ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುವಕರಿಗೆ ಗೊತ್ತಿರಲಿ, ಈ ದೇಶದ ಪ್ರಧಾನಿ ಭ್ರಷ್ಟ: ರಾಹುಲ್ ಗಾಂಧಿ

|
Google Oneindia Kannada News

Recommended Video

ನರೇಂದ್ರ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರಾಹುಲ್ ಗಾಂಧಿ | Oneindia Kannada

ನವದೆಹಲಿ, ಅಕ್ಟೋಬರ್ 11: 'ಭಾರತದ ಯುವಕರಿಗೆ ನಾನು ಸ್ಪಷ್ಟವಾಗಿ ಹೇಳುವುದಿಷ್ಟೇ, ಈ ದೇಶದ ಪ್ರಧಾನಿ ಒಬ್ಬ ಭ್ರಷ್ಟ' ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.

ನವದೆಹಲಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಅವರು ರಫೇಲ್ ಡೀಲ್ ಕುರಿತಂತೆ ಮತ್ತೊಮ್ಮೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಕೇಂದ್ರ ಸರ್ಕಾರದ ಕೆಂಗಣ್ಣಿಗೆ ಗುರಿಯಾದ ಶೌರಿ, ಭೂಷಣ್ ಸಿಬಿಐ ಭೇಟಿ!ಕೇಂದ್ರ ಸರ್ಕಾರದ ಕೆಂಗಣ್ಣಿಗೆ ಗುರಿಯಾದ ಶೌರಿ, ಭೂಷಣ್ ಸಿಬಿಐ ಭೇಟಿ!

ತಾನು ಈ ದೇಶದ ಚೌಕಿದಾರ ಎಂದ ನರೇಂದ್ರ ಮೋದಿ ಅವರ ಒಂದೊಂದೇ ಹಗರಣಗಳು ಈಗ ಹೊರಬರುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಭಾರತದ ತಾಳಕ್ಕೆ ಕುಣಿವ ಡಸಾಲ್ಟ್

ಭಾರತದ ತಾಳಕ್ಕೆ ಕುಣಿವ ಡಸಾಲ್ಟ್

ಡಸಾಲ್ಟ್ ಕಂಪನಿಯು ಭಾರತ ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿಯುತ್ತದೆ. ಭಾರತ ಏನು ಹೇಳುವುದಕ್ಕೆ ಹೇಳುತ್ತದೋ ಅದನ್ನೇ ಅದು ಹೇಳುತ್ತದೆ. ತಾನು ಹೇಳಬೇಕಿರುವುದನ್ನು ಭಾರತದ ಡಸಾಲ್ಟ್ ಮೂಲಕ ಹೇಳಿಸುತ್ತಿದೆ ಎಂದು ಫ್ರೆಂಚ್ ಏರೋಸ್ಪೇಸ್ ಕಂಪನಿಯ ಮೇಲೂ ಅವರು ಹರಿಹಾಯ್ದರು.

ರಫೇಲ್ ಒಪ್ಪಂದ ಪ್ರಕ್ರಿಯೆಯ ವಿವರ ಕೊಡಿ: ಕೇಂದ್ರವನ್ನು ಕೇಳಿದ ಸುಪ್ರೀಂಕೋರ್ಟ್ರಫೇಲ್ ಒಪ್ಪಂದ ಪ್ರಕ್ರಿಯೆಯ ವಿವರ ಕೊಡಿ: ಕೇಂದ್ರವನ್ನು ಕೇಳಿದ ಸುಪ್ರೀಂಕೋರ್ಟ್

ಫ್ರಾನ್ಸ್ ಪ್ರವಾಸ ಏಕೆ?

ಫ್ರಾನ್ಸ್ ಪ್ರವಾಸ ಏಕೆ?

ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಫ್ರಾನ್ಸ್ ಪ್ರವಾಸಕ್ಕೆ ಹೋಗುತ್ತಿರುವುದೇಕೆ? ರಫೇಲ್ ಡೀಲ್ ಹಗರಣವನ್ನು ಅನ್ನು ಮುಚ್ಚಿಹಾಕುವ ಯೋಜನೆಯೇ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು. ಮೊದಲು ಭಾರತದ ಪ್ರಧಾನಿಯೇ ರಿಲಯನ್ಸ್ ಕಂಪನಿಗೆ ರಫೇಲ್ ಯುದ್ಧವಿಮಾನದ ಬಿಡಿ ಭಾಗಗಳ ತಯಾರಿಕೆಯ ಒಪ್ಪಂದ ಮಾಡಿಕೊಳ್ಳುವಂತೆ ಫ್ರಾನ್ಸ್ ಸರ್ಕಾರವನ್ನು ಕೋರಿದ್ದರು. ಇದನ್ನು ರಫೇಲ್ ಡೀಲ್ ನ ಹಿರಿಯ ಅಧಿಕಾರಿಯೊಬ್ಬರೂ ದೃಢಪಡಿಸಿದ್ದಾರೆ. ಅಂದರೆ ಇದು ಸ್ಪಷ್ಟವಾಗಿ ಒಂದು ಭ್ರಷ್ಟಾಚಾರ ಪ್ರಕರಣವೇ ಎಂದಿದ್ದಾರೆ ರಾಹುಲ್.

ಎಚ್‌ಎಎಲ್ ಅಂಗಳದಲ್ಲಿ ರಫೇಲ್ ಚರ್ಚೆ: ಅ.13ರಂದು ರಾಹುಲ್ ಭೇಟಿಎಚ್‌ಎಎಲ್ ಅಂಗಳದಲ್ಲಿ ರಫೇಲ್ ಚರ್ಚೆ: ಅ.13ರಂದು ರಾಹುಲ್ ಭೇಟಿ

ಪ್ರಧಾನಿಯವರದು ಮೌನವೇ ಉತ್ತರ!

ಪ್ರಧಾನಿಯವರದು ಮೌನವೇ ಉತ್ತರ!

ರಫೇಲ್ ಡೀಲ್ ಬಗ್ಗೆ ಇಷ್ಟೆಲ್ಲ ಆರೋಪ ಕೇಳಿಬಂದರೂ ಪ್ರಧಾನಿ ನರೇಂದ್ರ ಮೋದಿಯವರದು ಮಾತ್ರ ಮೌನದ ಪ್ರತಿಕ್ರಿಯೆ. ಇದು ಒಂದು ಹಗರಣವಷ್ಟೇ. ಕೇಂದ್ರ ಸರ್ಕಾರದ ಇನ್ನೆಷ್ಟೊ ಹಗರಣಗಳು ಇನ್ನು ಕೆಲವೇ ದಿನಗಳಲ್ಲಿ ಹೊರಬರಲಿವೆ ಎಂದು ರಾಹುಲ್ ಗಾಂಧಿ ಹೇಳಿದರು.

MeToo ಅಭಿಯಾನದ ಬಗ್ಗೆ

MeToo ಅಭಿಯಾನದ ಬಗ್ಗೆ

ಚಿತ್ರರಂಗ, ಪತ್ರಿಕಾರಂಗಗಳಲ್ಲಿ ಕೇಳಿಬರುತ್ತಿರುವ ಲೈಂಗಿಕ ದೌರ್ಜನ್ಯ ಪ್ರಕರಣದ ವಿರುದ್ಧ ದನಿ ಎತ್ತಿರುವ MeToo ಅಭಿಯಾನದ ಬಗ್ಗೆ ಈ ಸಮದರ್ಭದಲ್ಲಿ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ರಾಹುಲ್, 'ಇದು ರಫೇಲ್ ಡಿಲ್ ಕುರಿತಾಗಿ ಏರ್ಪಡಿಸಿದ ಪತ್ರಿಕಾಗೋಷ್ಠಿ. ಲೈಂಗಿಕ ದೌರ್ಜನ್ಯದ ಬಗ್ಗೆ ಮಾತನಾಡುವುದಕ್ಕೆ ಬೇರೆ ಸಮಯವಿದೆ' ಎಂದು ಪತ್ರಿಕಾ ಗೋಷ್ಠಿಯನ್ನು ಮುಗಿಸಿದರು.

English summary
Congress president Rahul Gandhi addresses a pressmeet in New Delhi on Rafale deal today. He said, 'I would like to clearly tell the youth of the country that the Prime Minister of India is a corrupt man'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X