ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಂಜಾನ್ ಪ್ರಯುಕ್ತ ದೇಶದ ಜನತೆಗೆ ಶುಭ ಹಾರೈಸಿದ ಮೋದಿ

|
Google Oneindia Kannada News

ದೆಹಲಿ ಮೇ 3: ಇಂದು ಮುಸ್ಲಿಂ ಬಾಂಧವರ ಪವಿತ್ರ ಹಬ್ಬ ರಂಜಾನ್ ಅನ್ನು ಎಲ್ಲೆಡೆ ಅತ್ಯಂತ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಗುತ್ತಿದೆ. ರಂಜಾನ್ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಜನತೆಗೆ ಶುಭ ಹಾರೈಸಿದ್ದಾರೆ. ಬಹುತೇಕ ಭಾಗಗಳಲ್ಲಿ ನಿನ್ನೆ ಚಂದ್ರನ ದರ್ಶನವಾಗಿದೆ. ಹೀಗಾಗಿ ಇಂದು ಈದ್-ಉಲ್-ಫಿತರ್ ಆಚರಿಸಲಾಗುತ್ತಿದೆ. ಕೆಲವೆಡೆ ನಿನ್ನೆ ರಂಜಾನ್ ಆಚರಿಸಲಾಗಿದೆ. ಮೋದಿ ಸೋಮವಾರ ಟ್ವೀಟ್ ಮಾಡುವ ಮೂಲಕ ಈದ್-ಉಲ್-ಫಿತರ್ ಪ್ರಯುಕ್ತ ಜನತೆಗೆ ಶುಭ ಹಾರೈಸಿದ್ದಾರೆ.

ಈ ಶುಭ ಸಂದರ್ಭವು ನಮ್ಮ ಸಮಾಜದಲ್ಲಿ ಒಗ್ಗಟ್ಟಿನ ಮತ್ತು ಸಹೋದರತ್ವದ ಮನೋಭಾವವನ್ನು ಹೆಚ್ಚಿಸಲಿ. ಎಲ್ಲರಿಗೂ ಉತ್ತಮ ಆರೋಗ್ಯ ಮತ್ತು ಸಮೃದ್ಧಿಯನ್ನು ನೀಡಲಿ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಬಾಲಿವುಡ್ ಹಿರಿಯ ನಟ ಅಮಿತಾ ಬಚ್ಚನ್ ಕೂಡ ರಂಜಾನ್ ಶುಭಾಶಯಗಳನ್ನು ತಿಳಿಸಿದ್ದಾರೆ. ಟ್ವೀಟ್ ಮೂಲಕ ತಮ್ಮ ಅಭಿಮಾನಿಗಳು ಮತ್ತು ಅನುಯಾಯಿಗಳಿಗೆ ಶುಭಾಶಯಗಳನ್ನು ಕೋರಿದರು.

PM Modi extended Eid-ul-Fitrs wishes to all fellow citizens

ಜೊತೆಗೆ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಎಲ್ಲರಿಗೂ ಈದ್ ಶುಭಾಶಯಗಳನ್ನು ಕೋರಿದ್ದಾರೆ. ಈದ್ ಮುಬಾರಕ್! ಈದ್ ಅಲ್-ಫಿತರ್ ಅನ್ನು ಆಚರಿಸುತ್ತಿರುವ ಎಲ್ಲಾ ಮುಸ್ಲಿಮರಿಗೆ ನಾನು ನನ್ನ ಆತ್ಮೀಯ ಶುಭಾಶಯಗಳನ್ನು ಕಳುಹಿಸುತ್ತಿದ್ದೇನೆ. ಒಂದು ತಿಂಗಳ ಪ್ರಾರ್ಥನೆ, ಉಪವಾಸದ ನಂತರ ನೀವು ಈ ಆಚರಣೆಯ ಸಮಯವನ್ನು ಆನಂದಿಸಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ಬರೆದಿದ್ದಾರೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಎಲ್ಲಾ ಸಹ ನಾಗರಿಕರಿಗೆ ಈದ್-ಉಲ್-ಫಿತರ್ ಶುಭಾಶಯಗಳನ್ನು ತಿಳಿಸಿದ್ದಾರೆ. "ಈದ್-ಉಲ್-ಫಿತರ್ ಸಂದರ್ಭದಲ್ಲಿ, ನಾನು ನನ್ನ ಎಲ್ಲಾ ಸಹ ನಾಗರಿಕರಿಗೆ, ವಿಶೇಷವಾಗಿ ನಮ್ಮ ಮುಸ್ಲಿಂ ಸಹೋದರ ಮತ್ತು ಸಹೋದರಿಯರಿಗೆ ನನ್ನ ಶುಭಾಶಯಗಳನ್ನು ಸಲ್ಲಿಸುತ್ತೇನೆ" ಎಂದು ಟ್ವೀಟ್ ಮಾಡಿದ್ದಾರೆ.

