ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಧ್ಯಕ್ಷೀಯ ಚುನಾವಣೆ ಬಳಿಕ ಬರ್ತೇನೆ ಅಂದ್ರೂ ಮೋದಿ ಕೇಳಲಿಲ್ಲ: ಟ್ರಂಪ್

|
Google Oneindia Kannada News

ನವದೆಹಲಿ, ಫೆಬ್ರವರಿ 2: ಅಮೆರಿಕ ಅಧ್ಯಕ್ಷೀಯ ಚುನಾವಣೆ ಮುಗಿಯಲಿ ಬಳಿಕ ಭಾರತಕ್ಕೆ ಭೇಟಿ ನೀಡುತ್ತೇನೆ ಎಂದು ಹೇಳಿದರೂ ಮೋದಿ ಇದಕ್ಕೆ ಒಪ್ಪಿರಲಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

Recommended Video

Modi asked me to come before Elections says Trump | Modi | Donald Trump | Election

ಅಮೆರಿಕ ಅಧ್ಯಕ್ಷರಿಗೆ ಗೌರವ ಸಲ್ಲಿಸುವ ಸಲುವಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ರಾಷ್ಟ್ರಪತಿ ಭವನದಲ್ಲಿ ಆಯೋಜಿನಸಿದ್ದ ಔತಣಕೂಟದ ಬಳಿಕ ಮಾತನಾಡಿರುವ ಟ್ರಂಪ್ ಅವರು, ಭಾರತ ಭೇಟಿ ಕುರಿತ ತಮ್ಮ ಅನಿಸಿಕೆ ಹಾಗೂ ಅನುಭವಗಳನ್ನು ಹಂಚಿಕೊಂಡರು.

ಭಾರತ ಪ್ರವಾಸ ಮುಗಿಸಿ ಡೊನಾಲ್ಡ್ ಟ್ರಂಪ್ ವಾಪಸ್ಭಾರತ ಪ್ರವಾಸ ಮುಗಿಸಿ ಡೊನಾಲ್ಡ್ ಟ್ರಂಪ್ ವಾಪಸ್

ಟೆಕ್ಸಾಸ್ ನಲ್ಲಿಯೂ ಮೋದಿ ಜೊತೆಗೆ ಉತ್ತಮ ಕಾಲ ಕಳೆದಿದ್ದೆ. ಅಮೆರಿಕಾದಲ್ಲಿ ಈಗಲೂ ಹೌಡಿ ಮೋದಿ ಬಗ್ಗೆ ಮಾತನಾಡುತ್ತಾರೆ. ಟೆಕ್ಸಾಸ್ ಅತ್ಯಂದ ವಿಶಾಲ ಪ್ರದೇಶವಾಗಿದ್ದು, ಅದನ್ನು ಗೆಲ್ಲಲು ಯಾರಿಂದಲೂ ಸಾಧ್ಯವಿಲ್ಲ.

 ಎರಡು ದಿನಗಳ ಭಾರತ ಭೇಟಿ ಸಂತಸ ತಂದಿದೆ

ಎರಡು ದಿನಗಳ ಭಾರತ ಭೇಟಿ ಸಂತಸ ತಂದಿದೆ

ಎರಡು ದಿನಗಳ ಕಾಲದ ಭಾರತ ಭೇಟಿ ಅತ್ಯಂತ ಸಂತಸ ತಂದಿದೆ. 18 ಗಂಟೆಗಳ ಕಾಲ ಕಳೆದಿರುವುದು ಗೊತ್ತಾಗಲೇ ಇಲ್ಲ. ಯಾವುದೇ ಕೆಟ್ಟ ಅನುಭವಗಳಾಗಲಿಲ್ಲ. ನಾನು ಅತ್ಯಂತ ಇಷ್ಟಪಡುವ ರಾಷ್ಟ್ರಕ್ಕೆ ಭೇಟಿ ನೀಡಿದ್ದೇನೆ. ಈ ಹಿಂದೆ ಕೂಡ ನಾನು ಭಾರತಕ್ಕೆ ಭೇಟಿ ನೀಡಿದ್ದು ಎಲ್ಲರಿಗೂ ತಿಳಿದೇ ಇದೆ.

 ಅಧ್ಯಕ್ಷನಾಗಿ ಅಲ್ಲದ ಸಂದರ್ಭದಲ್ಲೂ ಭಾರತಕ್ಕೆ ಬಂದಿದ್ದೇನೆ

ಅಧ್ಯಕ್ಷನಾಗಿ ಅಲ್ಲದ ಸಂದರ್ಭದಲ್ಲೂ ಭಾರತಕ್ಕೆ ಬಂದಿದ್ದೇನೆ

ಅಧ್ಯಕ್ಷನಾಗಿ ಅಲ್ಲದೆ ಕೂಡ ಭಾರತಕ್ಕೆ ಬಂದಿದ್ದೇನೆ. ಎಷ್ಟು ಬಾರಿ ಭಾರತಕ್ಕೆ ಬಂದಲೂ ಸಾಕಷ್ಟು ಬಾರಿ ಆಶಾದಾಯಕವಾಗಿ ಹಿಂತಿರುಗುತ್ತೇನೆ.

