಾಂಗ್ರೆಸ್‌ ಮುಖಂಡರು ಒತ್ತಾಯ ಮಾಡಿದ್ದರು. ಇನ್ನು ಕೇಂದ್ರ ಸರ್ಕಾರವು ಈ ಸೆಂಟ್ರಲ್‌ ವಿಸ್ತಾ ಯೋಜನೆಯನ್ನು ಅಗತ್ಯ ಸೇವೆ ಎಂದು ಪರಿಗಣಿಸಿದ್ದಕ್ಕೆ ಕೇಂದ್ರ ಸರ್ಕಾರದ ವಿರುದ್ದ ಕಾಂಗ್ರೆಸ್‌ ತೀವ್ರ ವಾಗ್ದಾಳಿ ನಡೆಸಿತ್ತು. ಕೇಂದ್ರ ಸರ್ಕಾರವು ಸೆಂಟ್ರಲ್‌ ವಿಸ್ತಾ ಯೋಜನೆಯನ್ನು ಅಗತ್ಯ ಸೇವೆ ಎಂದು ಪರಿಗಣಿಸಿದ ಕಾರಣದಿಂದಾಗಿ ಈ ಯೋಜನೆಯ ಕಾರ್ಯವನ್ನು ಕೊರೊನಾ ವೈರಸ್‌ ಸೋಂಕು ಸಂದರ್ಭದಲ್ಲಿ ಹಾಗೂ ಕೋವಿಡ್‌ ಹಿನ್ನೆಲೆ ಹೇರಲಾಗಿದ್ದ ಲಾಕ್‌ಡೌನ್‌ ಸಂದರ್ಭದಲ್ಲೂ ನಡೆಸಲು ಅನುಮತಿ ನೀಡಲಾಗಿತ್ತು.

ಪ್ರಧಾನ ಮಂತ್ರಿ ನರೇಂದ್ರ ಮೋದಿಯು ಈ ಹೊಸ ರಕ್ಷಣಾ ಸಚಿವಾಲಯದ ಕಚೇರಿಯು ಕಸ್ತೂರ್ಬಾ ಗಾಂಧಿ ಮಾರ್ಗ ಮತ್ತು ಮಧ್ಯ ದೆಹಲಿಯ ಆಫ್ರಿಕಾ ಅವೆನ್ಯೂದಲ್ಲಿನ ಎರಡು ಸಂಕೀರ್ಣಗಳನ್ನು ಹೊಂದಿದ್ದು, ಸುಮಾರು ಏಳು ಸಾವಿರ ಅಧಿಕಾರಿಗಳಿಗೆ ಕಾರ್ಯ ನಿರ್ವಹಿಸಲು ಸಹಕಾರಿಯಾಗಿದೆ. ರಾಷ್ಟ್ರದ ಸಶಸ್ತ್ರ ಪಡೆಗಳಿಗೆ "ಅತ್ಯುನ್ನತ ಆದ್ಯತೆ ಮತ್ತು ಗೌರವ" ನೀಡುವುದನ್ನು ಪ್ರತಿಬಿಂಬಿಸುತ್ತದೆ ಎಂದು ಕೂಡಾ ಇದೇ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಉಲ್ಲೇಖ ಮಾಡಿದ್ದಾರೆ. ಹಳೆಯ ಕಚೇರಿಯು ಸುಮಾರು 700 ಕೊಠಡಿಯನ್ನು ಹೊಂದಿದ್ದು, 50 ಎಕರೆ ಪ್ರದೇಶವನ್ನು ವಿಸ್ತರಿಸಿದೆ. ಈಗ ಮತ್ತೆ ಕಾರ್ಯನಿರ್ವಾಹಕ ಕಚೇರಿಯಾಗಿ ಮರು ಅಭಿವೃದ್ದಿ ಮಾಡಲಾಗುತ್ತದೆ. ಇದರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಹೊಸ ನಿವಾಸವೂ ಇರಲಿದೆ.

