ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಲ್ಮಾನ್ ಗೆ ಸುಲಭವಾಗಿ ಜಾಮೀನು ಸಿಕ್ಕಿದ್ದು ಏಕೆ? PETA ಪ್ರಶ್ನೆ

|
Google Oneindia Kannada News

ನವದೆಹಲಿ, ಏಪ್ರಿಲ್ 7: ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಜಾಮೀನು ಸಿಕ್ಕ ಕುರಿತು ಪೆಟಾ (People for the Ethical Treatment of Animals ) ವಿರೋಧ ವ್ಯಕ್ತಪಡಿಸಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ

"ಸಲ್ಮಾನ್ ಖಾನ್ ಮತ್ತೆ ತಮ್ಮ ಸಿನಿಮಾ ಜೀವನಕ್ಕೆ ಹಿಂದಿರುಗುತ್ತಾರೆ. ಆದರೆ ಕೃಷ್ಣಮೃಗಗಳು ಮಾತ್ರ ತಮ್ಮ ಜೀವಕ್ಕೆ ಅತ್ಯಂತ ಹೆಚ್ಚಿನ ಬೆಲೆ ತೆರಬೇಕಾಗುತ್ತಿದೆ" ಎಂದು ಅದು ವಿಷಾದ ವ್ಯಕ್ತಪಡಿಸಿದೆ.

ಸಲ್ಮಾನ್ ಗೆ ಜಾಮೀನು: ಅಂಧಾಭಿಮಾನಕ್ಕೆ ಟ್ವಿಟ್ಟಿಗರ ಧಿಕ್ಕಾರ..!ಸಲ್ಮಾನ್ ಗೆ ಜಾಮೀನು: ಅಂಧಾಭಿಮಾನಕ್ಕೆ ಟ್ವಿಟ್ಟಿಗರ ಧಿಕ್ಕಾರ..!

ಪ್ರಾಣಿಗಳ ಸಂರಕ್ಷಣೆಗಾಗಿ ಇರುವ ಎನ್ ಜಿಒ ಪೆಟಾ, 'ಈಗಿನ ಕಾಲದಲ್ಲಿ ವನ್ಯಜೀವಿಗಳ ಮೇಲೆ ನಡೆವ ದೌರ್ಜನ್ಯವನ್ನು ತ್ವರಿತ ನ್ಯಾಯಾಲಯದ ಮೂಲಕ ಇತ್ಯರ್ಥಗೊಳಿಸಲಾಗುತ್ತದೆ. ಮತ್ತು ಜಾಮೀನನ್ನು ನಿರಾಕರಿಸಲಾಗುತ್ತದೆ. 7 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಆದರೆ ಸಲ್ಮಾನ್ ಖಾನ್ ಅವರಿಗೆ ಸುಲಭವಾಗಿ ಜಾಮೀನು ಸಿಕ್ಕಿದ್ದು ಸರಿಯೇ?' ಎಂದು ಅದು ಪ್ರಶ್ನಿಸಿದೆ.

PETA condemns Salmans bail in Blackbuck poaching case

1998 ರಲ್ಲಿ ನಡೆದ ಕೃಷ್ಣ ಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಏ.5 ರಂದು ರಾಜಸ್ಥಾನದ ಜೋಧಪುರ ನ್ಯಾಯಾಲಯ ಸಲ್ಮಾನ್ ಖಾನ್ ಅವರಿಗೆ 5 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಆದರೆ ಅವರು ಇಂದು ಜಾಮೀನಿನ ಮೇಲೆ ಬಿಡುಗಡೆಯಾಗುತ್ತಿದ್ದಾರೆ.

English summary
The People for the Ethical Treatment of Animals (PETA) India has condemned the decision of a Jodhpur Court to grant bail to Bollywood actor Salman Khan in connection with the 1998 blackbuck poaching case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X