ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೀಘ್ರ ಕನ್ನಡದಲ್ಲೂ ರೈಲ್ವೆ ಟಿಕೆಟ್ ಮುದ್ರಣ: ಪಿಯುಷ್ ಗೋಯೆಲ್

|
Google Oneindia Kannada News

ನವದೆಹಲಿ, ಮಾರ್ಚ್1 : ಕರ್ನಾಟಕದ ರೈಲ್ವೆ ನಿಲ್ದಾಣಗಳಲ್ಲಿ ಟಿಕೆಟ್ ಗಾಗಿ ಸರತಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಲು ಪ್ರಯಾಣಿಕರ ಅನುಕೂಲಕ್ಕಾಗಿ ಆಟೋಮ್ಯಾಟಿಕ್ ಟಿಕೆಟ್ ವೆಂಡಿಂಗ್ ಮಷಿನ್ ಗಳನ್ನು ಪರಿಚಯಿಸಲಾಗುತ್ತಿದೆ.

ಈ ಟಿಕೆಟ್ ಗಳಲ್ಲಿ ಕನ್ನಡ ಭಾಷೆಯಲ್ಲೂ ಮಾಹಿತಿ ನೀಡಲಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಪಿಯುಷ್ ಗೋಯೆಲ್ ಟ್ವೀಟ್ ಮಾಡಿದ್ದಾರೆ.

ಅಲ್ಲದೇ ಪ್ರಯಾಣಿಕರು ಮುಂಗಡ ಟಿಕೆಟ್ ಗಳನ್ನು ಯುಟಿಎಸ್ ಮೊಬೈಲ್ ಟಿಕೆಟಿಂಗ್ ಅಪ್ಲಿಕೇಷನ್ ಮೂಲಕ ಗೂಗಲ್ ಪ್ಲೇನಲ್ಲಿ ಡೌನ್ ಲೋಡ್ ಮಾಡಿಕೊಂಡು ಆ ಮೂಲಕ ಕಾಯ್ದಿರಿಸಬಹುದು ಎಂದು ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ರೈಲು ಟಿಕೆಟ್ ನಲ್ಲಿ ಕನ್ನಡದಲ್ಲಿ ಮಾಹಿತಿ ಇರಬೇಕೆಂಬ ಬಹುಕಾಲದ ಬೇಡಿಕೆ ಈಡೇರುವ ಕಾಲ ಸನ್ನಿಹಿತವಾಗಿದೆ. ನೈಋತ್ಯ ರೈಲ್ವೆ ಪ್ರಾಯೋಗಿಕವಾಗಿ ಕನ್ನಡದಲ್ಲಿ ರೈಲ್ವೆ ಟಿಕೆಟ್ ಮುದ್ರಿಸಲು ಪ್ರಾರಂಭಿಸಿದ್ದು, ರೈಲ್ವೆ ಮಂಡಳಿ ಒಪ್ಪಿಗೆಗಾಗಿ ಕಾಯುತ್ತಿದೆ. ಟಿಕೆಟ್ ಮಾಹಿತಿ ಕನ್ನಡದಲ್ಲೂ ಬೇಕೆಂಬ ಒತ್ತಾಯಕ್ಕೆ ಮನ್ನಣೆ ನೀಡಲಾಗಿದೆ.

ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ ಸೇರಿ ಹಲವು ರಾಜ್ಯಗಳಲ್ಲಿ ಆಯಾ ಪ್ರಾದೇಶಿಕ ಭಾಷೆಯಲ್ಲೇ ರೈಲು ಟಿಕೆಟ್ ಮುದ್ರಣವಾಗಬೇಕು ಎಂಬ ಕೂಗು ಹಲವು ವರ್ಷಗಳಿಂದ ಇದೆ.

ಕಾಯ್ದಿರಿಸದ ಟಿಕೆಟ್ ನಲ್ಲಿ ಮಾತ್ರ ಕನ್ನಡ: ನೈಋತ್ಯ ರೈಲ್ವೆ ಮುಂದಿನ ದಿನಗಳಲ್ಲಿ ಕೇವಲ ಕಾಯ್ದಿರಿಸದ ಟಿಕೆಟ್ ಗಳಲ್ಲಿ ಮಾತ್ರ ಕನ್ನಡದಲ್ಲಿ ಮಾಹಿತಿ ಮುದ್ರಿಸಲು ನಿರ್ಧರಿಸಿದೆ. ಎಲ್ಲಿಂದ-ಎಲ್ಲಿಗೆ ಮತ್ತು ಯಾವ ಮಾದರಿಯ ರೈಲು ಎಂಬ ಮಾಹಿತಿ ಶೀಘ್ರ ಕನ್ನಡದಲ್ಲೂ ಮುದ್ರಿಸಲ್ಪಡಲಿದೆ. ಕಾಯ್ದಿರಿಸುವ ಟಿಕೆಟ್ ನಲ್ಲಿ ಕೇವಲ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲೇ ಮಾಹಿತಿ ಮುದ್ರಣವಾಗಲಿದೆ.

English summary
Union railway minister Piyush Goyal tweeted that Government has introduced automatic ticket vending machines in Karnataka. The tickets have information in kannada language.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X