• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪ್ರಧಾನಿ ಮೋದಿಯಿಂದ ವಂದೇ ಭಾರತ್ ಎಕ್ಸ್ ಪ್ರೆಸ್ ಗೆ ಹಸಿರು ನಿಶಾನೆ

|

ನವದೆಹಲಿ, ಫೆಬ್ರವರಿ 15: ಸ್ವದೇಶಿ ನಿರ್ಮಿತ, ಭಾರತದ ಅತ್ಯಂತ ವೇಗವಾಗಿ ಚಲಿಸುವ 'ಇಂಜಿನ್ ರಹಿತ' ರೈಲು ಟ್ರೇನ್ ವಂದೇ ಭಾರತ್ ಏಕ್ಸ್ ಪ್ರೆಸ್(ಟ್ರೇನ್ 18) ಗೆ ಪ್ರಧಾನಿ ಮೋದಿ ಅವರು ಫೆಬ್ರವರಿ 15ರಂದು ಅಧಿಕೃತವಾಗಿ ಹಸಿರು ನಿಶಾನೆ ನೀಡಿದರು. ಪಲ್ವಾಮಾದಲ್ಲಿ ಹುತಾತ್ಮರಾದ ಯೋಧರಿಗಾಗಿ ಮೌನಾಚರಣೆ ಮಾಡಿ ನಂತರ ಭಾಷಣ ಮಾಡಿದರು.

ನವದೆಹಲಿಯಿಂದ ವಾರಾಣಸಿಗೆ ಹಾಗೂ ವಾರಾಣಸಿಯಿಂದ ನವದೆಹಲಿಗೆ ಪ್ರಯಾಣಿಸುವ ಜನರ ಬಹು ದಿನದ ಬೇಡಿಕೆಯನ್ನು ಮೋದಿ ಸರ್ಕಾರ ಈಡೇರಿಸಿದೆ. ಫೆಬ್ರವರಿ 15ರಂದು ವಂದೇ ಭಾರತ್ ಎಕ್ಸ್ ಪ್ರೆಸ್ ಕಾರ್ಯ ನಿರ್ವಹಿಸಲಿದೆ. ಈ ಬಹು ನಿರೀಕ್ಷಿತ ರೈಲಿನಲ್ಲಿ ಗತಿಮಾನ್ ಎಕ್ಸ್ ಪ್ರೆಸ್ ಮಾದರಿ ಸೌಲಭ್ಯಗಳನ್ನು ಅಳವಡಿಸಲು ಭಾರತೀಯ ರೈಲ್ವೆ ಕೇಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (ಐಆರ್‌ಸಿಟಿಸಿ) ನಿರ್ಧರಿಸಿದೆ.

ವಂದೇ ಭಾರತ್ ಎಕ್ಸ್ ಪ್ರೆಸ್ ನಲ್ಲಿ ಏನಿದೆ ಅಂಥ ವಿಶೇಷ? ವಂದೇ ಭಾರತ್ ಎಕ್ಸ್ ಪ್ರೆಸ್ ನಲ್ಲಿ ಏನಿದೆ ಅಂಥ ವಿಶೇಷ?

16 ಬೋಗಿಗಳುಳ್ಳ ಈ ರೈಲು ನಿರ್ಮಾಣಕ್ಕೆ 18 ತಿಂಗಳು ಸಮಯ ಹಿಡಿದಿದೆ. ಇನ್ನು 97 ಕೋಟಿ ರುಪಾಯಿ ವೆಚ್ಚವಾಗಿದೆ. ರಾಯ್ ಬರೇಲಿಯಲ್ಲಿ ಇರುವ ಇಂಟಿಗ್ರಲ್ ಬೋಗಿ ಕಾರ್ಖಾನೆಯಲ್ಲಿ ಇದರ ನಿರ್ಮಾಣವಾಗಿದೆ. 30 ವರ್ಷಗಳ ಹಿಂದಿನ ಶತಾಬ್ದಿ ಎಕ್ಸ್ ಪ್ರೆಸ್ ನ ಮುಂದಿನ ಹಂತದ ರೈಲು ಇದಾಗಿದೆ.

