ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿದ್ಧಗಂಗಾ ಶ್ರೀಗಳಿಗೆ ಜನ್ಮದಿನದಂದು ಮೋದಿ ಅಕ್ಷರ ನಮನ

|
Google Oneindia Kannada News

ನವದೆಹಲಿ, ಏಪ್ರಿಲ್ 01: ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ(1 ಏಪ್ರಿಲ್ 1907 - 21 ಜನವರಿ 2019) ಯವರ ಜನ್ಮದಿನಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡುವ ಮೂಲಕ ಸ್ವಾಮೀಜಿಯವರಿಗೆ ನುಡಿನಮನ ಸಲ್ಲಿಸಿದ್ದಾರೆ.

"ಡಾ.ಶ್ರೀ ಶ್ರೀ ಶಿವಕುಮಾರ ಸ್ವಾಮಿ ಅವರು ಕೋಟ್ಯಂತರ ಜನರ ಮನಸು, ಹೃದಯಗಳಲ್ಲಿ ಉಸಿರಾಡುತ್ತಲೇ ಇದ್ದಾರೆ. ಈ ದಿನ ಅವರ ಜನ್ಮ ದಿನ. ಇಂಥ ಸಂದರ್ಭದಲ್ಲಿ ಅವರನ್ನು ಆತ್ಮಪೂರ್ವಕವಾಗಿ ಸ್ಮರಣೆ ಮಾಡುತ್ತೇನೆ. ಸಿದ್ದಗಂಗಾ ಮಠದ ಮೂಲಕ ಹತ್ತಾರು ಲಕ್ಷ ಮಂದಿಯ ಬದುಕಿಗೆ ಬೆಳಕಾದ, ನಿಸ್ವಾರ್ಥ ಸೇವೆ ಸಲ್ಲಿಸಿದ ಮಹಾನ್ ಚೇತನ ಶಿವಕುಮಾರ ಸ್ವಾಮಿಗಳು.

ವರ್ಷದ ಮೊದಲ ಮನ್ ಕೀ ಬಾತ್ ನಲ್ಲಿ ಶಿವಕುಮಾರ ಸ್ವಾಮೀಜಿ, ನೇತಾಜಿಯನ್ನು ನೆನೆದ ಮೋದಿವರ್ಷದ ಮೊದಲ ಮನ್ ಕೀ ಬಾತ್ ನಲ್ಲಿ ಶಿವಕುಮಾರ ಸ್ವಾಮೀಜಿ, ನೇತಾಜಿಯನ್ನು ನೆನೆದ ಮೋದಿ

ಬಡತನ- ಹಸಿವು ಹೋಗಲಾಡಿಸಲು, ಜನರಿಗೆ ಉತ್ತಮ ಆರೋಗ್ಯ, ಶಿಕ್ಷಣ ದೊರೆಯಲು ಅವರು ಮಾಡಿದ ಸೇವೆ ಅನುಪಮವಾದದ್ದು, ಅನರ್ಘ್ಯವಾದದ್ದು.

PM Modi remembers and pays tribute to Sri Shivakumara Swami on his birthday

ಆ ಅದ್ಭುತ ಚೇತನಕ್ಕೆ ಮತ್ತೊಮ್ಮೆ ಶಿರ ಬಾಗಿ ನಮಿಸುತ್ತೇನೆ"

ಎಂದು ಮೋದಿ ಟ್ವೀಟ್ ಮಾಡಿದ್ದು, ಶ್ರೀಗಳ ಸಾಮಾಜಿಕ ಕೊಡುಗೆಯನ್ನು ಸ್ಮರಿಸಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

111 ವರ್ಷ ವಯಸ್ಸಿನ ಶ್ರೀಗಳು ವಯೋಸಹಜ ಅನಾರೋಗ್ಯದಿಂದ ಜ.21 ರಂದು ಇಹಲೋಕ ತ್ಯಜಿಸಿದ್ದರು. ಶ್ರಿಗಳ ಅಗಲಿಕೆಗೆ ಸಂತಾಪ ಸೂಚಿಸಿ ಮೋದಿಯವರು ಅಂದೂ ಸಾಲು ಸಾಲು ಟ್ವೀಟ್ ಮಾಡಿದ್ದರಾದರೂ, ಅಂತಿಮ ದರ್ಶನಕ್ಕೆ ಬರಲಿಲ್ಲ ಎಂಬುದು ಸಾಕಷ್ಟು ಚರ್ಚೆಗೊಳಗಾಗಿತ್ತು. ಅಲ್ಲದೆ, ಶ್ರೀಗಳಿಗೆ ಮರಣೋತ್ತರ ಭಾರತ ರತ್ನ ನೀಡಬಹುದು ಎಂಬ ಊಹೆಯೂ ಸುಳ್ಳಾಗಿದ್ದರಿಂದ ಶ್ರೀಗಳ ಅಭಿಮಾನಿಗಳು ಮೋದಿ ಸರ್ಕಾರದ ವಿರುದ್ಧ ಹರಿಯಾಯ್ದಿದ್ದರು.

English summary
PM Narendra Modi pays tribute to Sri Shivakumara Swami of Siddaganga Mutt, Tumakuru for his 112th birthday. The sait passed away earlier this year
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X