ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಟ್ರೋಲ್ ಬೆಲೆ ಏರಿಕೆ: ಬೆಂಗಳೂರಲ್ಲಿ ಲೀ.ಗೆ 81 ರೂ!

|
Google Oneindia Kannada News

ಮುಂಬೈ, ಸೆಪ್ಟೆಂಬರ್ 01: ಪೆಟ್ರೋಲ್, ಡೀಸೆಲ್ ಬೆಲೆ ಇಳಿಯುವ ಪಕ್ಷಣ ಕಾಣುತ್ತಿಲ್ಲ. ಇಂಧನ ದರದಲ್ಲಿ ಇಂದು ಮತ್ತಷ್ಟು ಏರಿಕೆಯಾಗಿದ್ದು ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 81.12 ರೂ.ಗೆ ಏರಿಕೆಯಾಗಿದೆ.

ಡೀಸೆಲ್ ಬೆಲೆಯೂ ಕಳೆದ ಕೆಲ ದಿನಗಳಿಂದ ಗಣನೀಯ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದ್ದು, ಇಂದು ಬೆಂಗಳೂರಿನಲ್ಲಿ ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 72.51 ರೂ. ತಲುಪಿದೆ.

ಡಾಲರ್ ಎದುರು ರೂಪಾಯಿ ಪಾತಾಳಕ್ಕೆ; ಪೆಟ್ರೋಲ್, ಡೀಸೆಲ್ ದರ ಗಗನಕ್ಕೆಡಾಲರ್ ಎದುರು ರೂಪಾಯಿ ಪಾತಾಳಕ್ಕೆ; ಪೆಟ್ರೋಲ್, ಡೀಸೆಲ್ ದರ ಗಗನಕ್ಕೆ

ವಾಣಿಜ್ಯನಗರ ಮುಂಬೈಯಲ್ಲಿ ಪೆಟ್ರೋಲ್, ಡೀಸೆಲ್ ದರ ಕ್ರಮವಾಗಿ ಲೀಟರ್ ಗೆ 86.09 ರೂ.-74.76 ರೂ. ದಾಖಲಾಗಿದೆ.

ಜಿಎಸ್ಟಿ ವ್ಯಾಪ್ತಿಗೆ ಪೆಟ್ರೋಲ್ : ರಾಜ್ಯಗಳಿಂದ ವಿರೋಧಜಿಎಸ್ಟಿ ವ್ಯಾಪ್ತಿಗೆ ಪೆಟ್ರೋಲ್ : ರಾಜ್ಯಗಳಿಂದ ವಿರೋಧ

ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್ ಗೆ 78.68 ರೂ, ಆಗಿದ್ದರೆ ಡೀಸೆಲ್ ದರ ಲೀಟರ್ ಗೆ 70.42 ರೂ ತಲುಪಿದೆ.

Petrol and Diesel prices hit record high

ಆಗಸ್ಟ್ 16 ರ ನಂತರ ಡಾಲರ್ ಎದುರು ರೂಪಾಯಿ ದರ ಕುಸಿತ ಕಂಡಿದ್ದು ಇಂಧನ ಬೆಲೆಯ ಮೇಲೆ ಪರಿಣಾಮ ಬೀರಿದೆ. ಪ್ರತಿ ಡಾಲರ್ ಗೆ ರೂಪಾಯಿ ಮೌಲ್ಯ 71 ರೂ. ತಲುಪಿದೆ.

English summary
Fuel prices continued to rise on Saturday, with petroland diesel prices touching a new record high in several metropolitan cities, including Delhi and Mumbai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X