ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಂದೇ ಭಾರತ್ ಎಕ್ಸ್ ಪ್ರೆಸ್ ಗೆ ಫೆ.15ರಂದು ಮೋದಿಯಿಂದ ಹಸಿರು ನಿಶಾನೆ

|
Google Oneindia Kannada News

ನವದೆಹಲಿ, ಫೆಬ್ರವರಿ 07: ಸ್ವದೇಶಿ ನಿರ್ಮಿತ, ಭಾರತದ ಅತ್ಯಂತ ವೇಗವಾಗಿ ಚಲಿಸುವ ಇಂಜಿನ್ ರಹಿತ ರೈಲು ಟ್ರೇನ್ 18 ಈಗ ವಂದೇ ಭಾರತ್ ಎಕ್ಸ್ ಪ್ರೆಸ್ ಎಂಬ ಹೆಸರು ಪಡೆದುಕೊಂಡಿದೆ. ಬಹು ನಿರೀಕ್ಷಿತ ಈ ರೈಲಿಗೆ ಪ್ರಧಾನಿ ಮೋದಿ ಅವರು ಫೆಬ್ರವರಿ 15ರಂದು ಹಸಿರು ನಿಶಾನೆ ತೋರಲಿದ್ದಾರೆ.

ನವದೆಹಲಿಯಿಂದ ವಾರಾಣಸಿಗೆ ಹಾಗೂ ವಾರಾಣಸಿಯಿಂದ ನವದೆಹಲಿಗೆ ಪ್ರಯಾಣಿಸುವ ಜನರ ಬಹು ದಿನದ ಬೇಡಿಕೆಯನ್ನು ಮೋದಿ ಸರ್ಕಾರ ಈಡೇರಿಸುತ್ತಿದ್ದು, ಫೆಬ್ರವರಿ 15ರಂದು ವಂದೇ ಭಾರತ್ ಎಕ್ಸ್ ಪ್ರೆಸ್ ಕಾರ್ಯ ನಿರ್ವಹಿಸಲಿದೆ. ನವದೆಹಲಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅದು ಬೆಳಗ್ಗೆ 10 ಗಂಟೆಗೆ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಲಿದ್ದಾರೆ.

ಗಂಟೆಗೆ 180 ಕಿ.ಮೀ. ವೇಗವಾಗಿ ಚಲಿಸಲು ಸಮರ್ಥವಾಗಿ ಹೊಂದಿದ್ದರೂ ಆರಂಭದಲ್ಲಿ ಈ ಎಕ್ಸ್ ಪ್ರೆಸ್ ವೇಗವನ್ನು ಪ್ರತಿ ಗಂಟೆಗೆ 130 ಕಿ.ಮೀ. ವೇಗಕ್ಕೆ ನಿಗದಿ ಪಡಿಸಲಾಗಿದೆ. ಈ ಮೂಲಕ ಸಂಚರಿಸಲಿದೆ. ದೆಹಲಿ ಮತ್ತು ವಾರಾಣಸಿ ನಡುವೆ ಇರುವ 770 ಕಿ.ಮೀ. ಅಂತರವನ್ನು 8 ಗಂಟೆಗಳಲ್ಲಿ ಕ್ರಮಿಸಬಹುದಾಗಿದೆ ಎಂದು ಭಾರತೀಯ ರೈಲ್ವೆ ಹೇಳಿದೆ.

ವಂದೇ ಭಾರತ ರೈಲು ನವದೆಹಲಿ ಮತ್ತು ವಾರಾಣಸಿ ನಡುವೆ ಶನಿವಾರದಿಂದ ದಿನನಿತ್ಯ ಸಂಚರಿಸಲಿದೆ. ಬೆಳಗ್ಗೆ 6 ಗಂಟೆಗೆ ದೆಹಲಿಯಿಂದ ಹೊರಟು ಮಧ್ಯಾಹ್ನ 2 ಗಂಟೆಗೆ ವಾರಾಣಸಿ ತಲುಪಲಿದೆ. ಮಧ್ಯಾಹ್ನ 3 ಗಂಟೆಗೆ ವಾರಾಣಸಿಯಿಂದ ಹೊರಟು ರಾತ್ರಿ 11 ಗಂಟೆಗೆ ನವದೆಹಲಿ ತಲುಪಲಿದೆ. ಮಾರ್ಗ ಮಧ್ಯದಲ್ಲಿ ಕಾನ್ಪುರ ಮತ್ತು ಪ್ರಯಾಗ್​ರಾಜ್​ಗಳಲ್ಲಿ ನಿಲುಗಡೆ ನೀಡಲಿದೆ.

