ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾಗೆ ಪ್ಲಾಸ್ಮಾ ಥೆರಪಿ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 25: ಕೊರೊನಾ ಹಾಗೂ ಡೆಂಗ್ಯೂನಿಂದ ಬಳಲುತ್ತಿರುವ ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರಿಗೆ ಪ್ಲಾಸ್ಮಾ ಥೆರಪಿ ನೀಡಲು ವೈದ್ಯರು ಮುಂದಾಗಿದ್ದಾರೆ.

ಅವರನ್ನು ಗುರುವಾರ ಲೋಕ ನಾಯಕ ಜಯಪ್ರಕಾಶ್ ಆಸ್ಪತ್ರೆಯಿಂದ ಮಾಕ್ಸ್ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.

ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾರಿಗೆ ಕೊವಿಡ್-19 ಜೊತೆ ಡೆಂಗ್ಯೂ ಅಪಾಯದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾರಿಗೆ ಕೊವಿಡ್-19 ಜೊತೆ ಡೆಂಗ್ಯೂ ಅಪಾಯ

ಅವರ ರಕ್ತದ ಪ್ಲೇಟ್​ಲೆಟ್​ಗಳ ಸಂಖ್ಯೆ ಗಣನೀಯವಾಗಿ ಇಳಿದಿದ್ದು ಸರ್ಕಾರಿ ಸ್ವಾಮ್ಯದ ಲೋಕನಾಯಕ ಜಯಪ್ರಕಾಶ್ ಆಸ್ಪತ್ರೆಯಲ್ಲಿದ್ದ ಅವರನ್ನ ಈಗ ಖಾಸಗಿ ಮ್ಯಾಕ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಿ ಐಸಿಯುನಲ್ಲಿಡಲಾಗಿದೆ. ಕೊರೊನಾ ವೈರಸ್ ಮತ್ತು ಡೆಂಗ್ಯೂ ಜ್ವರ ಎರಡೂ ಒಟ್ಟಿಗೆ ಇರುವ ಪ್ರಕರಣಗಳು ಅಪರೂಪ ಎನ್ನಲಾಗಿದೆ.

Plasma Therapy Has Been Administered To Delhi Deputy Chief Minister Manish Sisodia

ಸೆಪ್ಟೆಂಬರ್ 14ರಂದು ಮನೀಶ್ ಸಿಸೋಡಿಯಾ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಮನೆಯಲ್ಲೇ ಐಸೋಲೇಶನ್​ನಲ್ಲಿದ್ದ ಅವರು ಜ್ವರ ಹಾಗೂ ಉಸಿರಾಟದ ತೊಂದರೆ ಹೆಚ್ಚಾಗಿ ಸೆಪ್ಟೆಂಬರ್ 23ರಂದು ಲೋಕನಾಯಕ ಜಯಪ್ರಕಾಶ್ ಆಸ್ಪತ್ರೆಗೆ ದಾಖಲಾಗಿದ್ದರು.

Recommended Video

ಬಿಹಾರ್ election ಜಟಾಪಟಿ !! | Oneindia Kannada

ಆದರೆ, ಅವರ ರಕ್ತದ ಪ್ಲೇಟ್ ಲೆಟ್​ಗಳ ಸಂಖ್ಯೆ ಮತ್ತು ಆಕ್ಸಿಜನ್ ಮಟ್ಟ ಇಳಿಮುಖವಾಗುತ್ತಿರುವುದು ಕಂಡುಬಂದ ಬೆನ್ನಲ್ಲೇ ಅವರನ್ನ ದೆಹಲಿಯ ಸಾಕೇತ್ ಬಳಿ ಇರುವ ಖಾಸಗಿ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

English summary
Plasma therapy has been administered to Delhi Deputy Chief Minister Manish Sisodia who is suffering from dengue & COVID-19 at Max hospital, Saket. He was shifted from Lok Nayak Jayaprakash Hospital to Max hospital yesterday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X