ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿ ಮೋದಿಗೆ ರಾಖಿ ಕಳುಹಿಸಿದ ಖಮರ್ ಮೊಹ್ಸಿನ್ ಶೇಖ್

|
Google Oneindia Kannada News

ನವದೆಹಲಿ, ಆಗಸ್ಟ್ 01: ಪ್ರಧಾನಿ ನರೇಂದ್ರ ಮೋದಿಗೆ ಪಾಕಿಸ್ತಾನ ಮೂಲದ ಸೋದರಿ ಖಮರ್ ಮೊಹ್ಸಿನ್ ಶೇಖ್ ರಾಖಿ ಕಳುಹಿಸಿ ರಕ್ಷಾ ಬಂಧನದ ಶುಭಾಶಯ ತಿಳಿಸಿದ್ದಾರೆ.

ಆಗಸ್ಟ್ 3 ರಂದು ಸೋಮವಾರ ರಕ್ಷಾ ಬಂಧನ ಇರುವುದರಿಂದ ನರೇಂದ್ರ ಮೋದಿಯವರಿಗೆ ಅನೇಕ ಮಂದಿ ಸೋದರಿಯರು ರಾಖಿ ಕಟ್ಟುತ್ತಾರೆ, ಆದರೆ ಇವರು ಪಾಕಿಸ್ತಾನ ಮೂಲದ ಮುಸ್ಲಿಂ ಮಹಿಳೆ ಖಮರ್ ಮೊಹ್ಸಿನ್ ಶೇಖ್. ಕೊವಿಡ್-19 ಸಮಯದಲ್ಲಿ ದೆಹಲಿಗೆ ಖುದ್ದಾಗಿ ಬಂದು ರಾಖಿ ಕಟ್ಟಲು ಸಾಧ್ಯವಿಲ್ಲ ಎಂದು ಈ ಮಹಿಳೆ ಪೋಸ್ಟ್ ಮೂಲಕ ರಾಖಿಯನ್ನು ಮೋದಿಯವರಿಗೆ ಕಳುಹಿಸಿದ್ದಾರೆ.

ಪಾಕಿಸ್ತಾನ ಮೂಲದವರಾದ ಶೇಖ್ ಮದುವೆಯಾದ ನಂತರ ಗುಜರಾತ್ ರಾಜ್ಯದ ಅಹಮದಾಬಾದ್ ನಲ್ಲಿ ನೆಲೆಸಿದ್ದಾರೆ. ಮೋದಿಯವರ ಜೊತೆ ಅವರು ಈ ಬಾರಿ 25ನೇ ವರ್ಷದ ರಾಖಿ ಹಬ್ಬ ಆಚರಿಸುತ್ತಿದ್ದಾರೆ.

PM Modis Rakhi Sister Sends Him Rakhi

ಎಎನ್ ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಶೇಖ್, ಮೋದಿಯವರನ್ನು ನಾನು 30-35 ವರ್ಷಗಳಿಂದ ಗೊತ್ತಿದೆ. ನಾನು ಅವರನ್ನು ಮೊದಲ ಬಾರಿಗೆ ದೆಹಲಿಯಲ್ಲಿ ಭೇಟಿ ಮಾಡಿದ್ದಾಗ ನಾನು ಕರಾಚಿಯಿಂದ ಬಂದವಳು, ಮದುವೆಯಾಗಿ ಇಲ್ಲಿ ಬಂದು ನೆಲೆಸಿದ್ದೇನೆ ಎಂದು ಪರಿಚಯ ಮಾಡಿಕೊಂಡೆ. ಆಗಿನಿಂದ ನನ್ನನ್ನು ಅವರು ಬೆಹೆನ್(ಸೋದರಿ) ಎಂದು ಕರೆಯುತ್ತಾರೆ.

ನನಗೆ ಸ್ವಂತ ಸೋದರ ಇಲ್ಲ. ಎರಡು ಮೂರು ವರ್ಷ ಕಳೆದ ನಂತರ ಮತ್ತೆ ಅವರನ್ನು ನಾನು ದೆಹಲಿಯಲ್ಲಿ ರಕ್ಷಾ ಬಂಧನ ಸಮಯದಲ್ಲಿ ಭೇಟಿ ಮಾಡಿದೆ, ಆಗ ಅವರ ಕೈಗೆ ರಾಖಿ ಕಟ್ಟಿದೆ ಎಂದಿದ್ದಾರೆ.

ಕೊರೊನಾ ಇರುವ ಕಾರಣ ಈ ಬಾರಿ ದೆಹಲಿಗೆ ಹೋಗಲು ಸಾಧ್ಯವಾಗದೆ ಪೋಸ್ಟ್ ಮೂಲಕ ರಾಖಿ ಕಳುಹಿಸಿದ್ದೇನೆ, ರಾಖಿ ಮತ್ತು ನಾನು ಕಳುಹಿಸಿರುವ ಪುಸ್ತಕ ಪ್ರಧಾನಿಗೆ ತಲುಪಿದೆ ಎಂದು ತಿಳಿದುಬಂದಿದೆ ಎಂದರು.

ಒಂದು ಬಾರಿ ರಕ್ಷಾ ಬಂಧನ ಸಮಯದಲ್ಲಿ ನೀವು ಗುಜರಾತ್ ಗೆ ಬರಬೇಕು, ನಮಗೆ ಮುಖ್ಯಮಂತ್ರಿಯಾಗಬೇಕು ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ ಎಂದು ಹೇಳಿದ್ದೆ. ಆಗ ಅವರು ನಕ್ಕರು, ನಂತರ ಗುಜರಾತ್ ಮುಖ್ಯಮಂತ್ರಿ ಕೂಡ ಆದರು. ಮತ್ತೊಂದು ರಕ್ಷಾಬಂಧನ ದಿನ ನನ್ನ ಪ್ರಾರ್ಥನೆಯನ್ನು ದೇವರು ಕೇಳುತ್ತಾರೆ ಎಂದೆ, ನಂತರ ಅವರು ಪ್ರಧಾನಿ ಕೂಡ ಆದರು.

English summary
Ahead of the auspicious occasion of Raksha Bandhan, Prime Minister Narendra Modi's 'rakhi sister' Qamar Mohsin Shaikh would not be able to meet him amid COVID-19 crisis, so she has sent the sacred thread--Rakhi to him via post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X