ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿವೃತ್ತಿ ಬಳಿಕ ನ್ಯಾಯಾಧೀಶರು ಸರ್ಕಾರಿ ಹುದ್ದೆಗೆ ಏರಬಾರದು- ದೀಪಕ್ ಗುಪ್ತಾ

|
Google Oneindia Kannada News

ನವ ದೆಹಲಿ, ಮೇ 9: ಸುಪ್ರೀಂ ಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ಸಮಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇದೀಗ ಅವರ ಬಗ್ಗೆ ನ್ಯಾಯಮೂರ್ತಿ ದೀಪಕ್ ಗುಪ್ತಾ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

Recommended Video

ರಾತ್ರಿ ವೇಳೆ ಮುಸ್ಲಿಂ ಸಮುದಾಯದವರ ಮನೆಗೆ ತೆರಳಿ ರೇಣುಕಾಚಾರ್ಯ ಮಾಡಿದ್ದೇನು? | Renukacharya | Oneindia Kannada

ದೀಪಕ್ ಗುಪ್ತಾ ಸಹ ಸುಪ್ರೀಂಕೋರ್ಟ್‌ ನ್ಯಾಯಾದೀಶ ಹುದ್ದೆಯಿಂದ ನಿವೃತ್ತರಾಗಿದ್ದಾರೆ. ನಿವೃತ್ತ ನಂತರ ಸರ್ಕಾರ ನೀಡುವ ಯಾವುದೇ ಹುದ್ದೆಯನ್ನು ಒಪ್ಪಿಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ. ರಂಜನ್ ಗೊಗೊಯ್ ರೀತಿ ತಾವು ಯಾವುದಾರೂ ಹುದ್ದೆಯನ್ನು ಸ್ವೀಕರುತ್ತಾರೆಯೇ ಎನ್ನುವ ಅನುಮಾನಗಳಿಗೆ ಅವರು ಉತ್ತರ ನೀಡಿದ್ದಾರೆ.

ನಾಳೆ ನಿವೃತ್ತಿ ಹೊಂದಲಿದ್ದಾರೆ ಸಿಜೆಐ ರಂಜನ್ ಗೊಗೊಯ್: z+ಭದ್ರತೆ ಮುಂದುವರಿಕೆನಾಳೆ ನಿವೃತ್ತಿ ಹೊಂದಲಿದ್ದಾರೆ ಸಿಜೆಐ ರಂಜನ್ ಗೊಗೊಯ್: z+ಭದ್ರತೆ ಮುಂದುವರಿಕೆ

ನ್ಯಾಯಾಂಗದ ಬಗ್ಗೆ ಸಾರ್ವಜನಿಕರ ಗ್ರಹಿಕೆ ಬದಲಾಗಿದೆ. ನ್ಯಾಯಾಧೀಶರು ನಿವೃತ್ತಿಯಾದ ಬಳಿಕ ಸರ್ಕಾರಿ ಹುದ್ದೆಯನ್ನು ಸ್ವೀಕರಿಸಿದಾಗ ಜನರಿಗೆ ಅನುಮಾನಗಳು ಮೂಡುತ್ತವೆ. ನನ್ನ ದೃಷ್ಟಿಯಲ್ಲಿ, ನ್ಯಾಯಾಧೀಶರು ನಿವೃತ್ತಿಯಾದ ಕೂಡಲೇ ಸರ್ಕಾರಿ ಹುದ್ದೆಗಳನ್ನು ವಹಿಸಿಕೊಂಡಾಗ ಸಾರ್ವಜನಿಕರು ಅದನ್ನು ಬಹಳ ಸಂತೋಷದಿಂದ ಸ್ವೀಕರಿಸುವುದಿಲ್ಲ ಎಂದಿದ್ದಾರೆ.

ಅಂದಹಾಗೆ, ಸಂದರ್ಶನದಲ್ಲಿ ದೀಪಕ್ ಗುಪ್ತಾ ಹಂಚಿಕೊಂಡ ಕೆಲವು ಪ್ರಮುಖ ಅಂಗಳಗಳು ಹೀಗಿವೆ.

