ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆ ಅಭೂತಪೂರ್ವ ಕ್ಷಣಕ್ಕೆ ಅಭಿನಂದನೆ ಸಲ್ಲಿಸಿದ ದಿಗ್ಗಜರು...

|
Google Oneindia Kannada News

ನವದೆಹಲಿ, ಡಿಸೆಂಬರ್ 05: ಭಾರತದ ಅಸ್ಮಿತೆಯ ಸಂಕೇತವಾಗಿ ಬುಧವಾರ ಬೆಳಗ್ಗೆ ಜಿಸ್ಯಾಟ್ 11 ಎಂಬ ಉಪಗ್ರಹ ನಭಕ್ಕೆ ಹಾರುತ್ತಿದ್ದಂತೆಯೇ ಇಸ್ರೋದ ಸಹಸ್ರಾರು ಸಿಬ್ಬಂದಿಯಲ್ಲಿ ಸಾರ್ಥಕ ಭಾವ..! ಆ ಅಭೂತಪೂರ್ವ ಕ್ಷಣವನ್ನು ದೂರದರ್ಶನ ನೇರಪ್ರಸಾರ ಮಾಡುತ್ತಿದ್ದರೆ ವೀಕ್ಷಕರ ಮನಸ್ಸಲ್ಲಿ ರೋಮಾಂಚನ!

ಹೌದು, ಭಾರತದ ಬಾಹ್ಯಾಕಾಶ ಲೋಕದ ಕ್ರಾಂತಿ ಎಂದೇ ಕರೆಯಬಹುದಾದ ಜಿ ಸ್ಯಾಟ್ 11 ಉಪಗ್ರಹವನ್ನು ಇಂದು ಫ್ರಾನ್ಸ್ ನ ಜಿಯಾನಾದ ಕೌರೌ ನಲ್ಲಿರುವ ಏರಿಯನ್ ಲಾಂಚ್ ಕಾಂಪ್ಲೆಕ್ಸ್ ನಲ್ಲಿ ಉಡ್ಡಯನ ಮಾಡಲಾಗಿದೆ. ಭಾರತೀಯ ಅಂತರ್ಜಾಲ ಕ್ಷೇತ್ರದಲ್ಲಿ ಮಹತ್ವದ ಕ್ರಾಂತಿ ಎಬ್ಬಿಸಲಿರುವ ಜಿ ಸ್ಯಾಟ್-11 ಉಪಗ್ರಹ ಉಡ್ಡಯನವನ್ನು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಮುಖಂಡರು ಅಭಿನಂದಿಸಿದ್ದಾರೆ.

ದೇಶದ ಮೂಲೆ ಮೂಲೆಗೂ ಇಂಟರ್ನೆಟ್... ಇದು ಜಿಸ್ಯಾಟ್-11 ಕ್ರಾಂತಿ!ದೇಶದ ಮೂಲೆ ಮೂಲೆಗೂ ಇಂಟರ್ನೆಟ್... ಇದು ಜಿಸ್ಯಾಟ್-11 ಕ್ರಾಂತಿ!

5870 ಕೆಜಿ ತೂಗುವ ಈ ಉಪಗ್ರಹ ಸೆಕೆಂಡಿಗೆ 16 ಜಿಬಿ ಡೆಟಾ ಲಿಂಕ್ ಸರ್ವಿಸ್ ನೀಡಲು ಸಮರ್ಥವಾಗಿದೆ.

ನರೇಂದ್ರ ಮೋದಿ

"ಭಾರತದ ಮೂಲೆ ಮೂಲೆಗೂ ತಲುಪಿ ಕೋಟ್ಯಂತರ ಜನರ ನಡುವೆ ಸಸಂಪರ್ಕ ಬೆಸೆಯಲಿರುವ ಈ ಬಾಹ್ಯಾಕಾಶ ಯೋಜನೆ ಒಂದು ಮೈಲಿಗಲ್ಲು. ಭಾರತದ ಅತ್ಯಂತ ಭಾರದ ಮತ್ತು ಆಧುನಿಕ ತಂತ್ರಜ್ಞಾನದ ಜಿಸ್ಯಾಟ್-11 ಅನ್ನು ಉಡಾವಣೆ ಮಾಡಿದ ಇಸ್ರೋ ತಂಡಕ್ಕೆ ಅಭಿನಂದನೆಗಳು" ಎಂದು ಪ್ರಧಾನಿ ನರೇಂದ್ರ ಮೊದಿ ಅವರು ಟ್ವೀಟ್ ಮಾಡಿದ್ದಾರೆ.

Array

ಪಿಯೂಶ್ ಗೋಯಲ್

ಭಾರತದ ದೂರ ದುರದ ಹಳ್ಳಿಗೂ ಅಂತರ್ಜಾಲ ಸಂಪರ್ಕ ನೀಡಬಲ್ಲ, ಡಿಜಿಟಲ್ ಇಂಡಿಯಾಕ್ಕೆ ಒತ್ತು ನೀಡಬಲ್ಲ ಭಾರತದ ಅತ್ಯಂತ ಶಕ್ತಿಯುತ ಉಪಗ್ರಹವಾದ ಜಿಸ್ಯಾಟ್ ಅನ್ನು ಉಡ್ಡಯನ ಮಾಡಿದ ಇಸ್ರೋನ ಎಲ್ಲ ವಿಜ್ಞಾನಿಗಳಿಗೆ, ಇಂಜಿನಿಯರ್ ಗಳಿಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು ಎಂದು ರೈಲ್ವೇ ಸಚಿವ ಪಿಯೂಶಶ್ ಗೋಯಲ್ ಟ್ವೀಟ್ ಮಾಡಿದ್ದಾರೆ.

ಫ್ರಾನ್ಸ್ ನಲ್ಲಿ ಭಾರತದ ಜಿಸ್ಯಾಟ್- 11 ಉಪಗ್ರಹ ಯಶಸ್ವೀ ಉಡಾವಣೆಫ್ರಾನ್ಸ್ ನಲ್ಲಿ ಭಾರತದ ಜಿಸ್ಯಾಟ್- 11 ಉಪಗ್ರಹ ಯಶಸ್ವೀ ಉಡಾವಣೆ

ಸುದರ್ಶನ್ ಪಟ್ನಾಯಕ್

"ಅತ್ಯಂತ ಭಾರದ, ಅತ್ಯಾಧುನಿಕ ಜಿಸ್ಯಾಟ್ ಉಪಗ್ರಹವನ್ನು ಉಡಾವಣೆ ಮಾಡಿದ ಇಸ್ರೋಕ್ಕೆ ಅಭಿನಂದನೆಗಳು" ಎಂದು ತಮ್ಮ ಮರಳು ಶಿಲ್ಪದ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ ಖ್ಯಾತ ಮರಳುಶಿಲ್ಪಿ ಸುದರ್ಶನ್ ಪಟ್ನಾಯಕ್.

ಧರ್ಮೇಂದ್ರ ಪ್ರಧಾನ

ದೇಶದ ಸಂವಹನ ಕ್ಷೇತ್ರದಲ್ಲಿ ಮಹತ್ವದ ಪಾತ್ರ ವಹಿಸಲಿರುವ ಜಿಸ್ಯಾಟ್ ಉಪಗ್ರಹ ಉಡಾವಣೆ ಮಾಡಿದ ಇಸ್ರೋಕ್ಕೆ ಅಭಿನಂದನೆಗಳು ಎಂದಿದ್ದಾರೆ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್.

English summary
India's heaviest satellite GSAT-11, successfully launched in Guiana in France. Many leaders including PM Narendra Modi congratulate ISRO for this revolutionary work.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X