• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೇರಳದಲ್ಲಿ ಕೊರೊನಾವೈರಸ್ ಲಸಿಕೆ ಬಳಕೆ ಬಗ್ಗೆ ಪ್ರಧಾನಿ ಮೋದಿ ಪ್ರಶಂಸೆ

|

ನವದೆಹಲಿ, ಮೇ 05: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ನಿಯಂತ್ರಿಸುವುದಕ್ಕೆ ಸಹಕಾರಿ ಆಗಿರುವ ಲಸಿಕೆಯನ್ನು ವ್ಯರ್ಥವಾಗಿ ಹಾನಿ ಮಾಡದೇ ಸದುಪಯೋಗಪಡಿಸಿಕೊಂಡ ಕೇರಳದ ಆರೋಗ್ಯ ಕಾರ್ಯಕರ್ತರು, ನರ್ಸ್ ಹಾಗೂ ವೈದ್ಯರ ಬಗ್ಗೆ ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ದೇಶಾದ್ಯಂತ ಒಂದು ಕಡೆಯಲ್ಲಿ ಕೊರೊನಾವೈರಸ್ ಲಸಿಕೆಯ ಕೊರತೆ ಎದುರಾಗುತ್ತಿದೆ. ಇನ್ನೊಂದು ಕಡೆಯಲ್ಲಿ ಕೊವಿಡ್-19 ಸೋಂಕಿನ ಲಸಿಕೆಯನ್ನು ವ್ಯರ್ಥವಾಗಿ ಹಾನಿ ಮಾಡಲಾಗುತ್ತಿದೆ. ಇಂಥ ಸಂದಿಗ್ಧ ಸ್ಥಿತಿಯಲ್ಲಿ ಲಸಿಕೆಯನ್ನು ವ್ಯರ್ಥಗೊಳಿಸದೇ ಸರಿಯಾಗಿ ಉಪಯೋಗಿಸಿಕೊಳ್ಳುವುದಕ್ಕೆ ಕೇರಳದ ವೈದ್ಯರೇ ಸಾಕ್ಷಿ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಕೇರಳ ಸಿಎಂ ಪಿಣರಾಯಿ ವಿಜಯನ್ ಟ್ವೀಟ್:

ಕೇರಳದಲ್ಲಿ 73,38,806 ಡೋಸ್ ಕೊರೊನಾವೈರಸ್ ಲಸಿಕೆಯನ್ನು ಗೋಐನಿಂದ ಪಡೆಯಲಾಗಿದೆ. ಆದರೆ ಇದರ ಹೊರತಾಗಿ ರಾಜ್ಯದಲ್ಲಿ ನಾವು 74,26,164 ಡೋಸ್‌ಗಳನ್ನು ಕೊವಿಡ್-19 ಲಸಿಕೆಯನ್ನು ನೀಡಿದ್ದೇವೆ. ಹೆಚ್ಚುವರಿ ಲಸಿಕೆ ಬಾಟಲಿಯನ್ನು ವ್ಯರ್ಥವಾಗದಂತೆ ಬಳಸಿಕೊಳ್ಳಲಾಗಿದೆ. ಈ ವಿಷಯದಲ್ಲಿ ನಮ್ಮ ಆರೋಗ್ಯ ಕಾರ್ಯಕರ್ತರು, ವಿಶೇಷವಾಗಿ ದಾದಿಯರ ದಕ್ಷ ಕಾರ್ಯವನ್ನು ನಾನು ಹೃದಯಪೂರ್ವಕವಾಗಿ ಮೆಚ್ಚುಗೆ ವ್ಯಕ್ತಪಡಿಸುತ್ತೇನೆ ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಟ್ವೀಟ್ ಮಾಡಿದ್ದಾರೆ

ಭಾರತದಲ್ಲಿ ಎಷ್ಟು ಕೊರೊನಾವೈರಸ್ ಲಸಿಕೆ ವ್ಯರ್ಥ?:

ಕೊವಿಡ್-19 ಲಸಿಕೆ ಸರಬರಾಜು ಹಾಗೂ ವಿತರಣೆ ಸಂದರ್ಭದಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಪಾಲನೆ ಮಾಡಬೇಕಿರುತ್ತದೆ. ಒಂದು ಲಸಿಕೆಯ ಬಾಟಲಿಯನ್ನು ತೆರೆದ ನಂತರ 2 ಗಂಟೆಗಳಲ್ಲೇ ಅದನ್ನು ಸಂಪೂರ್ಣವಾಗಿ ವಿತರಣೆ ಮಾಡಬೇಕು. ಇಲ್ಲದಿದ್ದರೆ ಮತ್ತೊಮ್ಮೆ ಆ ಲಸಿಕೆಯನ್ನು ಬಳಸಿಕೊಳ್ಳುವುದುಕ್ಕೆ ಬರುವುದಿಲ್ಲ. ಈ ನಿಯಮಗಳ ಪಾಲನೆಯಲ್ಲಿ ಎಡವಿದ ರಾಜ್ಯಗಳಲ್ಲಿ ಅತಿಹೆಚ್ಚು ಲಸಿಕೆಯು ವಿತರಣೆಯಾಗದೇ ವ್ಯರ್ಥವಾಗಿದೆ. ಲಕ್ಷದ್ವೀಪ, ತಮಿಳುನಾಡು, ಅಸ್ಸಾಂ, ಮಣಿಪುರ, ಹರಿಯಾಣ, ದಾದ್ರಾ ಮತ್ತು ನಗರ್, ಪಂಜಾಬ್, ಬಿಹಾರ, ನಾಗಾಲ್ಯಾಂಡ್ ಮತ್ತು ಮೇಘಾಲಯದಲ್ಲಿ ಎಷ್ಟು ಪ್ರಮಾಣದ ಲಸಿಕೆ ವ್ಯರ್ಥವಾಗಿದೆ ಎನ್ನುವುದರ ನೀಲನಕ್ಷೆ ಇಲ್ಲಿದೆ ನೋಡಿ.

English summary
PM Modi Praises Kerala Healthcare Workers And Nurses For Reducing Covid-19 Vaccine Waste.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X