ಇದು ಬಹುದೊಡ್ಡ ಪಿತೂರಿ: ಆರೋಪಕ್ಕೆ ರಂಜನ್ ಗೊಗೊಯ್ ಪ್ರತಿಕ್ರಿಯೆಇದು ಬಹುದೊಡ್ಡ ಪಿತೂರಿ: ಆರೋಪಕ್ಕೆ ರಂಜನ್ ಗೊಗೊಯ್ ಪ್ರತಿಕ್ರಿಯೆ

ರಾಜಕೀಯ ಹುದ್ದೆಗಳನ್ನು ಸ್ವೀಕರಿಸಬಾರದು

ರಾಜಕೀಯ ಹುದ್ದೆಗಳನ್ನು ಸ್ವೀಕರಿಸಬಾರದು

''ಕೆಲವು ಬಾಹ್ಯ ಕಾರಣಗಳಿಂದಾಗಿ ನ್ಯಾಯಾಧೀಶರು ನಿವೃತ್ತಿ ನಂತರ ಈ ಹುದ್ದೆಯನ್ನು ಪಡೆದಿದ್ದಾರೆ ಎಂದು ಸಾರ್ವಜನಿಕರು ಭಾವಿಸುತ್ತಾರೆ. ಹೆಚ್ಚಿನ ಸಂಖ್ಯೆಯ ಜನರು ಹೊಂದಿರುವ ಗ್ರಹಿಕೆ ಇದು. ಆದರೆ, ಇದು ಅನೇಕ ಸಂದರ್ಭಗಳಲ್ಲಿ ಸರಿ ಇರಬಹುದು ಅಥವಾ ಇರದಿರಲುಬಹುದು. ಆದರೆ ಅದು ಸಾರ್ವಜನಿಕ ಗ್ರಹಿಕೆ. ನನ್ನ ಪ್ರಕಾರ ಸಾಮಾನ್ಯವಾಗಿ, ಸುಪ್ರೀಂ ಕೋರ್ಟ್ ನ್ಯಾಯಾಧೀಶರು ರಾಜಕೀಯ ಹುದ್ದೆಗಳನ್ನು ಸ್ವೀಕರಿಸಬಾರದು. ನಾನು ಇದರ ಪರವಾಗಿಲ್ಲ. ನಾನು ಅದನ್ನು ಮಾಡುವುದಿಲ್ಲ.''- ದೀಪಕ್ ಗುಪ್ತಾ, ಸುಪ್ರೀಂಕೋರ್ಟ್‌ ನ್ಯಾಯಾದೀಶ

ಅರುಣ್ ಜೇಟ್ಲಿ ಹೇಳಿದ ಮಾತು

ಅರುಣ್ ಜೇಟ್ಲಿ ಹೇಳಿದ ಮಾತು

''ನ್ಯಾಯಾಧೀಶರ ನಿವೃತ್ತಿ ವಯಸ್ಸು ಹೆಚ್ಚಾಗಬೇಕು. ಆದರೆ, ಅವರಿಗೆ ನಿವೃತ್ತಿಯ ನಂತರದ ಉದ್ಯೋಗಗಳು ಇರಬಾರದು ಎಂದು ನನ್ನ ಸ್ನೇಹಿತ ಅರುಣ್ ಜೇಟ್ಲಿ ಹೇಳುತ್ತಿದ್ದರು. ನ್ಯಾಯಾಧೀಶರಿಗೆ ನಿವೃತ್ತಿಯ ಸರ್ಕಾರಿ ಹುದ್ದೆಗಳು ಇರಬಾರದು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಹಾಗಿದ್ದರೂ, ನಿವೃತ್ತ ನ್ಯಾಯಾಧೀಶರು ಭರ್ತಿ ಮಾಡಬೇಕಾದ ಕೆಲವು ಹುದ್ದೆಗಳಿವೆ ಮತ್ತು ಕೆಲವು ನ್ಯಾಯಾಧೀಶರು ನ್ಯಾಯಮಂಡಳಿಗಳಲ್ಲಿ ಉತ್ತಮ ಕೆಲಸ ಮಾಡಿದ್ದಾರೆ.''- ದೀಪಕ್ ಗುಪ್ತಾ, ಸುಪ್ರೀಂಕೋರ್ಟ್‌ ನ್ಯಾಯಾದೀಶ