ಹಳಿ ಮೇಲೆ ವಂದೇ ಭಾರತ್ ಎಕ್ಸ್ ಪ್ರೆಸ್ ಪಯಣ

30 ವರ್ಷಗಳ ಹಳೆಯ ಶತಾಬ್ದಿ ರೈಲುಗಳಿಗೆ ಹೋಲಿಸಿದರೆ, ಈ ರೈಲು ಪ್ರಯಾಣದ ಸಮಯವನ್ನು ಶೇ.15ರಷ್ಟು ಇಳಿಕೆ ಮಾಡಲಿದೆ. ಟ್ರೈನ್ - 18 ಎರಡು ಚಾಲನೆ ಮೂತಿ ಹೊಂದಿರುವ ಬೋಗಿಗಳನ್ನು ಹೊಂದಿರಲಿದೆ. ಚಾಲಕನ ಕ್ಯಾಬಿನ್ ಚೂಪು ಮೂತಿಯದ್ದಾಗಿರಲಿದೆ. ರೈಲ್ವೆ ಇಲಾಖೆ ಮುಂದಿನ ಹಂತದಲ್ಲಿ ಟ್ರೈನ್ - 20 ಕಡೆ ಗಮನ ಹರಿಸಲಿದೆ. ಇದು ಮುಂದಿನ ಪೀಳಿಗೆಯ ರೈಲಾಗಿದ್ದು, ರಾಜಧಾನಿ ಎಕ್ಸ್ ಪ್ರೆಸ್ ಗಳ ಜಾಗದಲ್ಲಿ ಕಾರ್ಯ ನಿರ್ವಹಿಸಲಿವೆ. ಇವು 2020ರ ವೇಳೆಗೆ ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ.

ಹುತಾತ್ಮರನ್ನು ಸ್ಮರಿಸಿದ ಪ್ರಧಾನಿ ಮೋದಿ

ಪುಲ್ವಾಮಾದಲ್ಲಿ ಹುತಾತ್ಮರಾದವನ್ನು ಸ್ಮರಿಸಿ, ಅವರ ತ್ಯಾಗ ಬಲಿದಾನ ವ್ಯರ್ಥವಾಗದಂತೆ ನಾವು ನೋಡಿಕೊಳ್ಳಬೇಕಿದೆ. ಉಗ್ರರಿಗೆ ತಕ್ಕ ಉತ್ತರ ನೀಡುವ ಕಾಲ ಬಂದಿದೆ. ಅಭಿವೃಧಿ ಪಥದಲ್ಲಿರುವ ಭಾರತವನ್ನು ತಡೆಯಲು ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ ಎಂದರು.

ವಂದೇ ಭಾರತ್ ಎಕ್ಸ್ ಪ್ರೆಸ್ ಮೆನು : ಮಫಿನ್, ಡೊನಟ್ಸ್, ಫೈವ್ ಸ್ಟಾರ್ ಡಿನ್ನರ್! ವಂದೇ ಭಾರತ್ ಎಕ್ಸ್ ಪ್ರೆಸ್ ಮೆನು : ಮಫಿನ್, ಡೊನಟ್ಸ್, ಫೈವ್ ಸ್ಟಾರ್ ಡಿನ್ನರ್!

