ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಚೀನಾ ಆಕ್ರಮಣಕ್ಕೆ ಲಡಾಖ್ ಬಿಟ್ಟುಕೊಟ್ರಾ ಮೋದಿ?' ರಾಹುಲ್ ಗಾಂಧಿ ಪ್ರಶ್ನೆ

|
Google Oneindia Kannada News

ದೆಹಲಿ, ಜೂನ್ 20: ಲಡಾಖ್‌ನ ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಹಿಂಸಾತ್ಮಕ ಕೃತ್ಯ ನಡೆದ ಬಳಿಕ, ಪ್ರಧಾನಿ ಮೋದಿ ಸರ್ವಪಕ್ಷ ಸಭೆ ನಡೆಸಿದರು. ಚೀನಾ ಮತ್ತು ಭಾರತ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸರ್ಕಾರದ ನಿಲುವೇನು? ಎಂಬುದರ ಬಗ್ಗೆ ವಿಪಕ್ಷಗಳಿಗೆ ಮಾಹಿತಿ ನೀಡಿದ್ದಾರೆ.

Recommended Video

ರಾಹುಲ್ ಗಾಂಧಿಗೆ ಕಿವಿ ಮಾತು ಹೇಳಿದ ಸೈನಿಕನ ತಂದೆ | Oneindia Kannada

ಈ ವೇಳೆ ಮಾತನಾಡಿರುವ ಮೋದಿ ''ಭಾರತದ ಒಂದಿಂಚೂ ಜಾಗವನ್ನು ಬಿಟ್ಟುಕೊಡುವುದಿಲ್ಲ, ನಮ್ಮ ಭೂಮಿ ಮೇಲೆ ಯಾರಾದರೂ ಕಣ್ಣಾಕಿದರೆ ಸುಮ್ಮನೆ ಬಿಡುವುದಿಲ್ಲ'' ಎಂದು ಚೀನಾಗೆ ಎಚ್ಚರಿಕೆ ನೀಡಿದ್ದಾರೆ ಎಂದು ಸುದ್ದಿಗಳು ವರದಿಯಾಗಿವೆ.

'ಸೈನಿಕರನ್ನು ನಿರಾಯುಧವಾಗಿ ಕಳುಹಿಸಿದ್ದು ಏಕೆ?'- ರಾಹುಲ್ ಗಾಂಧಿ'ಸೈನಿಕರನ್ನು ನಿರಾಯುಧವಾಗಿ ಕಳುಹಿಸಿದ್ದು ಏಕೆ?'- ರಾಹುಲ್ ಗಾಂಧಿ

ನರೇಂದ್ರ ಮೋದಿ ಕೊಟ್ಟ ಆ ಹೇಳಿಕೆ ಈಗ ರಾಹುಲ್ ಗಾಂಧಿಯ ಟೀಕೆಗೆ ಗುರಿಯಾಗಿದೆ. ಮೋದಿ ಹೇಳಿದ ಮಾತನ್ನು ಕೇಳಿದ ರಾಹುಲ್ ''ಹಾಗಾದ್ರೆ ಚೀನಾ ಅಧ್ಯಕ್ಷರಿಗೆ ಲಡಾಖ್ ಪ್ರದೇಶವನ್ನು ಒಪ್ಪಿಸಿದ್ದಾರಾ ಮೋದಿ? ಎಂದು ಪ್ರಶ್ನಿಸುವಂತೆ ಮಾಡಿದೆ. ಮುಂದೆ ಓದಿ....

ಸೈನಿಕರ ಘರ್ಷಣೆ ನಡೆದಿದ್ದು ಎಲ್ಲಿ?

ಭಾರತದ ಭೂ ಪ್ರದೇಶಕ್ಕೆ ಚೀನಾ ಸೈನ್ಯ ನುಗ್ಗಿಲ್ಲ ಎಂದು ಪ್ರಧಾನಿ ಮೋದಿ ಸಮರ್ಥಿಸಿಕೊಂಡಿದ್ದಾರೆ ಎನ್ನುವುದಾದರೇ, ಹಿಂಸಾತ್ಮಕ ಘರ್ಷಣೆ ನಡೆದಿದ್ದು ಎಲ್ಲಿ? ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. 'ಅದು ಭಾರತದ ಭೂ ಪ್ರದೇಶ ಅಲ್ಲ ಎನ್ನುವುದಾರೇ ಭಾರತೀಯ ಸೈನಿಕರು ಎಲ್ಲಿ ಕೊಲ್ಲಲ್ಪಟ್ಟರು?' ಎಂದು ಕಾಂಗ್ರೆಸ್ ನಾಯಕ ಕೇಳಿದ್ದಾರೆ.

