ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರೋಪ ಆಧಾರರಹಿತ, ಪೆಗಾಸಸ್‌ ಹಗರಣ ತನಿಖೆಗೆ ತಜ್ಞರ ಸಮಿತಿ ರಚನೆ: ಸುಪ್ರೀಂಗೆ ತಿಳಿಸಿದ ಕೇಂದ್ರ

|
Google Oneindia Kannada News

ನವದೆಹಲಿ, ಆ.16: ಪೆಗಾಸಸ್‌ ಬೇಹುಗಾರಿಕೆಯು ಇತ್ತೀಚೆಗೆ ದೇಶದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಪ್ರತಿಪಕ್ಷದ ನಾಯಕರು, ಪತ್ರಕರ್ತರು ಮತ್ತು ಇತರರನ್ನು ಗುರಿಯಾಗಿಸಲು ಇಸ್ರೇಲಿ ಪೆಗಾಸಸ್ ಸ್ಪೈವೇರ್ ಅನ್ನು ಬಳಸಲಾಗಿದೆ ಎಂಬ ಇತ್ತೀಚಿನ ವರದಿಗಳಿಗೆ ಸಂಬಂಧಿಸಿದ ಎಲ್ಲಾ ಆರೋಪಗಳನ್ನು ಕೇಂದ್ರವು ನಿರಾಕರಿಸಿದೆ. ಆದರೆ ಇಂತಹ ಎಲ್ಲಾ ಆರೋಪಗಳ ಬಗ್ಗೆ ತಜ್ಞರ ಗುಂಪು ತನಿಖೆ ನಡೆಸಲಿದೆ ಎಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

"ಪಟ್ಟಭದ್ರ ಹಿತಾಸಕ್ತಿಗಳಿಂದ ಹರಡಿರುವ ಯಾವುದೇ ತಪ್ಪು ಆರೋಪಗಳಿಂದ ಕೇಂದ್ರ ಸರ್ಕಾರವನ್ನು ಮುಕ್ತವಾಗಿಸಲು ಹಾಗೂ ವಿರೋಧ ಪಕ್ಷಗಳು ಪ್ರಸ್ತಾಪಿಸಿದ ಸಮಸ್ಯೆಗಳನ್ನು ಪರಿಶೀಲಿಸುವ ನಿಟ್ಟಿನಲ್ಲಿ ನಾವು ಈ ತಂತ್ರಜ್ಞಾನ ಕ್ಷೇತ್ರದ ತಜ್ಞರ ಸಮಿತಿಯನ್ನು ರಚಿಸುತ್ತೇವೆ, ಅದು ಸಮಸ್ಯೆಯ ಎಲ್ಲಾ ಅಂಶಗಳ ಬಗ್ಗೆ ತನಿಖೆ ನಡೆಸಲಿದೆ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಈ ಪೆಗಾಸಸ್‌ ಬಗ್ಗೆ ಸ್ಪಷ್ಟನೆ ನೀಡಿದೆ.

 ಪೆಗಾಸಸ್‌ ಹಗರಣ: ಅಧಿಕಾರದಲ್ಲಿದ್ದಾಗ ಕಾಂಗ್ರೆಸ್‌ 'ಬೇಹುಗಾರಿಕೆಯ ಜೇಮ್ಸ್ ಬಾಂಡ್' ಎಂದ ಕೇಂದ್ರ ಸಚಿವ ಪೆಗಾಸಸ್‌ ಹಗರಣ: ಅಧಿಕಾರದಲ್ಲಿದ್ದಾಗ ಕಾಂಗ್ರೆಸ್‌ 'ಬೇಹುಗಾರಿಕೆಯ ಜೇಮ್ಸ್ ಬಾಂಡ್' ಎಂದ ಕೇಂದ್ರ ಸಚಿವ