ಭಾರತದ ಅತ್ಯಂತ ವೇಗದ ರೈಲಿನ ಹೆಸರು ವಂದೇ ಭಾರತ್ ಎಕ್ಸ್ ಪ್ರೆಸ್ ಭಾರತದ ಅತ್ಯಂತ ವೇಗದ ರೈಲಿನ ಹೆಸರು ವಂದೇ ಭಾರತ್ ಎಕ್ಸ್ ಪ್ರೆಸ್

16 ಬೋಗಿಗಳುಳ್ಳ ಈ ರೈಲು ನಿರ್ಮಾಣಕ್ಕೆ 18 ತಿಂಗಳು ಸಮಯ ಹಿಡಿದಿದೆ. ಇನ್ನು 97 ಕೋಟಿ ರುಪಾಯಿ ವೆಚ್ಚವಾಗಿದೆ. ರಾಯ್ ಬರೇಲಿಯಲ್ಲಿ ಇರುವ ಇಂಟಿಗ್ರಲ್ ಬೋಗಿ ಕಾರ್ಖಾನೆಯಲ್ಲಿ ಇದರ ನಿರ್ಮಾಣವಾಗಿದೆ. 30 ವರ್ಷಗಳ ಹಿಂದಿನ ಶತಾಬ್ದಿ ಎಕ್ಸ್ ಪ್ರೆಸ್ ನ ಮುಂದಿನ ಹಂತದ ರೈಲು ಇದೆ ಎನ್ನಲಾಗುತ್ತಿದೆ. ದೇಶದ ಮೊದಲ ಲೋಕೋಮೋಟಿವ್ ರಹಿತ ರೈಲು ಇದಾಗಿದೆ.

ಪೂರ್ತಿ ಹವಾನಿಯಂತ್ರಿತ ರೈಲಾದ ಇದು ಕಾನ್ಪುರ ಹಾಗೂ ಅಲಹಾಬಾದ್ ನಲ್ಲಿ ನಿಲುಗಡೆ ನೀಡಲಿದೆ. ರೈಲಿನಲ್ಲಿ ಎರಡು ಎಕ್ಸ್ ಕ್ಯುಟಿವ್ ಚೇರ್ ಕಾರ್ಸ್ ಇರಲಿದೆ.

ಸಿಂಗಲ್ ಇಂಜಿನ್ ರಹಿತ ಆದರೆ, ಹಲವು ಇಂಜಿನ್ ಸಹಿತ

ಸಿಂಗಲ್ ಇಂಜಿನ್ ರಹಿತ ಆದರೆ, ಹಲವು ಇಂಜಿನ್ ಸಹಿತ

ಇಲ್ಲಿ ತನಕ ಬಳಕೆಯಲ್ಲಿರುವ ರೈಲುಗಳಲ್ಲಿ ಸಿಂಗಲ್ ಇಂಜಿನ್(ಲೋಕೋಮೋಟಿವ್) ಹಲವು ಬೋಗಿ/ಕೋಚ್ ಗಳನ್ನು ಎಳೆದುಕೊಂಡು ಮುಂದಕ್ಕೆ ಸಾಗುತ್ತದೆ. ಈ ಇಂಜಿನ್ ಚಾಲನೆಗೆ ಡೀಸೆಲ್ ಅಥವಾ ಎಲೆಕ್ಟ್ರಿಸಿಟಿ ಅಗತ್ಯ. ಆದರೆ, ಟ್ರೇನ್18ನಲ್ಲಿ ಒಂದೇ ಇಂಜಿನ್ ಮೇಲೆ ಒತ್ತಡ ಹೇರುವುದಕ್ಕಿಂತ, ಪ್ರತಿ ಕೋಚ್ ಗಳಿಗೆ ಸ್ವಸಾಮರ್ಥ್ಯದಿಂದ ಚಲಿಸುವ ಶಕ್ತಿ ನೀಡಲಾಗಿದೆ.