ಸೋಷಿಯಲ್ ಮೀಡಿಯಾದಿಂದ ದೂರ

ಸೋಷಿಯಲ್ ಮೀಡಿಯಾದಿಂದ ದೂರ

''ಹೆಚ್ಚಿನ ನ್ಯಾಯಾಧೀಶರು ಸೋಷಿಯಲ್ ಮೀಡಿಯಾದಿಂದ ದೂರವಿರುತ್ತಾರೆ. ಆದರೆ, ಅನೇಕರು ಅಲ್ಲಿ ಆಗುವ ಚರ್ಚೆಗಳ ಬಗ್ಗೆ ಗಮನ ಇಟ್ಟಿರುತ್ತಾರೆ. ಸಾಮಾಜಿಕ ಮಾಧ್ಯಮದಲ್ಲಿ ಹೇಳುವುದು ಎಂದಿಗೂ ನನ್ನ ಮೇಲೆ ಪರಿಣಾಮ ಬೀರಿಲ್ಲ. ನಾನು ಅದನ್ನು ಓದಿದ್ದೇನೆ. ಕೆಲವೊಮ್ಮೆ ಅದರ ಬಗ್ಗೆ ನಗುತ್ತೇನೆ. ಕೆಲವೊಮ್ಮೆ, ನನಗೂ ಕೋಪ ಬರುತ್ತದೆ. ಆದರೆ ನ್ಯಾಯಾಧೀಶನಾಗಿ ನನ್ನ ನಿರ್ಧಾರಗಳ ಮೇಲೆ ಪರಿಣಾಮ ಬೀರಲು ನಾನು ಬಿಡುವುದಿಲ್ಲ.''- ದೀಪಕ್ ಗುಪ್ತಾ, ಸುಪ್ರೀಂಕೋರ್ಟ್‌ ನ್ಯಾಯಾದೀಶ

ಕೇಸ್‌ಗಳನ್ನು ಲೈವ್-ಸ್ಟೀಮಿಂಗ್ ಮಾಡುವ ಪರ

ಕೇಸ್‌ಗಳನ್ನು ಲೈವ್-ಸ್ಟೀಮಿಂಗ್ ಮಾಡುವ ಪರ

''ನಾನು ಯಾವಾಗಲೂ ಕೇಸ್‌ಗಳನ್ನು ಲೈವ್-ಸ್ಟೀಮಿಂಗ್ ಮಾಡುವ ಪರವಾಗಿರುತ್ತೇನೆ. ಲೈವ್-ಸ್ಟೀಮಿಂಗ್ ಎಂಬುದು ಇಂದಿನ ಅಗತ್ಯವಾಗಿದೆ ಎಂಬುದು ನನ್ನ ವೈಯಕ್ತಿಕ ದೃಷ್ಟಿಕೋನ. ಇದು ಯಾವಾಗಲೂ ಅಗತ್ಯವಾಗಿತ್ತು. ಆದರೆ ಕೋವಿಡ್ -19 ರೊಂದಿಗೆ, ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳಬೇಕಾಗಿರುವುದರಿಂದ ಇದು ಅನಿವಾರ್ಯವಾಯಿತು ಮತ್ತು ನೀವು ನ್ಯಾಯಾಲಯದಲ್ಲಿ ಕಡಿಮೆ ಸಂಖ್ಯೆಯ ಜನರನ್ನು ಹೊಂದಿರಬೇಕು. ಅದನ್ನು ಲೈವ್-ಸ್ಟ್ರೀಮಿಂಗ್ ಮೂಲಕ ಮಾತ್ರ ಮಾಡಬಹುದು.''- ದೀಪಕ್ ಗುಪ್ತಾ, ಸುಪ್ರೀಂಕೋರ್ಟ್‌ ನ್ಯಾಯಾದೀಶ

ನಿವೃತ್ತಿ ನಂತರ ಮಾಡುವ ಕೆಲಸಗಳು

ನಿವೃತ್ತಿ ನಂತರ ಮಾಡುವ ಕೆಲಸಗಳು

''ನಿವೃತ್ತಿ ನಂತರ ನಾನು ಓದಲು ಸಾಕಷ್ಟು ಸಮಯವನ್ನು ಪಡೆಯುತ್ತೇನೆ. ನಾನು ಓದುವುದನ್ನು ತುಂಬಾ ಇಷ್ಟಪಡುತ್ತೇನೆ. ನಾನು ತುಂಬಾ ಪ್ರಯಾಣಿಸಲು ಇಷ್ಟಪಡುತ್ತೇನೆ ಆದರೆ, ಕೋವಿಡ್ -19 ಕಾರಣ ಹೆಚ್ಚು ಪ್ರಯಾಣ ಮಾಡಲು ಸಾಧ್ಯವಿಲ್ಲ. ಹಾಗಾಗಿ ನನ್ನ ಹೆಚ್ಚಿನ ಸಮಯವನ್ನು ಓದುವುದರಲ್ಲಿ ಕಳೆಯಲಿದ್ದೇನೆ. ನಾನು ಛಾಯಾಗ್ರಹಣವನ್ನೂ ಮಾಡುತ್ತೇನೆ. ನನ್ನ ಕುಟುಂಬದೊಂದಿಗೆ ಸಮಯವನ್ನು ಕಳೆಯುತ್ತೇನೆ.''- ದೀಪಕ್ ಗುಪ್ತಾ, ಸುಪ್ರೀಂಕೋರ್ಟ್‌ ನ್ಯಾಯಾದೀಶ

English summary
I am not in favour of Supreme Court judges taking up political appointments says Justice Deepak Gupta.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X