ವಂದೇ ಭಾರತ್ ಎಕ್ಸ್ ಪ್ರೆಸ್ ವಿಶೇಷ

ವಂದೇ ಭಾರತ್ ಎಕ್ಸ್ ಪ್ರೆಸ್ ವಿಶೇಷ

16 ಎಸಿ ಬೋಗಿಗಳು, 2 ಎಕ್ಸ್ ಕ್ಯುಟಿವ್ ಬೋಗಿಗಳಿವೆ. ಡೈವಿಂಗ್ ಬೋಗಿಯಲ್ಲಿ 44 ಸೀಟುಗಳಿದ್ದರೆ, ಟ್ರೇಲರ್ ಬೋಗಿಯಲ್ಲಿ 78 ಸೀಟುಗಳಿವೆ. ಎಕ್ಸ್ ಕ್ಯುಟಿವ್ ಛೇರ್ ಕಾರ್ ನಲ್ಲಿ 52 ಸೀಟುಗಳಿವೆ. ರೈಲಿನ ಗರಿಷ್ಠ ವೇಗ ಗಂಟೆಗೆ 220 ಕಿ.ಮೀ. ಪರೀಕ್ಷಾರ್ಥವಾಗಿ 160 ಕಿ.ಮೀ. ಪ್ರಯತ್ನಿಸಲಾಗುತ್ತದೆ. ಶತಾಬ್ದಿ ಅಥವಾ ರಾಜಧಾನಿ ಎಕ್ಸ್ ಪ್ರೆಸ್ ಗಿಂತ ಇದರ ವೇಗ ಶೇಕಡಾ 10ರಿಂದ 15ರಷ್ಟು ಹೆಚ್ಚು. ಅಂದಹಾಗೆ ಈ ರೈಲು ಲೋಕೋಮೋಟಿವ್ ಅಲ್ಲ ಎಂಬುದು ಗಮನಿಸಬೇಕಾದ ಅಂಶ. ಯಂತ್ರಗಳ ಸಹಾಯದಿಂದ ಚಲಿಸುತ್ತದೆ.

ಎಕ್ಸ್ ಪ್ರೆಸ್ ರೈಲಿನ ಸಮಯ

ಎಕ್ಸ್ ಪ್ರೆಸ್ ರೈಲಿನ ಸಮಯ

ವಂದೇ ಭಾರತ ರೈಲು ನವದೆಹಲಿ ಮತ್ತು ವಾರಾಣಸಿ ನಡುವೆ ಶನಿವಾರದಿಂದ ದಿನನಿತ್ಯ ಸಂಚರಿಸಲಿದೆ. ಬೆಳಗ್ಗೆ 6 ಗಂಟೆಗೆ ದೆಹಲಿಯಿಂದ ಹೊರಟು ಮಧ್ಯಾಹ್ನ 2 ಗಂಟೆಗೆ ವಾರಾಣಸಿ ತಲುಪಲಿದೆ. ಮಧ್ಯಾಹ್ನ 3 ಗಂಟೆಗೆ ವಾರಾಣಸಿಯಿಂದ ಹೊರಟು ರಾತ್ರಿ 11 ಗಂಟೆಗೆ ನವದೆಹಲಿ ತಲುಪಲಿದೆ. ಮಾರ್ಗ ಮಧ್ಯದಲ್ಲಿ ಕಾನ್ಪುರ ಮತ್ತು ಪ್ರಯಾಗ್​ರಾಜ್​ಗಳಲ್ಲಿ ನಿಲುಗಡೆ ನೀಡಲಿದೆ.

ಎಕ್ಸ್ ಪ್ರೆಸ್ ರೈಲಿನಲ್ಲಿ ಫೈವ್ ಸ್ಟಾರ್ ಊಟ

ಎಕ್ಸ್ ಪ್ರೆಸ್ ರೈಲಿನಲ್ಲಿ ಫೈವ್ ಸ್ಟಾರ್ ಊಟ

ನವದೆಹಲಿಯಿಂದ ವಾರಣಾಸಿಗೆ ಎಕ್ಸಿಕ್ಯೂಟಿವ್ ಶ್ರೇಣಿಯ ರೈಲು ಪ್ರಯಾಣದಲ್ಲಿ ಬೆಳಗ್ಗೆ ಚಹಾ ಸೇವನೆ, ಉಪಹಾರಾ ಹಾಗೂ ಲಂಚ್ ಪ್ಯಾಕೇಜಿಗೆ 399 ರು ನಿಗದಿಯಾಗಿದೆ. ಚೇರ್ ಕ್ಲಾಸ್ ನಲ್ಲಿ ಪ್ರಯಾಣಿಸುವವರು ಇದೇ ಪ್ಯಾಕೇಜಿಗೆ 344ರು ನೀಡಬೇಕಾಗುತ್ತದೆ. ರಿಟರ್ನ್ ಜರ್ನಿಯಲ್ಲಿ ಕ್ರಮವಾಗಿ ಈ ಪ್ಯಾಕೇಜಿಗೆ 349 ರು ಹಾಗೂ 288 ರು ನಿಗದಿಯಾಗಿದೆ.

English summary
PM Modi today(Feb 15) launched India's first semi-high speed train on Friday. The express, initially called Train 18, which was rechristened to Vande Bharat Express will run between Delhi and Varanasi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X