ಈ ವ್ಯವಸ್ಥೆ ಎಲೆಕ್ಟ್ರಿಕ್ ಮಲ್ಟಿಪಲ್ ಯೂನಿಟ್ಸ್ (EMU) ಎಂದು ಕರೆಯಲಾಗುತ್ತದೆ. ಇದು ಹಾಲಿ ಎಲೆಕ್ಟ್ರಿಕ್ ರೈಲಿಗಿಂತ ಉತ್ತಮವಾಗಿದ್ದು, ಸಮರ್ಥವಾಗಿ ಬ್ರೇಕಿಂಗ್ ವ್ಯವಸ್ಥೆ ಹೊಂದಿದೆ. ಮೆಟ್ರೋ, ಸಬ್ ಅರ್ಬನ್ ರೈಲಿಗೆ ಸೀಮಿತವಾಗಿದ್ದ ಇಎಂಯುಗಳನ್ನು ಈಗ ದೂರಗಾಮಿ ಅತಿ ವೇಗದ ಚಾಲನೆಗೆ ಸಿದ್ಧಪಡಿಸಲಾಗಿದೆ.

ಶತಾಬ್ದಿಗೆ ಸೆಡ್ಡು ಹೊಡೆಯಲು ಹಳಿಗಿಳಿದ ಇಂಜಿನ್ ರಹಿತ 'ಟ್ರೈನ್ 18' ಶತಾಬ್ದಿಗೆ ಸೆಡ್ಡು ಹೊಡೆಯಲು ಹಳಿಗಿಳಿದ ಇಂಜಿನ್ ರಹಿತ 'ಟ್ರೈನ್ 18'

ಸಂಪೂರ್ಣ ಸ್ವದೇಶಿ ನಿರ್ಮಿತ ರೈಲು

ಸಂಪೂರ್ಣ ಸ್ವದೇಶಿ ನಿರ್ಮಿತ ರೈಲು

ಸಂಪೂರ್ಣ ಹವಾನಿಯಂತ್ರಿತವಾಗಿರುವ ರೈಲು, ಸೂಕ್ತ ಮೂಲಭೂತ ಸೌಲಭ್ಯ ದೊರೆತರೆ ಅತ್ಯಂತ ವೇಗದ ರೈಲಾಗಲಿದೆ. 2019-20ರ ವೇಳೆಗೆ ಇನ್ನೂ ಐದು ರೈಲುಗಳನ್ನು ಇದೇ ಘಟಕದಲ್ಲಿ ಉತ್ಪಾದಿಸಲಾಗುವುದು ಎಂದು. ಐ.ಸಿ.ಎಫ್. ಕೇವಲ 18 ತಿಂಗಳಲ್ಲಿ ಉತ್ಪಾದನೆ ಪೂರ್ಣಗೊಳಿಸಿರುವುದು ನಮಗೆ ಹೆಮ್ಮೆ ತಂದಿದೆ ಎಂದು ಐಸಿಎಫ್ ಮುಖ್ಯಸ್ಥ ಅಶ್ವನಿ ಲೊಹಾನಿ ಹೇಳಿದ್ದಾರೆ.

