ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿವಿ ನರಸಿಂಹರಾವ್ ಜನ್ಮದಿನ: ಟ್ವಿಟ್ಟರ್ ಮೂಲಕ ಸ್ಮರಿಸಿದ ಮೋದಿ

|
Google Oneindia Kannada News

Recommended Video

ಪಿ ವಿ ನರಸಿಂಹ ರಾವ್ ರನ್ನ ಟ್ವಿಟ್ಟರ್ ನಲ್ಲಿ ಸ್ಮರಿಸಿದ ನರೇಂದ್ರ ಮೋದಿ | Oneindia kannada

ನವದೆಹಲಿ, ಜೂನ್ 28: ಮಾಜಿ ಪ್ರಧಾನಿ ಪಿ ವಿ ನರಸಿಂಹರಾವ್ ಅವರ 97 ನೇ ಜನ್ಮದಿನದ ನಿಮಿತ್ತ (28 ಜೂನ್ 1921 - 23 ಡಿಸೆಂಬರ್ 2004) ಅವರನ್ನು ಪ್ರಧಾನಿ ನರೇಂದ್ರ ಮೋದಿ ಸ್ಮರಿಸಿದರು.

ಭಾರತದ ಇತಿಹಾಸದಲ್ಲಿ ಬಹಳ ಸಂಕಷ್ಟದ ಸಮಯಗಳಲ್ಲೂ ತಮ್ಮ ನಾಯಕತ್ವದಿಂದ ಸಮರ್ಥವಾಗಿ ಆಡಳಿತ ನಡೆಸಿದ ನರಸಿಂಹರಾವ್ ಅವರನ್ನು ಮೊದಿ ಟ್ವಿಟ್ಟರ್ ಮೂಲಕ ಹಾಡಿ ಹೊಗಳಿದರು.

PM Modi remembers PV Narasimha Rao on his birth anniversary

ಬಾಬ್ರಿ ಮಸೀದಿ ಧ್ವಂಸವಾದಾಗ ಅಂದಿನ ಪ್ರಧಾನಿ ಏನ್ಮಾಡ್ತಿದ್ರು?ಬಾಬ್ರಿ ಮಸೀದಿ ಧ್ವಂಸವಾದಾಗ ಅಂದಿನ ಪ್ರಧಾನಿ ಏನ್ಮಾಡ್ತಿದ್ರು?

"ಮಾಜಿ ಪ್ರಧಾನಿ ಪಿವಿ ನರಸಿಂಹ ರಾವ್ ಅವರನ್ನು ಅವರ ಜನ್ಮದಿನದಂದು ನೆನೆಯುತ್ತೇನೆ, ಬಹಳ ಸಂಕಷ್ಟದ ದಿನಗಳಲ್ಲೂ ತಮ್ಮ ಸಮರ್ಥ ನಾಯಕತ್ವದ ಮೂಲಕ ದೇಶವನ್ನು ಮುನ್ನಡೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅತ್ಯುತ್ತಮ ಬುದ್ಧಿಮತ್ತೆ, ಅಸಾಧಾರಣ ಪಾಂಡಿತ್ಯದಿಂದ ಅವರು ಇತಿಹಾಸದಲ್ಲಿ ಅಚ್ಚೊತ್ತಿದ್ದಾರೆ" ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ನರಸಿಂಹ ರಾವ್ ಅವರು ಪ್ರಧಾನಿಯಾಗಿದ್ದಾಗ ಬಾಬ್ರಿ ಮಸೀದಿ ಮತ್ತು ರಾಮಜನ್ಮಭೂಮಿ ವಿವಾದ ಉತ್ತುಂಗದಲ್ಲಿತ್ತು. ಈ ಎಲ್ಲ ಕಠಿಣ ಸಮಸ್ಯೆಗಳನ್ನೂ ನಾಜೂಕಾಗಿ ನಿಭಾಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.

ಇಂದಿನ ತೆಲಂಗಾಣ ರಾಜ್ಯದ ಲಕ್ನೇಪಳ್ಳಿ ಎಂಬಲ್ಲಿ ಜನಿಸಿದ ನರಸಿಂಹರಾವ್, ಭಾರತದ 9 ನೇ ಪ್ರಧಾನಿಯಾಗಿ 1991 ರಿಂದ 1996ರವರೆಗೆ ಕಾರ್ಯನಿರ್ವಹಿಸಿದ್ದರು.

English summary
Prime Minister Narendra Modi on Thursday remembered former Prime Minister PV Narasimha Rao on the occasion of his 97th birth anniversary.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X