ಭೇಟಿಗೂ ಮುನ್ನ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ದೂರವಾಣಿ ಕರೆ ಮಾಡಿದ್ದೆ. ಈ ವೇಳೆ ಅಧ್ಯಕ್ಷೀಯ ಚುನಾವಣೆ ಪೂರ್ಣಗೊಂಡ ಬಳಿಕ ಭಾರತಕ್ಕೆ ಬರುವ ಇಚ್ಚೆಯನ್ನು ವ್ಯಕ್ತಪಡಿಸಿದ್ದೆ. ಆದರೆ, ನನ್ನ ಈ ಆಲೋಚನೆ ಮೋದಿಯವರಿಗೆ ಇಷ್ಟವಾಗಿರಲಿಲ್ಲ ಎಂದು ಹೇಳಿದ್ದಾರೆ.

 ಎಲ್ಲೂ ಕೆಟ್ಟ ಅನುಭವಗಳಾಗಿಲ್ಲ

ಎಲ್ಲೂ ಕೆಟ್ಟ ಅನುಭವಗಳಾಗಿಲ್ಲ

ಭಾರತದಲ್ಲಿ ಬಹಳ ಆರಾಮದಾಯಕವಾಗಿರುತ್ತೇನೆ.ಭಾಷಣ ಮಾಡಿದಷ್ಟು ಆರಾಮವಾಗಿರುತ್ತೇನೆ. ಭಾಷಣ ಓದಲು ನನಗೆ ಇಷ್ಟವಿಲ್ಲ ಎಂದು ಹೇಳಿದ್ದೆ. ಭಾರತವನ್ನು ಪ್ರೀತಿಸುತ್ತೇನೆ. ಗೌರವಿಸುತ್ತೇನೆ. ಮೆಲಾನಿಯಾ ಟ್ರಂಪ್ ಅವರಿಗೂ ಇದೇ ರೀತಿಯ ಅನುಭವವಾಗಿದೆ ಎಂದುಕೊಳ್ಳುತ್ತೇನೆಂದು ತಿಳಿಸಿದ್ದಾರೆ. ಎಲ್ಲಿಯೂ ಕೆಟ್ಟ ಅನುಭವಗಳಾಗಿಲ್ಲ.

 ಟೆಕ್ಸಾಸ್‌ನಲ್ಲಿಯೂ ಮೋದಿ ಜೊತೆ ಉತ್ತಮ ಕಾಲ ಕಳೆದಿದ್ದೆ

ಟೆಕ್ಸಾಸ್‌ನಲ್ಲಿಯೂ ಮೋದಿ ಜೊತೆ ಉತ್ತಮ ಕಾಲ ಕಳೆದಿದ್ದೆ

ಟೆಕ್ಸಾಸ್ ನಲ್ಲಿಯೂ ಮೋದಿ ಜೊತೆಗೆ ಉತ್ತಮ ಕಾಲ ಕಳೆದಿದ್ದೆ. ಅಮೆರಿಕಾದಲ್ಲಿ ಈಗಲೂ ಹೌಡಿ ಮೋದಿ ಬಗ್ಗೆ ಮಾತನಾಡುತ್ತಾರೆ. ಟೆಕ್ಸಾಸ್ ಅತ್ಯಂದ ವಿಶಾಲ ಪ್ರದೇಶವಾಗಿದ್ದು, ಅದನ್ನು ಗೆಲ್ಲಲು ಯಾರಿಂದಲೂ ಸಾಧ್ಯವಿಲ್ಲ.

ನಿನ್ನೆಕೂಡ 1,25,0000 ಜನರು ನಮಸ್ತೆ ಟ್ರಂಪ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಬಹಳ ಸಂತೋಷವಾಯಿತು. ಇದಲ್ಲದೆ ಸಾವಿರಾರು ಜನರು ಸ್ಟೇಡಿಯಂ ಒಳಗೆ ಪ್ರವೇಶ ಪಡೆಯಲು ಹೊರಗೆ ನಿಂತಿದ್ದನ್ನು ನೆನಪಿಸಿಕೊಂಡರು.

English summary
America President Donald Trump had planned to visit India after the US presidential election scheduled to be held later this year but came anyway as Prime Minister Narendra Modi did not like the idea.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X