ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾಮಿಯಾ ಇಸ್ಲಾಮಿಯಾದ ಸ್ಮಶಾನದಲ್ಲಿ ಡ್ಯಾನಿಶ್ ಸಿದ್ದಿಕಿ ಅಂತ್ಯಕ್ರಿಯೆ

|
Google Oneindia Kannada News

ನವದೆಹಲಿ, ಜುಲೈ 18: ಅಫ್ಘಾನಿಸ್ತಾನದಲ್ಲಿ ಹತ್ಯೆಯಾದ ಭಾರತೀಯ ಮೂಲದ ಪುಲಿಟ್ಜರ್ ಪ್ರಶಸ್ತಿ ಪುರಸ್ಕೃತ ಖ್ಯಾತ ಫೋಟೋ ಜರ್ನಲಿಸ್ಟ್ ಡ್ಯಾನಿಶ್ ಸಿದ್ದಿಕಿ ಅಂತ್ಯ ಸಂಸ್ಕಾರವನ್ನು ಜಾಮಿಯಾ ಸ್ಮಶಾನದಲ್ಲಿ ನೆರವೇರಿಸಲಾಯಿತು ಎಂದು ಜಾಮಿಯಾ ಮಿಲಿಯಾ ಇಸ್ಲಾಮಿಯಾ ತಿಳಿಸಿದ್ದಾರೆ.
ಜಾಮೀಯಾ ಸ್ಮಶಾನವು ಸಾಮಾನ್ಯವಾಗಿ ಜಾಮೀಯಾ ನೌಕರರು ಮತ್ತು ಅವರ ಪತ್ನಿ ಹಾಗೂ ಮಕ್ಕಳ ಅಂತ್ಯಕ್ರಿಯೆಗಾಗಿ ಮಾತ್ರ ಮೀಸಲು ಇರಿಸಲಾಗಿದೆ. ಆದರೆ ಡ್ಯಾನಿಷ್ ಸಿದ್ದಿಕಿಗೆ ವಿನಾಯಿತಿ ನೀಡಲಾಗಿದೆ ಎಂದು ಜಾಮೀಯಾ ವಿಶ್ವವಿದ್ಯಾಲಯದ ಉಪ ಕುಲಪತಿಗಳು ಹೇಳಿದ್ದಾರೆ.

ಅಫ್ಘಾನಿಸ್ತಾನ ಘರ್ಷಣೆಯಲ್ಲಿ ಭಾರತೀಯ ಫೋಟೊ ಜರ್ನಲಿಸ್ಟ್ ಡ್ಯಾನಿಶ್ ಸಿದ್ದಿಕಿ ಮೃತ್ಯುಅಫ್ಘಾನಿಸ್ತಾನ ಘರ್ಷಣೆಯಲ್ಲಿ ಭಾರತೀಯ ಫೋಟೊ ಜರ್ನಲಿಸ್ಟ್ ಡ್ಯಾನಿಶ್ ಸಿದ್ದಿಕಿ ಮೃತ್ಯು

"ಡ್ಯಾನಿಶ್ ಸಿದ್ದಿಕಿ ಮೃತದೇಹವನ್ನು ಜಾಮಿಯಾ ಸ್ಮಶಾನದಲ್ಲಿ ಹೂಳಬೇಕೆಂದು ಕುಟುಂಬದವರು ಮಾಡಿದ ಮನವಿಯನ್ನು ಉಪ ಕುಲಪತಿಗಳು ಅಂಗೀಕರಿಸಿದ್ದರು. ಇಲ್ಲಿ ಸಾಮಾನ್ಯವಾಗಿ ವಿಶ್ವವಿದ್ಯಾಲಯದ ನೌಕರರು, ಪತ್ನಿ ಮತ್ತು ಮಕ್ಕಳು ಸೇರಿದಂತೆ ಆಪ್ತರ ಅಂತ್ಯಕ್ರಿಯೆಗೆ ಮಾತ್ರ ಈ ಸ್ಮಶಾನವನ್ನು ಬಳಸಲಾಗುತ್ತದೆ," ಎಂದು ಪಿಆರ್ಒ ಅಹ್ಮದ್ ಅಜೀಮ್ ಹೇಳಿದ್ದಾರೆ.

