ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೊಡ್ಡ ಹೆಸರಿಟ್ಟುಕೊಂಡು ಬಂದವರು ದೇಶ ಉದ್ಧಾರ ಮಾಡಲಿಲ್ಲ: ಮೋದಿ

|
Google Oneindia Kannada News

Recommended Video

ದೊಡ್ಡ ಹೆಸರಿಟ್ಟುಕೊಂಡು ಬಂದವರು ದೇಶ ಉದ್ಧಾರ ಮಾಡಲಿಲ್ಲ | Oneindia Kannada

‌ದೊಡ್ಡ ಕುಟುಂಬದ ಹೆಸರಿಟ್ಟುಕೊಂಡು ಬಂದರು, ಹೋದರು. ಆದರೆ ಭಾರತ ಮಾತ್ರ ಅಭಿವೃದ್ಧಿ ಆಗಲಿಲ್ಲ ಎಂದಿದ್ದಾರೆ ಪ್ರಧಾನಿ ನರೇಂದ್ರ ಮೋದಿ. ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ದೊಡ್ಡ ಕುಟುಂಬದ ಹೆಸರಿಟ್ಟುಕೊಂಡು ಬಂದು ಈ ದೇಶವನ್ನು ಆಳಿದರು. ಅತ್ಯುತ್ತಮ ಪ್ರತಿಭೆ ಹಾಗೂ ನೈಸರ್ಗಿಕ ಸಂಪನ್ಮೂಲ ಇದ್ದರೂ ದೇಶ ಶ್ರೀಮಂತವಾಗಲಿಲ್ಲ ಎಂದು ಶುಕ್ರವಾರ ಹೇಳಿದ್ದಾರೆ.

ಈ ಹಿಂದೆ ಆಳಿದವರು ಪಕ್ಷದ "ಮತ ಬ್ಯಾಂಕ್"ಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಬಡತನ ತೊಲಗಿಸಲಿಲ್ಲ ಎಂದು ಆರೋಪ ಮಾಡಿದ ಅವರು, ದೊಡ್ಡ ಕುಟುಂಬದ ಹೆಸರುಗಳ ಜತೆಗೆ ಆಳಲು ಬಂದವರು ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲಿಲ್ಲ ಎಂದರು. ದೈನಿಕ್ ಜಾಗರಣ್ ಮಾಧ್ಯಮ ಸಮೂಹ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

People with big surnames came and went, but country could not develop

ಕುಂಭರಾಮ್ ಹೆಸರನ್ನು ಕುಂಭಕರಣ್ ಎಂದಿದ್ದ ರಾಹುಲ್ ರನ್ನು ಗೇಲಿ ಮಾಡಿದ ಪ್ರಧಾನಿಕುಂಭರಾಮ್ ಹೆಸರನ್ನು ಕುಂಭಕರಣ್ ಎಂದಿದ್ದ ರಾಹುಲ್ ರನ್ನು ಗೇಲಿ ಮಾಡಿದ ಪ್ರಧಾನಿ

ನೆಹರೂ-ಗಾಂಧಿ ಕುಟುಂಬದ ಬಗ್ಗೆ ಹೆಸರು ಎತ್ತದೆ ಪ್ರಸ್ತಾವ ಮಾಡಿದ ಅವರು, ದೇಶಕ್ಕೆ ಗುರಿ ಇತ್ತು. ಆದರೆ ಬದ್ಧತೆ ಕೊರತೆ ಇತ್ತು. ಇನ್ನು ಬಡತನವನ್ನು ನಿರ್ಮೂಲನೆ ಮಾಡಿಬಿಟ್ಟಿದ್ದರೆ, ಗರೀಬೀ ಹಠಾವೋ (ಬಡತನ ತೊಲಗಿಸಿ) ಎಂಬ ಘೋಷಣೆ ನೀಡಲು ಹೇಗೆ ಸಾಧ್ಯವಿತ್ತು? ಅದರಿಂದ 'ಮತಬ್ಯಾಂಕ್' ರಾಜಕಾರಣಕ್ಕೆ ಹೊಡೆತ ಬೀಳುತ್ತಿತ್ತು ಎಂದು ಪ್ರಧಾನಿ ಹೇಳಿದ್ದಾರೆ.

English summary
Hitting out at the Congress, Prime Minister Narendra Modi Friday said people with “big surnames” ruled the country but India could not prosper despite having the best talent and natural resources.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X