'ಪ್ರಧಾನಿ ಹೆಸರಲ್ಲಿ ಪ್ರಚಾರ ಮಾಡುತ್ತೇವೆ': ಬಿಜೆಪಿಯನ್ನು ಅಣಕಿಸಿದ ಟಿಕಾಯತ್‌'ಪ್ರಧಾನಿ ಹೆಸರಲ್ಲಿ ಪ್ರಚಾರ ಮಾಡುತ್ತೇವೆ': ಬಿಜೆಪಿಯನ್ನು ಅಣಕಿಸಿದ ಟಿಕಾಯತ್‌

"ಎರಡನೇ ವಿಶ್ವ ಯುದ್ದದ ಸಂದರ್ಭದ ಕಚೇರಿಯಲ್ಲಿ ಈಗಲೂ ರಕ್ಷಣಾ ಸಚಿವಾಲಯವು ಇರುವುದು ನನಗೆ ಆಶ್ಚರ್ಯವನ್ನು ಉಂಟು ಮಾಡಿದೆ. ಇದು ನನಗೆ ಈಗಲೂ ಕುದುರೆ ಹಾಗೂ ಅಶ್ವಶಾಲೆಗಳನ್ನು ನನ್ನ ಮನಸ್ಸಿನಲ್ಲೇ ಇರುವಂತೆ ಮಾಡಿದೆ. ಈ ರೀತಿ ಅತೀ ಮುಖ್ಯವಾದ ಸಚಿವಾಲಯವು ಹಳೆಯ ಕಟ್ಟಡದಲ್ಲೇ ಇರಲು ಹೇಗೆ ಸಾಧ್ಯ ಎಂದು ನನಗೆ ಆಶ್ಚರ್ಯವಾಗಿದೆ," ಎಂದು ಪ್ರಧಾನಿ ಮೋದಿ ವಿವರಿಸಿದ್ದಾರೆ. "ಈ ಹೊಸ ರಕ್ಷಣಾ ಸಚಿವಾಲಯವು ದೆಹಲಿಯಲ್ಲಿ ಹೊಸ, ಆಧುನಿಕ ರಕ್ಷಣಾ ಸಚಿವಾಲಯ ನಿರ್ಮಾಣಕ್ಕೆ ಹಾಕಿದ ನಾಂದಿಯಾಗಿದೆ. ನಮ್ಮ ರಕ್ಷಣಾ ವ್ಯವಸ್ಥೆಯು ಹೆಚ್ಚು ಸದೃಢವಾಗಿ, ಶಸ್ತ್ರ ಸಜ್ಜಿತವಾಗಿ ಕಾರ್ಯ ನಿರ್ವಹಿಸಲು ಬೇಕಾದ ಎಲ್ಲಾ ಆಧುನಿಕ ಬದಲಾವಣೆಗಳನ್ನು ನಮ್ಮ ಸರ್ಕಾರ ಮಾಡಲಿದೆ," ಎಂದು ಭರವಸೆ ನೀಡಿದರು.

"ಇವೆಲ್ಲವೂ ಕೂಡಾ ಸೆಂಟ್ರಲ್‌ ವಿಸ್ತಾ ಯೋಜನೆಯ ಭಾಗವಾಗಿದೆ. ಆದರೆ ಈ ಸಂದರ್ಭದಲ್ಲಿ ಸುಳ್ಳು ಮಾಹಿತಿಯನ್ನು ಹರಡುವುದನ್ನು ನಾವು ಅನುಮತಿಸಲಾಗದು. ಈ ಸೆಂಟ್ರಲ್‌ ವಿಸ್ತಾ ಯೋಜನೆಯ ಅಡಿಯಲ್ಲಿ ಪ್ರಮುಖ ಕಾರ್ಯವನ್ನು ಮಾಡಲಾಗಿದೆ ಎಂದು ನಿಮಗೆ ಈಗ ತಿಳಿಯುತ್ತದೆ," ಎಂದು ಮೋದಿ ಹೇಳಿದರು.

(ಒನ್‌ ಇಂಡಿಯಾ ಸುದ್ದಿ)

English summary
Prime minister Narendra Modi Slams Central Vista Critics As He Inaugurates New Defence Offices.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X