Photo Journlist Danish Siddiqui’s Body To Be Buried At Jamia Millia Islamia

ಜಾಮೀಯಾ ವಿಶ್ವವಿದ್ಯಾಲಯದಲ್ಲಿ ಸಿದ್ದಿಕಿ ವಿದ್ಯಾಭ್ಯಾಸ:
ಖ್ಯಾತ ಫೋಟೋ ಜರ್ನಲಿಸ್ಟ್ ಡ್ಯಾನಿಶ್ ಸಿದ್ದಿಕಿ ಮತ್ತು ಅವರ ಕುಟುಂಬವು ಜಾಮೀಯಾ ವಿಶ್ವವಿದ್ಯಾಲಯದೊಂದಿಗೆ ಆತ್ಮೀಯ ಬಾಂಧವ್ಯವನ್ನು ಹೊಂದಿದ್ದಾರೆ. ಸಿದ್ದಿಕಿ ತಂದೆ ಮೊಹಮ್ಮದ್ ಅಕ್ತರ್ ಸಿದ್ದಿಕಿ ಇದೇ ವಿವಿಯಲ್ಲಿ ಪ್ರಾಧ್ಯಾಪಕರಾಗಿದ್ದು, ಜಾಮಿಯಾ ನಗರದಲ್ಲೇ ವಾಸವಾಗಿದ್ದರು. ಡ್ಯಾನಿಶ್ ಸಿದ್ದಿಕಿ ಕೂಡ ಇದೇ ವಿಶ್ವವಿದ್ಯಾಲಯದಲ್ಲಿ ಪ್ರಾಥಮಿಕ ಶಿಕ್ಷಣದಿಂದ ಸ್ನಾತಕೋತ್ತರ ಪದವಿವರೆಗೂ ವಿದ್ಯಾಭ್ಯಾಸ ಮಾಡಿದ್ದಾರೆ.

ಜಾಮೀಯಾ ವಿವಿಯಲ್ಲಿ ಸಂತಾಪ:
ಶನಿವಾರ ದಿವಂಗತ ಡ್ಯಾನಿಶ್ ಸಿದ್ದಿಕಿ ನಿವಾಸಕ್ಕೆ ಜಾಮೀಯಾ ವಿಶ್ವವಿದ್ಯಾಲಯದ ಉಪ ಕುಲಪತಿ ನಜ್ಮಾ ಅಕ್ತರ್ ಭೇಟಿ ನೀಡಿ ಸಂತಾಪ ಸೂಚಿಸಿದ್ದರು. ಮಂಗಳವಾರ ಜಾಮೀಯಾ ವಿವಿಯಲ್ಲಿ ಡ್ಯಾನಿಶ್ ಸಿದ್ದಿಕಿಯವರಿಗೆ ಸಂತಾಪ ಸೂಚಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗುವುದು. ಈ ವೇಳೆ ವಿದ್ಯಾಭ್ಯಾಸದ ಸಂದರ್ಭದಲ್ಲಿ ಮಾಡಿರುವ ಸಾಧನೆಗಳನ್ನು ವಿದ್ಯಾರ್ಥಿಗಳ ಎದುರು ಪ್ರದರ್ಶಿಸುವ ಆ ಮೂಲಕ ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬು ಕೆಲಸ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಶುಕ್ರವಾರ ಡ್ಯಾನಿಶ್ ಸಿದ್ದಿಕಿ ಹತ್ಯೆ:
ಸ್ಪಿನ್ ಬೋಲ್ಡಾಕ್ ಜಿಲ್ಲೆಯ ಕಂದಹಾರ್ ಪ್ರದೇಶದಲ್ಲಿ ಅಫ್ಘಾನ್ ಭದ್ರತಾ ಪಡೆ ಹಾಗೂ ತಾಲಿಬಾನ್ ನಡುವೆ ನಡೆದ ಘರ್ಷಣೆಯಲ್ಲಿ ಫೋಟೋ ಜರ್ನಲಿಸ್ಟ್ ಡ್ಯಾನಿಶ್ ಸಿದ್ದಿಕಿ ಮೃತಪಟ್ಟಿದ್ದರು.

English summary
Photo Journlist Danish Siddiqui’s Body To Be Buried At Jamia Millia Islamia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X