ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶುಕ್ರವಾರದಿಂದ ಪೆಟ್ರೋಲ್ ದರ ಇಳಿಕೆ

|
Google Oneindia Kannada News

ನವದೆಹಲಿ, ಆ.14 : ಬೆಲೆ ಏರಿಕೆ ಸುದ್ದಿಯನ್ನು ಕೇಳಿ ಆತಂಕಗೊಳ್ಳುತ್ತಿದ್ದ ಜನರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಶುಕ್ರವಾರದಿಂದ ಪೆಟ್ರೋಲ್ ಬೆಲೆ ದೇಶಾದ್ಯಂತ 1.89 ರೂ.ನಿಂದ 2.38 ರೂ. ಕಡಿಮೆಯಾಗಲಿದೆ. ಕರ್ನಾಟಕದಲ್ಲಿಯೂ ಪೆಟ್ರೋಲ್ ಬೆಲೆ ಮೂರು ರೂ. ಕಡಿಮೆಯಾಗುವ ಸಾಧ್ಯತೆ ಇದೆ.

ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಧಮೇಂದ್ರ ಪ್ರಧಾನ್ ಈ ಕುರಿತು ಟ್ವಿಟ್ ಮಾಡಿದ್ದಾರೆ. ಈ ಮೂಲಕ ದೇಶದ ಜನರಿಗೆ ಸ್ವಾತಂತ್ರ್ಯ ದಿನಾಚರಣೆ ಕೊಡುಗೆಯನ್ನು ಕೇಂದ್ರ ಸರ್ಕಾರ ನೀಡಿದೆ. ನೂತನ ದರದ ಅನ್ವಯ ಕರ್ನಾಟಕದಲ್ಲಿ ಪೆಟ್ರೋಲ್ ದರ ಮೂರು ರೂ. ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

Petrol price

ಅಂತಾರಾಷ್ಟ್ರೀಯ ತೈಲ ಬೆಲೆ ಹಾಗೂ ರೂಪಾಯಿ ಡಾಲರ್ ವಿನಿಮಯ ದರಕ್ಕೆ ಅನುಗುಣವಾಗಿ ರಾಜ್ಯದ ಚಿಲ್ಲರೆ ಮಳಿಗೆಗಳು ಪ್ರತಿ ತಿಂಗಳ 1 ಮತ್ತು 16ರಂದು ದರ ಪರಿಷ್ಕರಿಸುತ್ತವೆ. ತೈಲ ಕಂಪನಿಗಳು ಆ.1ರಂದು ಪೆಟ್ರೋಲ್ ಬೆಲೆಯನ್ನು 1.09 ರೂ. ಇಳಿಸಿದ್ದವು. ನಿಯಮದ ಪ್ರಕಾರ ಸೆ.1ರಂದು ಡೀಸೆಲ್ ದರ ಪರಿಷ್ಕರಣೆಯಾಗಲಿದೆ. [ಪೆಟ್ರೋಲ್ ದರ 1 ರೂ. ಇಳಿಕೆ]

ಆ.1ರಂದು ಕೇಂದ್ರ ಸರ್ಕಾರ ಪೆಟ್ರೋಲ್ ದರವನ್ನು 1.09 ರೂ. ಕಡಿತಗೊಳಿಸಿತ್ತು. ಕಳೆದ ಏಪ್ರಿಲ್ 15ರಂದು ಸರ್ಕಾರ ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ 70 ಪೈಸೆ ಇಳಿಸಿತ್ತು. ಇದಾದ ನಂತರ ಜೂನ್ 30ರಂದು ಪೆಟ್ರೋಲ್ 1.69 ರೂ. ಹಾಗೂ ಡೀಸೆಲ್ 50 ಪೈಸೆ ಏರಿಕೆಯಾಗಿತ್ತು.

ಸದ್ಯ ಬೆಂಗಳೂರು ನಗರದ ಒಳ ಭಾಗದ ಬಂಕ್‌­ ಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 79.49 ರೂ ಇದೆ. ನಗರದ ಹೊರ ಭಾಗದ ಬಂಕ್‌ ಗಳಲ್ಲಿ 78.94 ರೂ. ಇದೆ. ಇಂದು ಮಧ್ಯರಾತ್ರಿಯಿಂದ ಕಡಿಮೆಯಾಗುವ ದರದ ಅನ್ವಯ ಎಷ್ಟು ದರ ಇಳಿಕೆಯಾಗುತ್ತದೆ? ಎಂದು ಕಾದು ನೋಡಬೇಕು.

English summary
Petroleum Minister Dharmendra Pradhan (@dpradhanbjp) said, price of petrol will be reduced from midnight of 14th August 2014 in the range of Rs.1.89-2.38.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X