ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ಲಾಸ್ಮಾ ಥೆರಪಿ ಆಶಾದಾಯಕ ಫಲಿತಾಂಶ ನೀಡಿದೆ: ದೆಹಲಿ ಸಿಎಂ ಕೇಜ್ರಿವಾಲ್

|
Google Oneindia Kannada News

ದೆಹಲಿ, ಏಪ್ರಿಲ್ 24: ಕೊರೊನಾ ವೈರಸ್‌ಗೆ ಈವರೆಗೂ ಯಾವ ದೇಶವೂ ಔಷಧ ಕಂಡುಹಿಡಿದಿಲ್ಲ. ಬಹುತೇಕ ರಾಷ್ಟ್ರಗಳು ಔಷಧ ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿಕೊಂಡಿದೆ. ಆದರೆ, ಭಾರತದ ವೈದ್ಯರು ಸಮಾಧಾನ ಪಡುವಂತಹ ಚಿಕಿತ್ಸೆಯನ್ನು ಆರಂಭಿಸಿದ್ದಾರೆ ಎನ್ನುವುದು ಖಷಿಯ ವಿಚಾರ.

ಹೌದು, ಕೊರೊನಾ ರೋಗಿಗಳ ಮೇಲೆ ಪ್ರಯೋಗ ಮಾಡಿರುವ ಪ್ಲಾಸ್ಮಾ ಥೆರಪಿ ಆಶಾದಾಯಕವಾಗಿದೆ, ಇದರಿಂದ ಪ್ರಾಣ ಉಳಿಸಬಹುದು ಎಂಬ ಭರವಸೆ ಮೂಡಿದೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಬೆಂಗಳೂರಲ್ಲೇ ಕನ್ವೆಲೆಸೆಂಟ್ ಪ್ಲಾಸ್ಮಾ ಥೆರಪಿ: ಹೇಗಿರುತ್ತೆ ಚಿಕಿತ್ಸೆ? ಬೆಂಗಳೂರಲ್ಲೇ ಕನ್ವೆಲೆಸೆಂಟ್ ಪ್ಲಾಸ್ಮಾ ಥೆರಪಿ: ಹೇಗಿರುತ್ತೆ ಚಿಕಿತ್ಸೆ?

ಕೊರೊನಾ ಸೋಂಕಿನಿಂದ ಚೇತರಿಸಿಕೊಂಡ ಎಲ್ಲರೂ ಮುಂದೆ ಬಂದು ರಕ್ತದಾನ (ಪ್ಲಾಸ್ಮಾ) ಮಾಡಬೇಕು. ಮತ್ತೊಬ್ಬರ ಜೀವ ಉಳಿಸುವ ಕೆಲಸಕ್ಕೆ ತಾವು ಜೊತೆಯಾಗಬೇಕು ಎಂದು ಕೇಜ್ರಿವಾಲ್ ವಿನಂತಿಸಿಕೊಂಡಿದ್ದಾರೆ.

ವಿಡಿಯೋ ಕಾನ್ಫೆರೆನ್ಸ್ ಮೂಲಕ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ''ನಾಲ್ಕು ಜನರ ಮೇಲೆ ಪ್ಲಾಸ್ಮಾ ಥೆರಪಿ ಪ್ರಯೋಗ ಮಾಡಿದ್ವಿ. ಇದರ ಆರಂಭಿಕ ಫಲಿತಾಂಶ ಆಶಾದಾಯಕವಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ಲಾಸ್ಮಾ ಚಿಕಿತ್ಸೆ ನಡೆಸಲು ಸರ್ಕಾರ ಚಿಂತಿಸಿದೆ. ಕೇಂದ್ರದಿಂದ ಅನುಮತಿ ಪಡೆಯಲಿದ್ದೇವೆ. ಎನ್ಎನ್ ಜೆಪಿ ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದ ರೋಗಿಗಳಿಗೆ ಮಾತ್ರ ಪ್ಲಾಸ್ಮಾ ಬಳಸಲು ಕೇಂದ್ರ ಅನುಮತಿ ನೀಡಿತ್ತು'' ಎಂದು ತಿಳಿಸಿದ್ದಾರೆ.

Plasma Therapy Is Encouraging Says Arvind Kejriwal

ದೇಶದ ಹಲವು ರಾಜ್ಯಗಳಲ್ಲಿ ಪ್ಲಾಸ್ಮಾ ಥೆರಪಿ ಚಿಕಿತ್ಸೆ ನೀಡುತ್ತಿವೆ. ಇತ್ತೀಚಿಗಷ್ಟೆ ಕರ್ನಾಟಕದಲ್ಲೂ ಪ್ಲಾಸ್ಮಾ ಚಿಕಿತ್ಸೆ ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿತ್ತು.

English summary
Delhi Chief Minister arvind kejriwal has request recovered patients donate blood plasma, because plasma therapy is encouraging for COVID19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X