ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಜ್ವಲ ಯೋಜನೆ ಫಲಾನುಭವಿಗಳೊಂದಿಗೆ ಮೋದಿ ಸಂವಾದ

|
Google Oneindia Kannada News

ನವದೆಹಲಿ, ಮೇ 28: "ಕಳೆದ ನಾಲ್ಕು ವರ್ಷಗಳಲ್ಲಿ ಉಜ್ವಲ ಯೋಜನೆಯ ಮೂಲಕ ಬಿಜೆಪಿ ಸರ್ಕಾರ 10 ಕೋಟಿ ಮನೆಗಳಿಗೆ ಎಲ್ ಪಿಜಿ ಸಂಪರ್ಕ ಒದಗಿಸಿದೆ. ಹಿಂದಿನ ಸರ್ಕಾರಕ್ಕೆ ದಶಕಗಳ ಕಾಲವೂ ಮಾಡಲಾಗದ ಸಾಧನೆಯನ್ನು ಎನ್ ಡಿಎ ಸರ್ಕಾರ ಮಾಡಿದೆ" ಎಂದು ಪ್ರಧಾನಿ ನರೇಂದ್ರ ಮೊದಿ ಹೇಳಿದ್ದಾರೆ.

ಮಹಿಳೆಯರು ಮತ್ತು ಮಕ್ಕಳ ಆರೋಗ್ಯಕ್ಕಾಗಿ ಸ್ವಚ್ಛ ಅಡಿಗೆ ಅನಿಲ ಒದಗಿಸುವ ಸರ್ಕಾರದ ಉಜ್ವಲ ಯೋಜನೆಯ ಫಲಾನುಭವಿಗಳೊಂದಿಗೆ ತಮ್ಮ ನಮೋ app ಮೂಲಕ ಇಂದು ಪ್ರಧಾನಿ ಮೋದಿ ಸಂವಾದ ನಡೆಸಿದರು.

ಮೋದಿ ಸರ್ಕಾರಕ್ಕೆ 4ರ ಸಂಭ್ರಮ, ಟಾಪ್ 15ಯೋಜನೆಗಳುಮೋದಿ ಸರ್ಕಾರಕ್ಕೆ 4ರ ಸಂಭ್ರಮ, ಟಾಪ್ 15ಯೋಜನೆಗಳು

ಉಜ್ವಲ ಯೋಜನೆ ಸಮಾಜಿಕ ಸಬಲೀಕರಣದತ್ತ ಇಟ್ಟ ದಿಟ್ಟ ಹೆಜ್ಜೆ ಎಂದು ಅವರು ಬಣ್ಣಿಸಿದರು. ದೇಶದ ಹಲವು ಜನರ ಮೇಲೆ ಉಜ್ವಲ ಯೋಜನೆ ಪರಿಣಾಮ ಬೀರಿದೆ. ಇದು ಭಾರತದ ಮಹಿಳಾ ಶಕ್ತಿಗೆ ಮತ್ತಷ್ಟು ಬಲ ನೀಡಿದೆ ಎಂದು ಅವರು ಹೇಳಿದರು.

PM Modi interacts with beneficiaries of Ujjwala Yojana

"ಎಲ್ ಪಿಜಿ ಸಂಪರ್ಕ ಎಂಬುದು ಕೇವಲ ದಲಿತರ ಸ್ವತ್ತು ಎಂಬ ಕಾಲ ದಲಾಗಿದೆ. 2014 ರವರೆಗೆ ಕೇವಲ 13 ಕೋಟಿ ಕುಟುಂಬಗಳು ಮಾತ್ರ ಎಲ್ ಪಿಜಿ ಸಂಪರ್ಕ ಹೊಂದಿದ್ದವು. ಆದರೆ ಕಳೆದ ನಾಲ್ಕು ವರ್ಷಗಳಲ್ಲಿ 10 ಕೋಟಿಗೂ ಅಧಿಕ ಕುಟುಂಬ ಹೊಸದಾಗಿ ಎಲ್ ಪಿಜಿ ಸಂಪರ್ಕ ಪಡೆದಿದೆ" ಎಂದು ಅವರು ಹೆಮ್ಮೆ ವ್ಯಕ್ತಪಡಿಸಿದರು.

ಉಜ್ವಲ ಯೋಜನೆಯನ್ನು ಮೇ 1, 2016 ರಲ್ಲಿ ಮೋದಿಯವರು ಉತ್ತರ ಪ್ರದೇಶದಲ್ಲಿ ಬಿಡುಗಡೆಗೊಳಿಸಿದರು. ಈ ಯೋಜನೆಯಡಿಯಲ್ಲಿ ಬಡತನ ರೇಖೆಗಿಂತ ಕೆಳಗಿರುವ 5 ಕೋಟಿಗೂ ಹೆಚ್ಚು ಕುಟುಂಬಗಳಿಗೆ ಅಡಿಗೆ ಅನಿಲ ಸಂಪರ್ಕ ನೀದಲಾಗಿದೆ.

ಮೇ 27 ರಂದು ನರೇಂದ್ರ ಮೊದಿ ನೇತ್ರತ್ವದ ಎನ್ ಡಿಎ ಸರ್ಕಾರ ನಾಲ್ಕು ವರ್ಷ ಪೂರೈಸಿದ್ದು, ಈ ಸಂದರ್ಭದಲ್ಲಿ ಸರ್ಕಾರದ ಯೋಜನೆಗಳ ಕುರಿತು ಚರ್ಚೆ ನಡೆಸಲಾಗುತ್ತಿದೆ.

English summary
Prime Minister Narendra Modi on Monday said that the Bharatiya Janata Party Government (BJP) under Ujjwala Yojana provided LPGconnections to 10 Crore households in the span of four years, a task which the previous government could not achieve in decades.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X