ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಪ್ರಧಾನಿ ಮೋದಿಗೆ ರಾಖಿ ಕಳುಹಿಸಿದ ಪಾಕಿಸ್ತಾನದ ಸಹೋದರಿ

|
Google Oneindia Kannada News

ನವದೆಹಲಿ, ಆಗಸ್ಟ್07: ರಕ್ಷಾ ಬಂಧನದ ಶುಭ ಸಂದರ್ಭದ ಮುನ್ನ, ಪ್ರಧಾನಿ ನರೇಂದ್ರ ಮೋದಿ ಅವರ ಪಾಕಿಸ್ತಾನಿ ಸಹೋದರಿ ಕಮರ್ ಮೊಹ್ಸಿನ್ ಶೇಖ್ ಅವರು ಪ್ರಧಾನಿಯವರಿಗೆ ರಾಖಿ ಕಳುಹಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಿದ್ದಾರೆ. ಜೊತೆಗೆ 2024 ರ ಸಾರ್ವತ್ರಿಕ ಚುನಾವಣೆಗೆ ಶುಭ ಹಾರೈಸಿ ಪತ್ರವನ್ನು ಬರೆದಿದ್ದಾರೆ.

ಈ ವರ್ಷ ಇಡಿ ರೇಡ್ ಆದ ದೊಡ್ಡದೊಡ್ಡವರು; ಜಪ್ತಿಯಾದ ಹಣ ಸಿಕ್ಕಾಪಟ್ಟೆಈ ವರ್ಷ ಇಡಿ ರೇಡ್ ಆದ ದೊಡ್ಡದೊಡ್ಡವರು; ಜಪ್ತಿಯಾದ ಹಣ ಸಿಕ್ಕಾಪಟ್ಟೆ

ತಾನು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಈ ಬಾರಿ ಮೋದಿ ಅವರನ್ನು ಭೇಟಿಯಾಗುವ ನಿರೀಕ್ಷೆಯಿದೆ ಎಂದೂ ಕಮರ್ ಮೊಹ್ಸಿನ್ ಶೇಖ್ ಹೇಳಿದ್ದಾರೆ.

PM Modis Pakistani Sister Sends Rakhi, wishes for 2024 Lok Sabha election

"ಈ ಬಾರಿ ಅವರು (ಪ್ರಧಾನಿ ಮೋದಿ) ನನ್ನನ್ನು ದೆಹಲಿಗೆ ಕರೆಯುತ್ತಾರೆ ಎಂದು ನಾನು ಭಾವಿಸಿದ್ದೇನೆ. ನಾನು ಎಲ್ಲಾ ಸಿದ್ಧತೆಗಳನ್ನು ಮಾಡಿದ್ದೇನೆ. ಕಸೂತಿ ವಿನ್ಯಾಸದೊಂದಿಗೆ ರೇಶ್ಮಿ ರಿಬ್ಬನ್ ಬಳಸಿ ನಾನೇ ಈ ರಾಖಿಯನ್ನು ತಯಾರಿಸಿದ್ದೇನೆ" ಎಂದು ಹೇಳಿದ್ದಾರೆ.

ಮುಂದುವರೆದು, "ನನಗೆ ಯಾವುದೇ ಸಂದೇಹವಿಲ್ಲ, ಅವರು ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ. ಅವರು ಇದಕ್ಕೆ ಅರ್ಹರು. ಅವರು ಆ ಸಾಮರ್ಥ್ಯಗಳನ್ನು ಹೊಂದಿದ್ದಾರೆ. ಅವರು ಪ್ರತಿ ಬಾರಿಯೂ ಭಾರತದ ಪ್ರಧಾನಿಯಾಗಬೇಕೆಂದು ನಾನು ಬಯಸುತ್ತೇನೆ" ಎಂದಿದ್ದಾರೆ.

ಪಾಕಿಸ್ತಾನಿ ಸಹೋದರಿ ಕಮರ್ ಮೊಹ್ಸಿನ್ ಶೇಖ್ ಪ್ರತಿ ವರ್ಷ ಪ್ರಧಾನಿ ನರೇಂದ್ರ ಮೋದಿಗೆ ರಾಖಿ ಮತ್ತು ರಕ್ಷಾ ಬಂಧನ ಪತ್ರ ಕಳುಹಿಸುತ್ತಿದ್ದಾರೆ.

PM Modis Pakistani Sister Sends Rakhi, wishes for 2024 Lok Sabha election

ಪಾಕಿಸ್ತಾನ ಮೂಲದವರಾದ ಕಮರ್ ಮೊಹ್ಸಿನ್ ಶೇಖ್ ಮದುವೆಯ ನಂತರ ಪಾಕಿಸ್ತಾನದಿಂದ ಭಾರತಕ್ಕೆ ಬಂದಿದ್ದರು. ಅಲ್ಲಿಂದ ಭಾರತದಲ್ಲೇ ವಾಸಿಸುತ್ತಿದ್ದಾರೆ. 24 ರಿಂದ 25 ವರ್ಷಗಳಿಂದ ಮೋದಿ ಅವರಿಗೆ ರಾಖಿ ಕಟ್ಟುತ್ತಿದ್ದೇನೆ ಎಂದು ಪಾಕಿಸ್ತಾನಿ ಮೂಲದ ಮಹಿಳೆ ಹೇಳಿದ್ದಾರೆ. ತಾನು ಮೊದಲ ಬಾರಿಗೆ ನರೇಂದ್ರ ಮೋದಿ ಆರ್‌ಎಸ್‌ಎಸ್ ಕಾರ್ಯಕರ್ತರಾಗಿದ್ದಾಗ ಎಂದು ಹೇಳಿದ್ದಾರೆ.

ರಾಖಿ ನಂಬಿಕೆ, ಪ್ರೀತಿ, ಮಾತುಗಳ ಹಬ್ಬ ಮತ್ತು ಪ್ರತಿ ಕ್ಷಣವೂ ಒಟ್ಟಿಗೆ ಇರುವ ಹಬ್ಬ. ಸಹೋದರಿಯರು ತಮ್ಮ ಸಹೋದರನ ಕೈಗೆ ಕೇವಲ ರಾಖಿ ದಾರವನ್ನು ಕಟ್ಟುವುದಿಲ್ಲ. ಆದರೆ ಇದರೊಂದಿಗೆ ಅವರು ತಮ್ಮ ಸಹೋದರನ ಕಡೆಗೆ ತಮ್ಮ ನಂಬಿಕೆ ಮತ್ತು ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಪ್ರತಿಯಾಗಿ ಸಹೋದರನು ಯಾವುದೇ ಪರಿಸ್ಥಿತಿಯಲ್ಲಿ ಅವನನ್ನು ರಕ್ಷಿಸುವ ಭರವಸೆ ನೀಡುತ್ತಾನೆ.

English summary
PM Modi's Pakistani sister Qamar Mohsin Shaikh sends rakhi, wishes him for good health and 2024 Lok Sabha elections. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X