ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊದಲು 'ಮೋದಿ' ಸಿನಿಮಾ ನೋಡಿ, ಆಮೇಲೆ ನಿರ್ಧರಿಸಿ: ECಗೆ ಸುಪ್ರೀಂ ಸಲಹೆ

|
Google Oneindia Kannada News

ನವದೆಹಲಿ, ಏಪ್ರಿಲ್ 15: ಪ್ರಧಾನಿ ನರೇಂದ್ರ ಮೋದಿ ಅವರ ಜೀವನಾಧಾರಿತ ಚಲನಚಿತ್ರ "ಪಿಎಂ ನರೇಂದ್ರ ಮೋದಿ" ಬಿಡುಗಡೆಗೆ ವಿಧಿಸಿರುವ ತಡೆಯ ಬಗ್ಗೆ ಸುಪ್ರೀಂ ಕೋರ್ಟ್ ಇಂದು ವಿಚಾರಣೆ ನಡೆಸಿದೆ.

"ಮೊದಲು ಚಿತ್ರವನ್ನು ನೋಡಿ. ಅದರಲ್ಲಿ ಚುನಾವಣೆಯ ಮೇಲೆ ಪರಿಣಾಮ ಬೀರುವಂಥದ್ದು ಏನಾದರೂ ಇದ್ದರೆ ನಿಮ್ಮ ಅಂತಿಮ ನಿರ್ಧಾರವನ್ನು ಬರೆದು ಸೀಲ್ ಮಾಡಲಾದ ಲಕೋಟೆಯಲ್ಲಿ ನೀಡಿ" ಎಂದು ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ಸಲಹೆ ನೀಡಿದೆ.

'ಚೌಕಿದಾರ್ ಚೋರ್ ಹೈ' ಅಂದ ರಾಹುಲ್ ಗಾಂಧಿಗೆ ಸುಪ್ರೀಂಕೋರ್ಟ್ ನೋಟಿಸ್'ಚೌಕಿದಾರ್ ಚೋರ್ ಹೈ' ಅಂದ ರಾಹುಲ್ ಗಾಂಧಿಗೆ ಸುಪ್ರೀಂಕೋರ್ಟ್ ನೋಟಿಸ್

ಏಪ್ರಿಲ್ 22 ರ ವೊಳಗೆ ಸೀಲ್ ಮಾಡಿದ ಲಕೋಟೆಯನ್ನು ನೀಡಲು ಸುಪ್ರೀಂ ಕೋರ್ಟ್ ಗಡುವು ನೀಡಿದೆ. ಅದಕ್ಕೂ ಮುನ್ನ ಚಿತ್ರವನ್ನು ಬಿಡುಗಡೆ ಮಾಡುವಂತಿಲ್ಲ ಎಂದು ಸಹ ಅದು ಹೇಳಿದೆ.

PM Modi biopic controversy: SC directs EC to watch the movie first

ಈ ಚಿತ್ರವನ್ನು ಏಪ್ರಿಲ್ 05 ರಂದು ಬಿಡುಗಡೆ ಮಾಡಲು ಸಮಯ ನಿಗದಿ ಮಾಡಲಾಗಿತ್ತು. ಆದರೆ ಕಾಂಗ್ರೆಸ್ ಮತ್ತು ಎಡಪಕ್ಷಗಳು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಏಪ್ರಿಲ್ 12 ಕ್ಕೆ ಮುಂದೂಡಲಾಗಿತ್ತು.ನಂತರ ಚುನಾವಣಾ ಆಯೋಗ ಚಿತ್ರ ಬಿಡುಗಡೆಗೆ ತಡೆ ನೀಡಿತ್ತು.

ಈ ಚಿತ್ರದಲ್ಲಿ ನರೇಂದ್ರ ಮೋದಿ ಅವರ ಪಾತ್ರದಲ್ಲಿ ಬಾಲಿವುಡ್ ನಟ ವಿವೇಕ್ ಒಬೇರಾಯ್ ಅವರು ನಟಿಸಿದ್ದು, ಒಮಂಗ್ ಕುಮಾರ್ ಅವರು ಚಿತ್ರವನ್ನು ನಿರ್ದೇಶಿಸಿದ್ದಾರೆ. ಒಮಂಗ್ ಅವರ ಮೇರಿಕೋಮ್ ಮತ್ತು ರಸಬ್ಜಿತ್ ಚಿತ್ರಗಳು ಸಾಕಷ್ಟು ಸುದ್ದಿ ಮಾಡಿದ್ದವು. ಕಳೆದ 2018 ರಲ್ಲೇ ಚಿತ್ರದ ಚಿತ್ರೀಕರಣ ಆರಂಭವಾಗಿತ್ತು, ನರೇಂದ್ರ ಮೋದಿ ಆರೆಸ್ಸೆಸ್ ನ ಸಾಮಾನ್ಯ ಪ್ರಚಾರಕರಾಗಿ ನಂತರ ಪ್ರಧಾನಿ ಹುದ್ದೆಯವರೆಗೆ ಬೆಳೆದ ಹಾದಿಯನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ.

English summary
Supreme court on Monday which heard the plea against banning of PM Narendra Modi biopic by Election commission directed EC to watch movie first and submit its final decision in sealed envelope.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X