ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1942ರಲ್ಲಿ 'ಭಾರತ್ ಛೋಡೋ', ಇಂದು 'ಭಾರತ್ ಜೋಡೋ': ಮೋದಿ

|
Google Oneindia Kannada News

ನವದೆಹಲಿ, ಆಗಸ್ಟ್ 15: 1942ರಲ್ಲಿ ಭಾರತ್ ಛೋಡೋ (ಕ್ವಿಟ್ ಇಂಡಿಯಾ ಅಥವಾ ಚಲೇ ಜಾಂವ್) ಚಳುವಳಿ ನಡೆಸಲಾಗಿತ್ತು. ಇಂದು ನಾವು ಭಾರತ್ ಜೋಡೋ (ಭಾರತವನ್ನು ಒಗ್ಗೂಡಿಸುವ) ಚಳುವಳಿ ಆರಂಭಿಸಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆ ಭಾಷಣಕ್ಕೆ ಪ್ರಧಾನಿಗೆ 9 ಸಾವಿರಕ್ಕೂ ಹೆಚ್ಚು ಸಲಹೆಸ್ವಾತಂತ್ರ್ಯ ದಿನಾಚರಣೆ ಭಾಷಣಕ್ಕೆ ಪ್ರಧಾನಿಗೆ 9 ಸಾವಿರಕ್ಕೂ ಹೆಚ್ಚು ಸಲಹೆ

ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ನಂತರ, ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ''ಸ್ವಾತಂತ್ರ್ಯಕ್ಕಾಗಿ ತಮ್ಮ ಸುಖ, ಸಂತೋಷಗಳನ್ನು ತ್ಯಾಗ ಮಾಡಿದವರನ್ನು ನಾವು ಇಂದು ನೆನಪಿಸಿಕೊಳ್ಳಬೇಕು. ಅವರ ಆ ತ್ಯಾಗ, ಬಲಿದಾನಗಳಿಂದಲೇ ನಾವು ಇಂದು ಸ್ವತಂತ್ರ್ಯ ದೇಶದಲ್ಲಿ ಜೀವಿಸುವಂತಾಗಿದೆ. ಅವರ ಬಲಿದಾನಗಳನ್ನು ಸಾರ್ಥಕಗೊಳಿಸಬೇಕೆಂದರೆ ನಾವು ಭಾರತ್ ಜೋಡೋ ಚಳವಳಿಯನ್ನು ಹಮ್ಮಿಕೊಳ್ಳಲೇಬೇಕು'' ಎಂದು ವಿವರಿಸಿದರು.

People should determine to construct a better India: Modi

ಇದು, ಪ್ರಧಾನಿ ನರೇಂದ್ರ ಮೋದಿಯವರ 4ನೇ ಸ್ವಾತಂತ್ರ್ಯೋವದ ಭಾಷಣವಾಗಿದೆ. ಅವರ ಭಾಷಣದ ಪ್ರಮುಖ ಅಂಶಗಳು ಇಲ್ಲಿವೆ.

In Pics : ದೇಶದೆಲ್ಲೆಡೆ 71ನೇ ಸ್ವಾತಂತ್ರ್ಯ ದಿನಾಚರಣೆಯ ಕಲರವ

- ಈ ವರ್ಷ ಕ್ವಿಟ್ ಇಂಡಿಯಾ ಚಳುವಳಿಯ 75ನೇ ವರ್ಷವಾಗಿದ್ದು, ಚಂಪಾರಣ ಸತ್ಯಾಗ್ರಹದ 100ನೇ ವರ್ಷಾಚರಣೆಯೂ ಆಗಿದೆ. ಇಷ್ಟೇ ಅಲ್ಲದೆ, ಗಣೇಶ ಉತ್ಸವವು ನಮ್ಮ ದೇಶದಲ್ಲಿ ಆರಂಭವಾಗಿ 125 ವರ್ಷಗಳಾಗಿವೆ. ಹಾಗಾಗಿ, ಈ ಬಾರಿಯ ಸ್ವಾತಂತ್ರ್ಯೋತ್ಸವ ಭಾರೀ ವಿಶೇಷವಾದದ್ದು.

- 1942ರಿಂದ 1947ರವರೆಗೆ ನಡೆದ ಕ್ವಿಟ್ ಇಂಡಿಯಾ ಚಳುವಳಿಯು ಭಾರತಕ್ಕೆ ಸ್ವತಂತ್ರ್ಯ ತಂದುಕೊಡುವ ನಿಟ್ಟಿನಲ್ಲಿ ಮಹತ್ವಪೂರ್ಣವಾದದ್ದು.

- ಆ ಅವಧಿಯಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ತಮ್ಮ ತನು,ಮನ, ಜೀವನಗಳನ್ನೇ ದೇಶಕ್ಕಾಗಿ ಹೆಚ್ಚೆಚ್ಚು ಸಮರ್ಪಿಸಿದರು. ಹೆಗಲಿಗೆ ಹೆಗಲು ಕೊಟ್ಟು ನಿಂತು ಭಾರತಕ್ಕೆ ಸ್ವತಂತ್ರ್ಯ ತಂದುಕೊಡಲೇಬೇಕೆಂಬ ಉತ್ಕಟ ಅಭೀಪ್ಸೆಯಿಂದ ಹೋರಾಟ ನಡೆಸಿದರು. ಅಂಥದ್ದೇ ಒಂದು ಹೋರಾಟ ಈಗ ನಮ್ಮ ಭಾರತದ ಅಭಿವೃದ್ಧಿಗಾಗಿ ಆಗಲೇಬೇಕಿದೆ.

- ನಮ್ಮ ಸಮಾಜದ ಅನಿಷ್ಟಗಳ ವಿರುದ್ಧ, ಸಮಸ್ಯೆಗಳ ವಿರುದ್ಧ ಎಲ್ಲಾ ನಾಗರಿಕರೂ ಸಿಡಿದೇಳಬೇಕಿದೆ. 'ಚಲ್ತಾ ಹೇ' (ಹೇಗೋ ನಡೆದುಹೋಗುತ್ತೆ) ಎನ್ನುವ ಮನಸ್ಥಿತಿಗಳಿಂದ ನಾವು ಹೊರಬರಬೇಕಿದೆ.

- 2018ರ ಜನವರಿ 1ನೇ ದಿನಾಂಕವು ಕೇವಲ ಹೊಸ ವರ್ಷದ ಆಚರಣೆಯಲ್ಲ. ಅಂದು, ಈ ಹೊಸ ಶತಮಾನದಲ್ಲಿ ಹುಟ್ಟಿದವರು 18ನೇ ವಯಸ್ಸಿಗೆ ಕಾಲಿಡುವಂಥ ಸುದಿನ. ಮುಂದಿನ ಭಾರತದ ಶಿಲ್ಪಿಗಳು ಅವರೇ. ಹಾಗಾಗಿ, ಅವರನ್ನು ಭಾರತದ 'ಭಾಗ್ಯ ವಿದಾತರು' ಎಂದು ಕರೆಯಬಯಸುತ್ತೇನೆ.

- ಭಾರತದ ಸುರಕ್ಷೆಯೇ ನಮ್ಮ ಆದ್ಯತೆ.

English summary
Prime Minister Narendra Modi, urged the people of India should be determined to construct a better India in his Independence day speech at Red Fort on August 15, 2017
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X