ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೈಮ್ಸ್ ಸಮೂಹ ಅಧ್ಯಕ್ಷೆ ಇಂದೂ ಜೈನ್ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ

|
Google Oneindia Kannada News

ನವದೆಹಲಿ, ಮೇ 14: ಟೈಮ್ಸ್ ಗ್ರೂಪ್‌ನ ಅಧ್ಯಕ್ಷ ಇಂದೂ ಜೈನ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.

2016 ರಲ್ಲಿ ದೇಶದ ಮೂರನೇ ಅತ್ಯುನ್ನತ ನಾಗರಿಕ ಗೌರವ ಪದ್ಮವಿಭೂಷಣ ಅವರಿಗೆ ನೀಡಲಾಯಿತು. ಇಂದೂ ಜೈನ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.

ಸಂತಾಪ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಟೈಮ್ಸ್ ಗ್ರೂಪ್ ಅಧ್ಯಕ್ಷೆ ಶ್ರೀಮತಿ ಇಂದೂ ಜೈನ್‌ ಅವರ ನಿಧನದಿಂದ ಬೇಸರವಾಯಿತು. ಸಮಾಜ ಸೇವೆ, ಭಾರತದ ಪ್ರಗತಿಯ ಬಗೆಗಿನ ಅವರ ಉತ್ಸಾಹ ಮತ್ತು ನಮ್ಮ ಸಂಸ್ಕೃತಿಯ ಬಗೆಗಿನ ಆಳವಾದ ಆಸಕ್ತಿಯ ಕಾರಣಕ್ಕೆ ಅವರು ಯಾವತ್ತೂ ನೆನಪಿನಲ್ಲಿ ಉಳಿಯುತ್ತಾರೆ.

PM Modi Condoles Death Of Times Group Chairperson Indu Jain

ನಾನು ಅವರೊಂದಿಗಿನ ನನ್ನ ಸಂವಹನಗಳನ್ನು ನೆನಪಿಸಿಕೊಳ್ಳುತ್ತಿದ್ದೇನೆ. ಅವರ ಕುಟುಂಬಕ್ಕೆ ಸಂತಾಪಗಳು. ಓಂ ಶಾಂತಿ, ಎಂದಿದ್ದಾರೆ.

1999ರಲ್ಲಿ ಟೈಮ್ಸ್ ಗ್ರೂಪ್‌ನ ಅಧ್ಯಕ್ಷರಾದ ನಂತರ ಅವರು ಸಹಾನುಭೂತಿ ಮತ್ತು ಅಂತರ್ಗತತೆಯಿಂದ ಕೂಡಿದ ವಿಶಿಷ್ಟ ನಾಯಕತ್ವ ಶೈಲಿಯನ್ನು ವಿಕಸಿಸಿದರು. ಇದು ಟೈಮ್ಸ್‌ ಗ್ರೂಪ್‌ನ್ನು ಹೊಸ ಎತ್ತರಕ್ಕೇರಿಸಲು ಸಹಾಯ ಮಾಡಿತು. ಸುಸ್ಥಿರ ಅಭಿವೃದ್ಧಿ ಮತ್ತು ಪರಿವರ್ತನೆಯ ಬದಲಾವಣೆಯ ಗುರಿಯೊಂದಿಗೆ ಅವರು 2000ರಲ್ಲಿ ಟೈಮ್ಸ್ ಫೌಂಡೇಶನ್‌ನ್ನು ಸ್ಥಾಪಿಸಿದರು.

Recommended Video

ಟ್ರಂಪ್ ಕಟ್ಟಿದ್ದ ಗೋಡೆ ಕೆಡವಿ ಬಡವರ ಮನೆಗಳಿಗೆ 1 ಲಕ್ಷ ಕೊಟ್ಟ ಜೋ ಬಿಡೆನ್ | Oneindia Kannada

ಲೋಕೋಪಕಾರಿ ಚಟುವಟಿಕೆಗಳ ಟೈಮ್ಸ್ ಫೌಂಡೇಶನ್‌ನ ಸ್ಥಾಪಕರೂ ಆಗಿದ್ದ ಜೈನ್, ಮತ್ತು ಉದ್ಯಮದ ಲಾಬಿ ಎಫ್‌ಐಸಿಸಿಐನ ಮಹಿಳಾ ವಿಭಾಗವನ್ನು ಸ್ಥಾಪಿಸಿದರು.

English summary
Prime Minister Narendra Modi on Thursday expressed anguish at the death of Times Group Chairperson Indu Jain, and said she will be remembered for her community service initiatives, passion towards India's progress and deep-rooted interest in culture.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X