• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚಳಿಗಾಲದ ನಂತರ ಪೆಟ್ರೋಲಿಯಂ ದರ ತುಸು ಕಡಿಮೆಯಾಗಲಿದೆ:ಧರ್ಮೇಂದ್ರ ಪ್ರಧಾನ್

|

ನವದೆಹಲಿ,ಫೆಬ್ರವರಿ 26:ದಿನೇ ದಿನೆ ತೈಲ ದರ ಏರಿಕೆಯಾಗುತ್ತಿದೆ. ಚಳಿಗಾಲದ ಬಳಿಕ ಪೆಟ್ರೋಲಿಯಂ ದರ ತುಸು ಕಡಿಮೆಯಾಗಲಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

ದೇಶದಲ್ಲಿ ಕಳೆದ ಕೆಲವು ವಾರಗಳಿಂದೀಚೆಗೆ ಪ್ರತಿ ದಿನ ಪೆಟ್ರೋಲ್, ಡೀಸೆಲ್ ಹಾಗೂ ಎಲ್‌ಪಿಸಿ ಬೆಲೆ ಹೆಚ್ಚಾಗುತ್ತಿದೆ. ಪೆಟ್ರೋಲ್ 100ಸನಿಹ ತಲುಪಿದೆ.

ಭಾರತ ಬಂದ್ ಕರೆ ನೀಡುವುದರ ಹಿಂದಿನ ನಿಜವಾದ ಕಾರಣವೇನು?

ಗುರುವಾರವಷ್ಟೇ ಎಲ್‌ಪಿಜಿಸಿಲಿಂಡರ್ ಬೆಲೆಯಲ್ಲಿ 24ರೂನಷ್ಟು ಏರಿಕೆಯಾಗಿದೆ. ಇದರೊಂದಿಗೆ ಫೆಬ್ರವರಿಯಲ್ಲಿ ಒಟ್ಟು ಮೂರು ಬಾರಿ ಎಲ್‌ಪಿಜಿ ದರ ಏರಿಕೆಯಾದಂತಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯ ಮೇಲೆ ಪರಿಣಾಮ

ಅಂತಾರಾಷ್ಟ್ರೀಯ ಮಾರುಕಟ್ಟೆಯ ಮೇಲೆ ಪರಿಣಾಮ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಏರಿಕೆಯಾಗಿರುವುದುಗ್ರಾಹಕರ ಮೇಲೂ ಪರಿಣಾಮ ಬೀರಿದೆ. ಚಳಿಗಾಲ ಮುಗಿಯುತ್ತಿದ್ದಂತೆ ಪೆಟ್ರೋಲ್ ಬೆಲೆ ಸ್ವಲ್ಪ ಇಳಿಕೆಯಾಗಲಿದೆ.

ಇದು ಅಂತಾರಾಷ್ಟ್ರೀಯ ವಿಚಾರ, ಬೇಡಿಕೆ ಹೆಚ್ಚಾಗಿರುವುದರಿಂದ ಬೆಲೆ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಬೆಲೆ ಇಳಿಕೆಯಾಗಲಿದೆ ಎಂದರು.

ತೈಲ ನಿಕ್ಷೇಪ

ತೈಲ ನಿಕ್ಷೇಪ

ದೇಶದ ಮೊದಲ ತೈಲ ನಿಕ್ಷೇಪಗಳು ಅಸ್ಸಾಂನ ಡಿಗ್ಬಾಯ್ ಮತ್ತು ದುಲಿಯಾಜನ್ ಪ್ರದೇಶಗಳ ಬಳಿ ಪತ್ತೆಯಾಗಿತ್ತು.ಮತ್ತು ದೇಶದ ತೈಲ ಸಂಪನ್ಮೂಲಗಳಲ್ಲಿಶೇ.18ರಷ್ಟು ಈಶಾನ್ಯ ಪೂರ್ವ ಪ್ರದೇಶಗಳಲ್ಲಿ ಇದೆ.

ಅಸ್ಸಾಂ, ಅರುಣಾಚಲ,ನಾಗಾಲ್ಯಾಂಡ್,ಮಿಜೋರಾಂ,ತ್ರಿಪುರಾ ತೈಲ ಹಾಗೂ ಅನಿಲ ಕ್ಷೇತ್ರಗಳಿಂದ ತುಂಬಿರುವ ಪ್ರದೇಶಗಳಾಗಿವೆ.

ಬೆಂಗಳೂರಲ್ಲಿ ಪೆಟ್ರೋಲ್ ದರ

ಬೆಂಗಳೂರಲ್ಲಿ ಪೆಟ್ರೋಲ್ ದರ

ಬೆಂಗಳೂರಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 93.98 ರೂಪಾಯಿಗೆ ತಲುಪಿದೆ. ಡೀಸೆಲ್ ದರವು ಪ್ರತಿ ಲೀಟರ್‌ಗೆ 86.21ರೂಪಾಯಿಗೆ ಮುಟ್ಟಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಪ್ರಕಟಿಸಿದೆ.

ಇಂಧನ ಬೆಲೆ ಏರಿಕೆ ವಿರೋಧಿಸಿ ಭಾರತ ಬಂದ್

ಇಂಧನ ಬೆಲೆ ಏರಿಕೆ ವಿರೋಧಿಸಿ ಭಾರತ ಬಂದ್

ಇಂಧನ ಬೆಲೆ ಏರಿಕೆ, ಇ-ವೇ ಬಿಲ್ ಮತ್ತು ಸರಕು ಸೇವಾ ತೆರಿಗೆ ವಿರೋಧಿಸಿ ಅಖಿಲ ಭಾರತ ವರ್ತಕರ ಒಕ್ಕೂಟ ಭಾರತ್ ಬಂದ್ ಗೆ ಕರೆ ನೀಡಿದೆ. ಶುಕ್ರವಾರ ದೇಶಾದ್ಯಂತ ಎಲ್ಲ ವಾಣಿಜ್ಯ ಮಾರುಕಟ್ಟೆಗಳು ಬಂದ್ ಆಗಿದೆ.. ಅಖಿಲ ಭಾರತ ವರ್ತಕರ ಒಕ್ಕೂಟ ಕರೆ ನೀಡಿರುವ ಭಾರತ್ ಬಂದ್ ಗೆ 40,000 ವ್ಯಾಪಾರಿ ಸಂಘಗಳು ಬೆಂಬಲ ವ್ಯಕ್ತಪಡಿಸಿವೆ. ಅಖಿಲ ಭಾರತ ಸಾರಿಗೆ ಕಲ್ಯಾಣ ಸಂಘ ಸಹ ಭಾರತ್ ಬಂದ್ ಹಾಗೂ ಚಕ್ಕಾ ಜಾಮ್ ಹೋರಾಟಕ್ಕೆ ಬೆಂಬಲಿಸಿದೆ.

English summary
Allaying concerns of people over the upward spiralling of fuel price, Union Minister Dharmendra Pradhan on Friday said the price will decrease as winter season ends.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X