PM Modi extended Eid-ul-Fitrs wishes to all fellow citizens

"ರಂಜಾನ್ ತಿಂಗಳು ಮುಗಿಯುತ್ತಿದ್ದಂತೆ ಈದ್-ಉಲ್-ಫಿತರ್ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಬಡವರಿಗೆ ಆಹಾರ ಮತ್ತು ಆಹಾರ-ಧಾನ್ಯಗಳ ವಿತರಣೆಗೆ ವಿಶೇಷ ಪ್ರಾಮುಖ್ಯತೆ ನೀಡಲಾಗುತ್ತದೆ. ಈ ಹಬ್ಬವು ಸೌಹಾರ್ದಯುತ, ಶಾಂತಿಯುತ ಮತ್ತು ಸಮೃದ್ಧ ಸಮಾಜವನ್ನು ನಿರ್ಮಿಸಲು ಶ್ರಮಿಸಲು ಜನರನ್ನು ಪ್ರೇರೇಪಿಸುತ್ತದೆ. ಈದ್‌ನ ಶುಭ ಸಂದರ್ಭದಲ್ಲಿ, ಮಾನವೀಯತೆಯ ಸೇವೆಗೆ ನಮ್ಮನ್ನು ಮರು ಸಮರ್ಪಿಸಿಕೊಳ್ಳಲು ಮತ್ತು ಬಡವರು ಮತ್ತು ನಿರ್ಗತಿಕರ ಜೀವನವನ್ನು ಸುಧಾರಿಸಲು ನಾವು ಸಂಕಲ್ಪ ಮಾಡೋಣ" ಎಂದು ತಿಳಿಸಿದ್ದಾರೆ.

"ಈದ್ ಹಬ್ಬವನ್ನು ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಗುವುದು. ನಿಮ್ಮೆಲ್ಲರಿಗೂ ಈದ್ ಮುಬಾರಕ್" ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಜನರಿಗೆ ಶುಭ ಹಾರೈಸಿದ್ದಾರೆ.

Recommended Video

ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ರಂಜಾನ್ ಸಡಗರ ಹೇಗಿದೆ ನೋಡಿ.. | Oneindia Kannada

"ಈದ್ ಮುಬಾರಕ್! ಈ ಮಂಗಳಕರ ಹಬ್ಬ ನಿಮಗೆ ಪ್ರೀತಿಯ ಉತ್ಸಾಹವನ್ನು ತರಲಿ ಮತ್ತು ನಮ್ಮೆಲ್ಲರನ್ನು ಸಹೋದರತ್ವ ಮತ್ತು ಸಾಮರಸ್ಯದ ಬಾಂಧವ್ಯದಲ್ಲಿ ಒಂದುಗೂಡಿಸಲಿ" ಎಂದು ರಾಹುಲ್ ಗಾಂಧಿ ಈದ್ ಮುನ್ನಾದಿನದಂದು ಟ್ವೀಟ್ ಮಾಡಿದ್ದಾರೆ.

English summary
Prime Minister Narendra Modi extended his wishes to the people on the occasion of Eid-ul-Fitr.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X