ಲಡಾಖ್ ಒಪ್ಪಿಸಿಬಿಟ್ಟರಾ ಮೋದಿ?

ಲಡಾಖ್ ಒಪ್ಪಿಸಿಬಿಟ್ಟರಾ ಮೋದಿ?

ಲಡಾಖ್‌ನ ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಭಾರತ ಮತ್ತು ಚೀನಾ ಸೈನಿಕರ ಘರ್ಷಣೆ ನಡೆದಿದೆ. ಇದು ಭಾರತದ ಕೇಂದ್ರಾಡಳಿತ ಪ್ರದೇಶ. ಭಾರತದ ಪ್ರದೇಶಕ್ಕೆ ಚೀನಾ ಪ್ರವೇಶ ಮಾಡಿಲ್ಲ ಎನ್ನುವುದಾರೇ, ಈ ಪ್ರದೇಶವನ್ನು ಚೀನಾ ಸೇನೆಯ ಆಕ್ರಮಣಕ್ಕೆ ಬಿಟ್ಟುಕೊಟ್ಟರಾ? ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿ ಕೇಳಿದ್ದಾರೆ.

ಲಡಾಖ್ ಗಾಲ್ವಾನ್ ಕಣಿವೆ ನಮ್ಮದು ಎಂದ ಚೀನಾ

ಲಡಾಖ್ ಗಾಲ್ವಾನ್ ಕಣಿವೆ ನಮ್ಮದು ಎಂದ ಚೀನಾ

ಸರ್ವಪಕ್ಷಸಭೆ ಬಳಿಕ ಮಾತನಾಡಿರುವ ಪ್ರಧಾನಿ ಮೋದಿ ಭಾರತದ ಭೂ ಪ್ರದೇಶಕ್ಕೆ ಚೀನಾ ಸೇನೆ ಪ್ರವೇಶ ಮಾಡಿಲ್ಲ, ಒಂದಿಂಚೂ ಜಾಗವನ್ನು ನಾವು ಕೊಡುವುದಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ, ಚೀನಾ ನೋಡಿದ್ರೆ ಪೂರ್ವ ಲಡಾಖ್‌ನ ಗಾಲ್ವಾನ್ ಕಣಿವೆ ನಮ್ಮ ಗಡಿ ಪ್ರದೇಶದಲ್ಲಿ ಎಂದು ಹೇಳಿಕೆ ನೀಡುತ್ತಿದೆ.

ಸೇನೆಗೆ ಪರಮಾಧಿಕಾರ ನೀಡಲಾಗಿದೆ

ಸೇನೆಗೆ ಪರಮಾಧಿಕಾರ ನೀಡಲಾಗಿದೆ

ಭಾರತದ ಗಡಿ ರಕ್ಷಣೆಗೆ ನಿಂತಿರುವ ಸೇನೆ ಪರಮಾಧಿಕಾರ ನೀಡಲಾಗಿದೆ ಎಂದು ಮೋದಿ ಹೇಳಿದ್ದಾರೆ. 'ಭಾರತದ ಕಡೆಗೆ ನೋಡಲು ಧೈರ್ಯ ತೋರಿದವರಿಗೆ ನಮ್ಮ ಸೈನಿಕರು ತಕ್ಕ ಪಾಠ ಕಲಿಸಿದ್ದಾರೆ ಮತ್ತು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ಎಂದು ಸರ್ವ ಪಕ್ಷ ಸಭೆಯಲ್ಲಿ ತಿಳಿಸಿದ್ದಾರೆ

English summary
'PM has surrendered Indian territory to Chinese aggression'? Why were our soldiers killed? Where were they killed?, Rahul gandhi asked to PM Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X