ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಸೀದಿಗೆ ಮಹಿಳೆಯರ ಪ್ರವೇಶ ನಿಷೇಧವನ್ನು ಪ್ರಶ್ನಿಸಿ ಸುಪ್ರೀಂಗೆ ಅರ್ಜಿ

|
Google Oneindia Kannada News

ನವದೆಹಲಿ, ಏಪ್ರಿಲ್ 16: ಮುಸ್ಲಿಂ ಮಹಿಳೆಯರಿಗೆ ಮಸೀದಿಯಲ್ಲಿ ಪ್ರವೇಶ ನಿಷೇಧವನ್ನು ಪ್ರಶ್ನಿಸಿ ದಂಪತಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಹೀಗೆ ಪ್ರವೇಶ ನಿಷೇಧಿಸುವುದು ಕಾನೂನು ಬಾಹಿರ, ಅಸಾಂವಿಧಾನಿಕ ಹಾಗೂ ಗೌರವಕ್ಕೆ ಚ್ಯುತಿ ತರುವ ಸಂಗತಿ ಎಮ್ದು ಅರ್ಜಿಯಲ್ಲಿ ಹೇಳಲಾಗಿದೆ.

ಯಾವುದೇ ಲಿಂಗ ಭೇದ ಇರಬಾರದು. ಎಲ್ಲ ಕಡೆಯೂ ಮುಸ್ಲಿಂ ಮಹಿಳೆಯರಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಬೇಕು. ಮುಸ್ಲಿಮರ ಪವಿತ್ರ ಸ್ಥಳವಾದ ಮೆಕ್ಕಾದಲ್ಲೇ ಈ ರೀತಿಯ ಲಿಂಗ ಭೇದವಿಲ್ಲ. ನಂಬಿಕೆ ಇರುವಂಥ ಪುರುಷರು, ಮಹಿಳೆಯರು ಕಾಬಾದಲ್ಲಿ ನಿಲ್ಲುತ್ತಾರೆ ಎಂದು ಪುಣೆ ಮೂಲದ ದಂಪತಿ ಯಾಸ್ಮಿನ್ ಜುಬೇರ್ ಅಹ್ಮದ್ ಹಾಗೂ ಜುಬೇರ್ ಅಹ್ಮದ್ ತಮ್ಮ ಅರ್ಜಿಯನ್ನು ಸಲ್ಲಿಸಿದ್ದಾರೆ.

ಶಬರಿಮಲೆ ಪ್ರವೇಶ ವಿರೋಧಿಸಿ ಮಸೀದಿ ಪ್ರವೇಶಕ್ಕೆ ಯತ್ನ:6 ಮಹಿಳೆಯರ ಬಂಧನಶಬರಿಮಲೆ ಪ್ರವೇಶ ವಿರೋಧಿಸಿ ಮಸೀದಿ ಪ್ರವೇಶಕ್ಕೆ ಯತ್ನ:6 ಮಹಿಳೆಯರ ಬಂಧನ

ಸದ್ಯಕ್ಕೆ ಜಮಾತ್-ಇ-ಇಸ್ಲಾಮಿ ಹಾಗೂ ಮುಜಾಹಿದ್ ಗೆ ಸೇರಿದ ಮಸೀದಿಗಳಲ್ಲಿ ಮಹಿಳೆಯರಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಲಾಗುತ್ತಿದೆ. ಸುನ್ನಿ ಪಂಗಡಕ್ಕೆ ಸೇರಿದ ಮಸೀದಿಗಳಲ್ಲಿ ಮಹಿಳೆಯರಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡುತ್ತಿಲ್ಲ. ಇನ್ನು ಯಾವ ಮಸೀದಿಗಳಲ್ಲಿ ಮಹಿಳೆಯರಿಗೆ ಪ್ರವೇಶ ಇದೆಯೋ ಅಂಥಲ್ಲಿ ಪುರುಷರಿಗೆ ಪ್ರತ್ಯೇಕ ಆಗಮನ-ನಿರ್ಗಮನ ದಾರಿಗಳಿರುತ್ತವೆ.

Muslim Woman

ಇಸ್ಲಾಮ್ ನ ಹಲವಾರು ಧಾರ್ಮಿಕ ಮುಖಂಡರನ್ನು ಭೇಟಿ ಆದ ನಂತರವೂ ಸಕಾರಾತ್ಮಕ ಸ್ಪಂದನೆ ದೊರೆತಿಲ್ಲ ಎಂದು ಈ ದಂಪತಿ ಹೇಳಿದ್ದಾರೆ. "ಜಾಮಾ ಮಸೀದಿ, ಬೋಪೋಡಿಯ ಇಮಾಮ್ ರು ಪತ್ರ ಬರೆದು ಈ ವರೆಗೆ ಅಂಥ ಅನುಮತಿ ನೀಡಿಲ್ಲ. ಅದ್ದರಿಂದ ಮಹಿಳೆಯರಿಗೆ ಮಸೀದಿ ಪ್ರವೇಶಕ್ಕೆ ಅವಕಾಶ ನೀಡಬಹುದೋ ಎಂಬ ಬಗ್ಗೆ ಖಾತ್ರಿ ಇಲ್ಲ" ಎಂದು ತಿಳಿಸಿರುವುದಾಗಿ ಅರ್ಜಿಯಲ್ಲಿ ಇದೆ.

ಇನ್ನು ಮಸೀದಿ ಪ್ರವೇಶಕ್ಕೆ ರಕ್ಷಣೆ ನೀಡಬೇಕು ಎಂದು ಪೊಲೀಸರನ್ನು ಕೇಳಿಕೊಂಡರೆ ಅವರು ಸಹ ಸ್ಪಂದಿಸಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಶಬರಿಮಲೆಯಲ್ಲಿ ಶತಮಾನಗಳಿಂದ ಹತ್ತರಿಂದ ಐವತ್ತು ವರ್ಷದ ಸ್ತ್ರೀಯರಿಗೆ ಪ್ರವೇಶ ಇರಲಿಲ್ಲ. ಆದರೆ ಹೀಗೆ ಮಾಡುವಂತಿಲ್ಲ. ಎಲ್ಲ ವಯೋಮಾನದ ಸ್ತ್ರೀಯರಿಗೂ ಪ್ರವೇಶ ನೀಡಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
Pune based couple has moved the Supreme Court against the prohibition of entry of Muslim women into mosques, terming the bar as illegal, unconstitutional and a violation of their dignity.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X