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಸಲ್ಲಿಸಿದ ಎರಡು ಪುಟಗಳ ಅಫಿಡವಿಟ್ ಮೂಲಕ ಕೇಂದ್ರವು ಹೇಳಿಕೆಯೊಂದನ್ನು ನೀಡಿದೆ. "ಈ ಎಲ್ಲಾ ಆರೋಪಗಳನ್ನು ಕೇಂದ್ರ ಸರ್ಕಾರವು ನಿರಾಕರಿಸುತ್ತದೆ. ಇದು ಬರಿಯ ಸುಳ್ಳು ಆರೋಪವಾಗಿದೆ. ಈ ಎಲ್ಲಾ ಆರೋಪಗಳು ನಿಜವಾದುದು ಅಲ್ಲ. ಬರೀ ಊಹೆಗಳನ್ನು ಆಧರಿಸಿದೆ. ಯಾವುದೇ ಆಧಾರವನ್ನು ಹೊಂದಿಲ್ಲ. ಪೆಗಾಸಸ್‌ ತಂತ್ರಜ್ಞಾನದ ಮೂಲಕ ಬೇಹುಗಾರಿಕೆ ನಡೆಸಲಾಗಿದೆ ಎಂಬ ಎಲ್ಲಾ ಮಾಧ್ಯಮ ವರದಿಗಳು ಸುಳ್ಳು ಅಥವಾ ಅಪೂರ್ಣ ಅಥವಾ ದೃಢೀಕರಿಸಿದ ವಿಷಯವಾಗಿದೆ ಹಾಗೂ ಆಧಾರ ರಹಿತವಾಗಿದೆ ಎಂದು ನಾವು ಸ್ಪಷ್ಟಪಡಿಸು‌ತ್ತೇವೆ ಎಂದು ಕೇಂದ್ರ ಸರ್ಕಾರ ಹೇಳಿದೆ.

Pegasus Scandal: Expert committee to Probe All claims says Centre to SC

ಪೆಗಾಸಸ್‌ ತಂತ್ರಜ್ಞಾನ ಬಳಸಿ ರಾಜಕಾರಣಿಗಳು, ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಸೇರಿದಂತೆ ಹಲವಾರು ಗಣ್ಯ ವ್ಯಕ್ತಿಗಳ ಮೇಲೆ ಬೇಹುಗಾರಿಕೆ ನಡೆಸಲಾಗಿದೆ ಎಂಬ ಆರೋಪದ ಬಗ್ಗೆ ಸ್ವತಂತ್ರ ತನಿಖೆ ನಡೆಸುವಂತೆ ಕೋರಿ ಒಂದು ಗುಂಪು ಸಲ್ಲಿಸಿದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ. ಈ ಹಿಂದೆ, ಭಾರತದ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಈ ಪ್ರಕರಣವನ್ನು ಆಲಿಸುವಾಗ, ಆರೋಪಗಳನ್ನು "ಗಂಭೀರ" ಎಂದು ಹೇಳಿದ್ದರು. ಹಾಗೆಯೇ ಆದರೆ ಫೋನ್ ಹ್ಯಾಕ್ ಮಾಡಲಾಗಿದೆ ಎಂಬುದಕ್ಕೆ ಪುರಾವೆಗಳಿದ್ದಲ್ಲಿ ಇಲ್ಲಿಯವರೆಗೆ ಏಕೆ ಎಫ್ಐಆರ್ ದಾಖಲಿಸಿಲ್ಲ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದರು.

 'ಸಂಸತ್ತಿನ ಅಧಿವೇಶನಕ್ಕೂ ಒಂದು ದಿನ ಮುನ್ನ ಪೆಗಾಸಸ್ ವರದಿ ಕಾಕತಾಳೀಯವಲ್ಲ' ಎಂದ ಕೇಂದ್ರ 'ಸಂಸತ್ತಿನ ಅಧಿವೇಶನಕ್ಕೂ ಒಂದು ದಿನ ಮುನ್ನ ಪೆಗಾಸಸ್ ವರದಿ ಕಾಕತಾಳೀಯವಲ್ಲ' ಎಂದ ಕೇಂದ್ರ

