ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಮೇ 3ರ ತನಕ ಎಲ್ಲ ಟೆಲಿಕಾಂ ಬಳಕೆದಾರರಿಗೆ ಉಚಿತ ಇಂಟರ್‌ನೆಟ್?

|
Google Oneindia Kannada News

ದೆಹಲಿ, ಏಪ್ರಿಲ್ 23: ಕೊರೊನಾ ವೈರಸ್‌ ತಡೆಗಟ್ಟಲು ದೇಶಾದ್ಯಂತ ಲಾಕ್‌ಡೌನ್‌ ಮಾಡಲಾಗಿದೆ. ಇದರಿಂದ ಸಹಜವಾಗಿ ಸಾರ್ವಜನಿಕರ ದೈನಂದಿನ ಬದುಕು ಕಷ್ಟಕರವಾಗಿದೆ. ಸಾಲು, ಇಎಂಐ, ಆಹಾರ, ಮನೆಗೆ ದಿನಸಿ ಹೀಗೆ ದಿನನಿತ್ಯದ ಜೀವನಕ್ಕೆ ಸಾಧ್ಯವಾದಷ್ಟು ಸರ್ಕಾರ ಸಹಾಯ ಮಾಡಿದೆ.

ಈ ನಡುವೆ ಭಾರತ ಟೆಲಿಕಾಂ ಸಂಸ್ಥೆಗಳು ಸಾರ್ವಜನಿಕರಿಗೆ ಸಹಾಯವಾಗುವಂತೆ, ಉಚಿತ ಇಂಟರ್‌ನೆಟ್‌ ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ ಎಂಬ ಸುದ್ದಿಗಳು ಸದ್ದು ಮಾಡುತ್ತಿದೆ.

PIB Clarified That Telecom Is Not Giving Free Internet To All Users

ಜಿಯೋ ಫೈಬರ್ ಹೊಚ್ಚ ಹೊಸ ಆಫರ್, WFHಗೆ ಅನುಕೂಲಜಿಯೋ ಫೈಬರ್ ಹೊಚ್ಚ ಹೊಸ ಆಫರ್, WFHಗೆ ಅನುಕೂಲ

ಮೇ 3ರ ತನಕ ಎಲ್ಲ ಟೆಲಿಕಾಂ ಸಂಸ್ಥೆಗಳು ತನ್ನ ಬಳಕೆದಾರರಿಗೆ ಉಚಿತವಾಗಿ ಇಂಟರ್‌ನೆಟ್‌ ಸೇವೆ ಒದಗಿಸಲಿದೆ ಎಂಬ ಅಂತೆ-ಕಂತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆದರೆ, ಅದೆಲ್ಲ ಸುಳ್ಳು ಎಂದು ಪಿಐಬಿ (Press Information Bureau) ಫ್ಯಾಕ್ಟ್ ಚೆಕ್ ವಿಭಾಗ ಸ್ಪಷ್ಟಪಡಿಸಿದೆ.

''ಟೆಲಿಕಾಂ ಸಂಸ್ಥೆಗಳು ಉಚಿತವಾಗಿ ಇಂಟರ್‌ನೆಟ್‌ ವ್ಯವಸ್ಥೆ ನೀಡುತ್ತಿಲ್ಲ. ಮೇ 3ರ ತನಕ ಉಚಿತ ಇಂಟರ್‌ನೆಟ್‌ ಸಿಗಲಿದೆ ಎಂಬ ಸುದ್ದಿ ಸುಳ್ಳು'' ಎಂದು ಪಿಐಬಿ ಅಧಿಕೃತವಾಗಿ ಬುಧವಾರ ಟ್ವೀಟ್ ಮಾಡಿದೆ.

ಅಲ್ಲಿಗೆ, ಮೊಬೈಲ್ ಬಳಕೆದಾರರಿಗೆ ಭಾರಿ ನಿರಾಸೆ ಎದುರಾಗಿದೆ. ಸದ್ಯ ಲಾಕ್‌ಡೌನ್‌ನಿಂದಾಗಿ ಗೃಹಬಂಧನದಲ್ಲಿರುವ ಜನರು, ಮೊಬೈಲ್‌ಗೆ ಹೆಚ್ಚು ವ್ಯಸನಿಗಳಾಗಿದ್ದಾರೆ. ದಿನಪೂರ್ತಿ ಮೊಬೈಲ್ ಹಿಡಿದು ಸಮಯ ಕಳೆಯುತ್ತಿದ್ದಾರೆ. ಹೀಗಾಗಿ, ಇಂಟರ್‌ನೆಟ್‌ ಬಳಕೆಯೂ ಹೆಚ್ಚಾಗಿದೆ. ಇಂತಹ ಸಮಯದಲ್ಲಿ ಉಚಿಯತ ಇಂಟರ್‌ನೆಟ್‌ ಎಂದು ತಿಳಿದೊಡನೆ ಸಂತಸಗೊಂಡಿದ್ದರು. ಆದ್ರೆ, ಅದು ಸುಳ್ಳು ಎಂದು ಪಿಐಬಿ ಖಚಿತಪಡಿಸಿದೆ.

English summary
Press Information Bureau has clarified that Department of Telecom is not giving free internet to all users till 3rd May.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X