ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಎಫ್‌ಐ- ಎಸ್‌ಡಿಪಿಐ ಮಧ್ಯೆ ನಂಟಿಲ್ಲ: ರಾಜೀವ್ ಕುಮಾರ್

|
Google Oneindia Kannada News

ನವದೆಹಲಿ, ಅಕ್ಟೋಬರ್ 04: ಅಧಿಕಾರಿಗಳು ಕೇಳಿದ್ದ ಅಗತ್ಯ ಎಲ್ಲ ದಾಖಲೆ ಸಲ್ಲಿಸಿರುವ ರಾಜಕೀಯ ಸಂಘಟನೆ ಎಸ್‌ಡಿಪಿಐ ಹಾಗೂ ಐದು ವರ್ಷ ನಿಷೇಧಿಸಲ್ಪಟ್ಟ ಪಿಎಫ್‌ಐ ಮಧ್ಯದಲ್ಲಿ ಯಾವುದೇ ಸಂಪರ್ಕ, ಸಂಬಂಧಗಳು ಕಂಡು ಬಂದಿಲ್ಲ ಎಂದು ಕೇಂದ್ರ ಮುಖ್ಯ ಚುನಾವಣಾ ಆಯುಕ್ತರಾದ ರಾಜೀವ್ ಕುಮಾರ್ ತಿಳಿಸಿದ್ದಾರೆ.

ದೇಶಾದ್ಯಂತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಹಾಗೂ ಅದರ ಅಂಗಸಂಸ್ಥೆಗಳ ಮೇಲೆ ಕಾನೂನು ಕ್ರಮ ಮುಂದುವರಿಯುತ್ತಿದೆ. ಈ ನಿಟ್ಟಿನಲ್ಲಿ ಕೇಳಲಾಗಿದ್ದ ಅಗತ್ಯ ದಾಖಲೆಗಳನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಒದಗಿಸಿದೆ. ಇದನ್ನು ಚುನಾವಣೆ ಆಯೋಗ ಹಾಗೂ ಸಂಬಂಧಿಸಿದ ಅಧಿಕಾರಿಗಳು ಪರಿಶೀಲಿಸಿದ್ದಾರೆ. ಇದರಲ್ಲಿ ಕೇಂದ್ರ ಗೃಹ ಸಚಿವಾಲಯ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಹಾಗೂ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿ ನಡುವೆ ಯಾವುದೇ ಸಂಬಂಧಗಳು ಇಲ್ಲ ಎಂಬುದನ್ನು ಚುನಾವಣಾ ಆಯೋಗಕ್ಕೆ ತಿಳಿದು ಬಂದಿದೆ.

PFI and SDPI in between no link Pole body said

ಪಿಎಫ್‌ಐ-ಬಿಜೆಪಿ ಒಳ ಒಪ್ಪಂದ: ನ್ಯಾಯಾಂಗ ತನಿಖೆಗೆ ಸಿದ್ದರಾಮಯ್ಯ ಆಗ್ರಹ ಪಿಎಫ್‌ಐ-ಬಿಜೆಪಿ ಒಳ ಒಪ್ಪಂದ: ನ್ಯಾಯಾಂಗ ತನಿಖೆಗೆ ಸಿದ್ದರಾಮಯ್ಯ ಆಗ್ರಹ

ಎಸ್‌ಡಿಪಿಐ ನಿಷೇಧಕ್ಕೆ ಒಳಪಟ್ಟಿಲ್ಲ
ಇತ್ತೀಚೆಗೆ ಸೆಪ್ಟಂಬರ್ 28 ರಂದು ಕೇಂದ್ರ ಸರ್ಕಾರವು ದೇಶದ ಹಿತ ದೃಷ್ಟಿಯಿಂದ ಭದ್ರತೆ ಮತ್ತು ಭಯೋತ್ಪಾದಕ ಸಂಬಂಧಗಳಿಗೆ ಆರೋಪದ ಮೇರೆಗೆ ತೀವ್ರಗಾಮಿ ಸಂಘಟನೆಯಾದ ಪಿಎಫ್‌ಐ ಮತ್ತದರ ಅಂಗ ಸಂಸ್ಥೆಗಳನ್ನು ಸೇರಿ ಒಟ್ಟು ಎಂಟು ಸಂಘಟನೆಗಳನ್ನು ಐದು ವರ್ಷ ನಿಷೇಧಿಸಿದೆ. ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ (ಯುಎಪಿಎ) ಅಡಿಯಲ್ಲಿ ಸಂಘಟನೆಗಳನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಆದರೆ ಇದರಲ್ಲಿ ಎಸ್‌ಡಿಪಿಐ ನಿಷೇಧಕ್ಕೆ ಒಳಪಟ್ಟಿಲ್ಲ ಎಂದು ರಾಜೀವ್ ಕುಮಾರ್ ತಿಳಿಸಿದ್ದಾರೆ.