"ಪ್ರೈಮ ಫಾಸಿ ಮೆಟೀರಿಯಲ್ ಮತ್ತು ವರದಿಗಳ ವಿಶ್ವಾಸಾರ್ಹತೆ ಇದೆ ಎಂದು ನಿಮಗೆಲ್ಲರಿಗೂ ತಿಳಿದಿದೆ, ಅದರ ಆಧಾರದ ಮೇಲೆ ನಾವು ವಿಚಾರಣೆಗೆ ಆದೇಶಿಸಬಹುದು. ಆದರೆ ಇತ್ಯಾದಿ ಯಾವುದೇ ಪ್ರಯತ್ನ ಮಾಡಲಾಗಿದೆಯೇ ಎಂದು ನನಗೆ ಗೊತ್ತಿಲ್ಲ. ರಿಟ್ ಅರ್ಜಿಗಳನ್ನು ಸಲ್ಲಿಸಿದ ವ್ಯಕ್ತಿಗಳು ಸಂಪನ್ಮೂಲಗಳನ್ನು ಹೊಂದಿರುವ ಜ್ಞಾನವುಳ್ಳ ವ್ಯಕ್ತಿಗಳಾಗಿರುತ್ತಾರೆ. ಹೆಚ್ಚಿನ ಮಾಹಿತಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲು ಅಗತ್ಯ ಅಧಿಕ ಪ್ರಯತ್ನವನ್ನು ಮಾಡಿರಬೇಕು. ಮನವಿ ಸಲ್ಲಿಸಿದ ಅರ್ಜಿದಾರರಲ್ಲಿ ಕೆಲವರು ಪರಿಣಾಮ ಬೀರುವುದಿಲ್ಲ ಮತ್ತು ಕೆಲವರು ತಮ್ಮ ಫೋನ್‌ಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ಹೇಳಿಕೊಳ್ಳುತ್ತಾರೆ. ಆದರೆ ಅವರ್‍ಯಾರು ಕ್ರಿಮಿನಲ್ ದೂರು ದಾಖಲಿಸಲು ಪ್ರಯತ್ನಿಸಿಲ್ಲ," ಎಂದು ಸಿಜೆಐ ಎನ್ ವಿ ರಮಣ ವಿವರಿಸಿದರು.

ಭಾರತದಲ್ಲಿ ತನ್ನದೇ ಮಂತ್ರಿಗಳು ಮತ್ತು ಸುಪ್ರೀಂ ಕೋರ್ಟ್‌‌ನ ನ್ಯಾಯಾಧೀಶರು ಸೇರಿದಂತೆ ವಿರೋಧ ಪಕ್ಷದ ನಾಯಕರು, ಪತ್ರಕರ್ತರು ಮತ್ತು ಇತರರ ಮೇಲೆ ಕಣ್ಣಿಡಲು ಇಸ್ರೇಲಿ ಸ್ಪೈವೇರ್ ಪೆಗಾಸಸ್ ಅನ್ನು ಸರ್ಕಾರ ಬಳಸುತ್ತಿರುವ ಬಗ್ಗೆ ಸಂಸತ್ತಿನ ಮಾನ್ಸೂನ್ ಅಧಿವೇಶನ ಪ್ರಾರಂಭವಾಗುವ ಒಂದು ದಿನದ ಮೊದಲು ವರದಿಯಾಗಿದೆ. ಈ ವಿಚಾರದಲ್ಲಿ ವಿರೋಧ ಪಕ್ಷಗಳು ಸದನದಲ್ಲಿ ಭಾರೀ ಗದ್ದಲ ಎಬ್ಬಿಸಿದ್ದವು, ಆದರೆ ಸರ್ಕಾರ ಮಾತ್ರ ಈ ಆರೋಪವನ್ನು ನಿರಂತರವಾಗಿ ಅಲ್ಲಗಳೆಯುತ್ತಿದೆ. ಸುಪ್ರೀಂ ಕೋರ್ಟ್‌ನಲ್ಲಿಯೂ ಕೇಂದ್ರ ಸರ್ಕಾರ ಈ ಆರೋಪಗಳನ್ನು ಖಡಾಖಂಡಿತವಾಗಿ ನಿರಾಕರಿಸಿದೆ. ಆದರೂ ಈ ಆರೋಪಗಳ ವಿಚಾರದಲ್ಲಿ ತನಿಖೆ ನಡೆಸಲಾಗುವುದು ಎಂದು ಹೇಳಿದೆ.

(ಒನ್‌ಇಂಡಿಯಾ ಸುದ್ದಿ)

English summary
Pegasus Scandal: While denying all allegations Centre said Supreme court that, Expert committee to Probe All claims
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X