ಪ್ರಯಾಣದ ಸಮಯ ಶೇ 15ರಷ್ಟು ಉಳಿತಾಯ

ಪ್ರಯಾಣದ ಸಮಯ ಶೇ 15ರಷ್ಟು ಉಳಿತಾಯ

30 ವರ್ಷಗಳ ಹಳೆಯ ಶತಾಬ್ದಿ ರೈಲುಗಳಿಗೆ ಹೋಲಿಸಿದರೆ, ಈ ರೈಲು ಪ್ರಯಾಣದ ಸಮಯವನ್ನು ಶೇ.15ರಷ್ಟು ಇಳಿಕೆ ಮಾಡಲಿದೆ. ಟ್ರೈನ್ - 18 ಎರಡು ಚಾಲನೆ ಮೂತಿ ಹೊಂದಿರುವ ಬೋಗಿಗಳನ್ನು ಹೊಂದಿರಲಿದೆ. ಚಾಲಕನ ಕ್ಯಾಬಿನ್ ಚೂಪು ಮೂತಿಯದ್ದಾಗಿರಲಿದೆ. ರೈಲ್ವೆ ಇಲಾಖೆ ಮುಂದಿನ ಹಂತದಲ್ಲಿ ಟ್ರೈನ್ - 20 ಕಡೆ ಗಮನ ಹರಿಸಲಿದೆ. ಇದು ಮುಂದಿನ ಪೀಳಿಗೆಯ ರೈಲಾಗಿದ್ದು, ರಾಜಧಾನಿ ಎಕ್ಸ್ ಪ್ರೆಸ್ ಗಳ ಜಾಗದಲ್ಲಿ ಕಾರ್ಯ ನಿರ್ವಹಿಸಲಿವೆ. ಇವು 2020ರ ವೇಳೆಗೆ ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ.

ಸ್ಪೇನಿನಿಂದ ಆಮದಾಗಿರುವ ಸೀಟುಗಳು

ಸ್ಪೇನಿನಿಂದ ಆಮದಾಗಿರುವ ಸೀಟುಗಳು

ಪ್ರತಿ ಬೋಗಿಯಲ್ಲೂ 6 ಸಿಸಿಟಿವಿ ಕ್ಯಾಮೆರಾ ಇರುತ್ತವೆ. ಡ್ರೈವರ್ ಬೋಗಿಯಿಂದ ಆಚೆಗೆ ಒಂದು ಸಿಸಿಟಿವಿ ಇದ್ದು, ಪ್ರಯಾಣಿಕರನ್ನು ಅದರ ಮೂಲಕ ನಿಗಾ ಮಾಡಬಹುದು. 360 ಡಿಗ್ರಿ ತಿರುಗುವ ಸೀಟುಗಳನ್ನು ಸ್ಪೇನ್ ನಿಂದ ಆಮದು ಮಾಡಿಕೊಳ್ಳಲಾಗಿದೆ. ಚಾಲಕರಿಗೆ ಟಾಕ್ ಬ್ಯಾಕ್ ವ್ಯವಸ್ಥೆಯಿದೆ. ಪ್ರತಿ ಕೋಚ್ ನಲ್ಲಿ ತುರ್ತು ಸ್ವಿಚ್ ಇದೆ. ಅಂಗವಿಕಲರಿಗಾಗಿ 2 ಶೌಚಾಲಯ ಮತ್ತು ಮಕ್ಕಳ ನಿಗಾಕ್ಕೆ ಪ್ರತ್ಯೇಕ ಸ್ಥಳವಿದೆ. ಆಹಾರ ವಸ್ತುಗಳನ್ನು ಇಡಲು ವಿಶೇಷ ವ್ಯವಸ್ಥೆ ಇರುತ್ತದೆ.