ಪಿಎಫ್‌ಐ ಚಟುವಟಿಕೆ ಕುರಿತು ತನಿಖಾ ಸಂಸ್ಥೆಗಳಿಂದ ತನಿಖೆ ಮುಂದುವರಿದಿದೆ. ಈ ವೇಳೆ ಎಸ್‌ಡಿಪಿಐಗೆ ಕೆಲವು ಅಗತ್ಯ ದಾಖಲೆಗಳನ್ನು ನೀಡುವಂತೆ ಸೂಚಿಸಲಾಗಿತ್ತು. ಅದರಂತೆ ಸಲ್ಲಿಕೆಯಾದ ದಾಖಲೆ ಪರಿಶೀಲಿಸಿದ ಅಧಿಕಾರಿಗಳು ಈ ಎರಡು ಸಂಘಟನೆಗಳನ ಮಧ್ಯದಲ್ಲಿನ ಸಂಬಂಧ ಬಗ್ಗೆ ಸ್ಪಷ್ಟತೆ ನೀಡಿದ್ದಾರೆ. ಪಿಎಫ್‌ಐನ ಎಲ್ಲ ಚಟುವಟಿಕೆಗಳ ಬಗ್ಗೆ ತಿಳಿದಿದೆ. ಆದರೆ ಎಸ್‌ಡಿಪಿಐ ಅಗತ್ಯ ದಾಖಲೆ ನೀಡಿದ್ದು, ಅದಕ್ಕೂ ಪಿಎಫ್‌ಐ ನಡುವೆ ಸಂಪರ್ಕ ಕಂಡು ಬಂದಿಲ್ಲ. ಎಸ್‌ಡಿಪಿಐ ಪಕ್ಷಕ್ಕೆ ಸಂಬಂಧಿಸಿದಂತೆ ಯಾವುದೇ ಲೋಪಗಳಿಲ್ಲ ಎಂದು ಅವರು ಹೇಳಿದ್ದಾರೆ.

PFI and SDPI in between no link Pole body said

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ 'PFI ಭಾಗ್ಯ' ಪೋಸ್ಟರ್ ಬಿಡುಗಡೆ ಮಾಡಿದ ಆರ್ ಅಶೋಕ್

ಸ್ಥಳಿಯ ಸಂಸ್ಥೆಗಳಲ್ಲಿ ಎಸ್‌ಡಿಪಿಐ ಸದಸ್ಯತ್ವ
2009 ಜೂನ್ 21ರಂದು ಸ್ಥಾಪನೆಯಾದ ಎಸ್‌ಡಿಪಿಐಯು ಏಪ್ರಿಲ್ 13ರ 2010ರಂದು ಭಾರತದ ಚುನಾವಣಾ ಆಯೋಗದಲ್ಲಿ ನೋಂದಾಯಿಸಿಕೊಂಡಿದೆ. ಈವರೆಗೆ ಎಸ್‌ಡಿಪಿಐ ಪಕ್ಷವು ಕೇರಳ, ತಮಿಳುನಾಡು, ರಾಜಸ್ತಾನ್, ಬಿಹಾರ, ಕರ್ನಾಟಕ, ಪಶ್ಚಿಮ ಬಂಗಾಳ ಮತ್ತು ಆಂಧ್ರಪ್ರದೇಶದ ರಾಜ್ಯಗಳಲ್ಲಿ ಪುರಸಭೆ, ನಗರ ಪಾಲಿಕೆ ಮತ್ತು ಗ್ರಾಮ ಪಂಚಾಯತ್‌ಗಳಲ್ಲಿ ತನ್ನ ಸದಸ್ಯರನ್ನು ಆಯ್ಕೆ ಮಾಡಿದೆ.

ಎಸ್‌ಡಿಪಿಐ ಪಕ್ಷರು ಮುಸ್ಲಿಮರು ಸೇರಿದಂತೆ ದಲಿತರು, ಹಿಂದುಳಿದ ವರ್ಗ, ಆದಿವಾಸಿಗಳು ಹೀಗೆ ಎಲ್ಲ ನಾಗರಿಕರ ಏಳಿಗೆಗೆ ಹಾಗೂ ಏಕರೂಪದ ಅಭಿವೃದ್ಧಿ ದೃಷ್ಟಿಯಿಂದ ಅಸ್ತಿತ್ವಕ್ಕೆ ಬರಲಾಗಿದೆ ಪಕ್ಷವು ಹೇಳಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

English summary
Popular Front of India (PFI) and Social Democratic Party of India (SDPI) in between no link found Central Election commission.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X