ವಂದೇ ಭಾರತ್ ಎಕ್ಸ್ ಪ್ರೆಸ್ ವಿಶೇಷ

ವಂದೇ ಭಾರತ್ ಎಕ್ಸ್ ಪ್ರೆಸ್ ವಿಶೇಷ

16 ಎಸಿ ಬೋಗಿಗಳು, 2 ಎಕ್ಸ್ ಕ್ಯುಟಿವ್ ಬೋಗಿಗಳಿವೆ. ಡೈವಿಂಗ್ ಬೋಗಿಯಲ್ಲಿ 44 ಸೀಟುಗಳಿದ್ದರೆ, ಟ್ರೇಲರ್ ಬೋಗಿಯಲ್ಲಿ 78 ಸೀಟುಗಳಿವೆ. ಎಕ್ಸ್ ಕ್ಯುಟಿವ್ ಛೇರ್ ಕಾರ್ ನಲ್ಲಿ 52 ಸೀಟುಗಳಿವೆ. ರೈಲಿನ ಗರಿಷ್ಠ ವೇಗ ಗಂಟೆಗೆ 220 ಕಿ.ಮೀ. ಪರೀಕ್ಷಾರ್ಥವಾಗಿ 160 ಕಿ.ಮೀ. ಪ್ರಯತ್ನಿಸಲಾಗುತ್ತದೆ. ಶತಾಬ್ದಿ ಅಥವಾ ರಾಜಧಾನಿ ಎಕ್ಸ್ ಪ್ರೆಸ್ ಗಿಂತ ಇದರ ವೇಗ ಶೇಕಡಾ 10ರಿಂದ 15ರಷ್ಟು ಹೆಚ್ಚು. ಅಂದಹಾಗೆ ಈ ರೈಲು ಲೋಕೋಮೋಟಿವ್ ಅಲ್ಲ ಎಂಬುದು ಗಮನಿಸಬೇಕಾದ ಅಂಶ. ಯಂತ್ರಗಳ ಸಹಾಯದಿಂದ ಚಲಿಸುತ್ತದೆ.

ದೇಶದ ಅತ್ಯಂತ ವೇಗದ ರೈಲು

ದೇಶದ ಅತ್ಯಂತ ವೇಗದ ರೈಲು

ದೆಹಲಿ-ಭೋಪಾಲ್, ಚೆನ್ನೈ-ಬೆಂಗಳೂರು, ಮುಂಬೈ-ಅಹಮದಾಬಾದ್ ಮಧ್ಯೆ ಟೈನ್ 18 ರೈಲು ಸಂಚರಿಸಲಿದೆ. 1988ರಿಂದ ಇಲ್ಲಿ ತನಕ ಇಂಟರ್ ಸಿಟಿಗಳ ಜೀವಾಳವಾಗಿರುವ ಶತಾಬ್ದಿ ಎಕ್ಸ್ ಪ್ರೆಸ್ ಕನಿಷ್ಟ 20 ಮಾರ್ಗಗಳಲ್ಲಿ ಸಂಚರಿಸುತ್ತಿದ್ದು, ಅನೇಕ ನಗರಗಳ ನಡುವಿನ ಕೊಂಡಿಯಾಗಿದೆ. ಈಗ ಟ್ರೈನ್ 18 ಹಾಗೂ ನಂತರ ಟ್ರೈನ್ 20 ಇದೆಲ್ಲವನ್ನು ಸಾಧಿಸಲಿದೆ.

ಟಿಕೆಟ್ ದರ ಎಷ್ಟಿದೆ?

ಟಿಕೆಟ್ ದರ ಎಷ್ಟಿದೆ?

* ವಾರಣಾಸಿಯಿಂದ ದೆಹಲಿಗೆ ಪ್ರಯಾಣಿಕರಿಗೆ 349ರು ಟಿಕೆಟ್ ದರ ನಿಗದಿಯಾಗಿದೆ. ಎಕ್ಸಿಕ್ಯೂಟಿವ್ ಕ್ಲಾಸ್ ಹಾಗೂ ಚೇರ್ ಗೆ 288ರು ದರ ಇದೆ. ಸಂಜೆ ಟೀ, ಕುರುಕಲು ತಿಂಡಿ ಹಾಗೂ ರಾತ್ರಿ ಊಟದ ಪ್ಯಾಕೇಜ್ ಇದೆ.

* ನವದೆಹಲಿಯಿಂದ ವಾರಣಾಸಿ ಎಕ್ಸಿಕ್ಯೂಟಿವ್ ಕ್ಲಾಸ್ : 399ರು, ಬೆಳಗ್ಗೆ ಟೀ, ತಿಂಡಿ, ಮಧ್ಯಾಹ್ನದ ಊಟ.
ಚೇರ್ ಕ್ಲಾಸ್: 344 ರು ಹಾಗೂ ಎಲ್ಲಾ ಪ್ಯಾಕೇಜ್.

English summary
rime Minister Narendra Modi will flag off the indigenously built Train 18, called the Vande Bharat Express, on February 15 from New Delhi, a Railway Ministry official said. Train 18, the country's first engine-less train manufactured by the Integral Coach Factory (ICF) in Chennai, will be flagged off at 10 am from the New Delhi railway station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X