ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಸಂಸತ್ತಿನ ಅಧಿವೇಶನಕ್ಕೂ ಒಂದು ದಿನ ಮುನ್ನ ಪೆಗಾಸಸ್ ವರದಿ ಕಾಕತಾಳೀಯವಲ್ಲ' ಎಂದ ಕೇಂದ್ರ

|
Google Oneindia Kannada News

ನವದೆಹಲಿ, ಜು.19: ತನ್ನದೇ ಮಂತ್ರಿಗಳು ಮತ್ತು ಸುಪ್ರೀಂ ಕೋರ್ಟ್‌‌ನ ನ್ಯಾಯಾಧೀಶರು ಸೇರಿದಂತೆ ವಿರೋಧ ಪಕ್ಷದ ನಾಯಕರು, ಪತ್ರಕರ್ತರು ಮತ್ತು ಇತರರ ಮೇಲೆ ಕಣ್ಣಿಡಲು ಇಸ್ರೇಲಿ ಸ್ಪೈವೇರ್ ಪೆಗಾಸಸ್ ಅನ್ನು ಸರ್ಕಾರ ಬಳಸುತ್ತಿರುವ ಬಗ್ಗೆ "ಓವರ್-ದಿ-ಟಾಪ್" ಮಾಧ್ಯಮ ವರದಿಗಳನ್ನು ಐಟಿ ಸಚಿವ ಅಶ್ವಿನಿ ವೈಷ್ಣವ್ ಸೋಮವಾರ ಖಂಡಿಸಿದ್ದಾರೆ. ಸಂಸತ್ತಿನ ಮಾನ್ಸೂನ್ ಅಧಿವೇಶನ ಪ್ರಾರಂಭವಾಗುವ ಒಂದು ದಿನದ ಮೊದಲು ಅವುಗಳನ್ನು ಪ್ರಕಟಿಸಿದ್ದು "ಕಾಕತಾಳೀಯವಲ್ಲ" ಎಂದು ಹೇಳಿದ್ದಾರೆ.

ಲೋಕಸಭೆಯನ್ನುದ್ದೇಶಿಸಿ ಮಾತನಾಡಿದ ವೈಷ್ಣವ್, ಈ ವರದಿಯ ಹಿಂದೆ ಯಾವುದೇ ಆಧಾರ ಇರಲಿಲ್ಲ. ಹಾಗೆಯೇ ತಪಾಸಣೆಯು ಅಕ್ರಮ ಕಣ್ಗಾವಲು ಸಾಧ್ಯವಿಲ್ಲ ಎಂದು ಖಚಿತಪಡಿಸಿದೆ ಎಂದಿದ್ದಾರೆ.

ಪೆಗಾಸಸ್ ಸಾಫ್ಟ್‌ವೇರ್ ಎಂದರೇನು? ಮೊಬೈಲ್ ಮೇಲಿನ ದಾಳಿ ಹೇಗಿರುತ್ತೆ?ಪೆಗಾಸಸ್ ಸಾಫ್ಟ್‌ವೇರ್ ಎಂದರೇನು? ಮೊಬೈಲ್ ಮೇಲಿನ ದಾಳಿ ಹೇಗಿರುತ್ತೆ?

"ಕಳೆದ ರಾತ್ರಿ ವೆಬ್ ಪೋರ್ಟಲ್‌ನಿಂದ ಈ ಸುದ್ದಿಯನ್ನು ಪ್ರಕಟಿಸಲಾಗಿದೆ. ಈ ವರದಿಯಲ್ಲಿ ಅನೇಕ ಆರೋಪಗಳನ್ನು ಮಾಡಲಾಗಿದೆ. ಸಂಸತ್ತಿನ ಮಾನ್ಸೂನ್ ಅಧಿವೇಶನಕ್ಕೆ ಒಂದು ದಿನ ಮೊದಲು ಪತ್ರಿಕಾ ವರದಿಗಳು ಪ್ರಕಟವಾದವು. ಹಾಗಿರುವಾಗ ಇದು ಕಾಕತಾಳೀಯವಾಗಲು ಸಾಧ್ಯವಿಲ್ಲ," ಎಂದು ವೈಷ್ಣವ್ ಆರೋಪಿಸಿದ್ದಾರೆ.

Pegasus Report Day Before Parliament Session No Coincidence says Government

"ಈ ಹಿಂದೆ, ವಾಟ್ಸಾಪ್‌ನಲ್ಲಿ ಪೆಗಾಸಸ್ ಬಳಕೆಯ ಬಗ್ಗೆ ಇದೇ ರೀತಿಯ ಸುದ್ದಿಗಳು ಹರಿದಾಡುತ್ತಿದ್ದವು. ಆ ವರದಿಗಳಿಗೆ ಯಾವುದೇ ವಾಸ್ತವಿಕ ಆಧಾರಗಳಿಲ್ಲ. ಎಲ್ಲಾ ಪಕ್ಷಗಳು ಅದನ್ನು ನಿರಾಕರಿಸಿದ್ದವು. ಜುಲೈ 18 ರ ಪತ್ರಿಕಾ ವರದಿಗಳು ಭಾರತೀಯ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವ ಪ್ರಯತ್ನವೆಂದು ತೋರುತ್ತದೆ," ಎಂದು ದೂರಿದ್ದಾರೆ.

ಸಂಸತ್ತಿನಲ್ಲಿ ವೈಷ್ಣವ್‌ ಹೇಳಿಕೆ ನೀಡಿದ ಕೆಲವೇ ಗಂಟೆಗಳ ನಂತರ, ಯುಎಸ್ ಪ್ರಕಟಣೆಯಾದ ವಾಷಿಂಗ್ಟನ್ ಪೋಸ್ಟ್ ವರದಿಯೊಂದನ್ನು ಮಾಡಿದೆ. ಈ ವರದಿಯಲ್ಲಿ ಫೋನ್‌ಗಳನ್ನು ಹ್ಯಾಕ್‌ಗೆ ಒಳಗಾದ ಅಥವಾ ಫೋನ್‌ಗಳನ್ನು ಹ್ಯಾಕ್‌ ಮಾಡಿ ಬೇಹುಗಾರಿಕೆಗೆ ಒಳಗಾದ ಜನರ ಪಟ್ಟಿಯಲ್ಲಿ ವೈಷ್ಣವ್ ಹೆಸರು ಕೂಡಾ ಇದೆ. ದಿ ವೈರ್‌ನ ವರದಿಯ ಪ್ರಕಾರ, ವೈಷ್ಣವ್ ಮತ್ತು ಪತ್ನಿಗೆ ನೋಂದಾಯಿಸಲಾದ ದೂರವಾಣಿ ಸಂಖ್ಯೆಗಳು 2017 ರ ಉತ್ತರಾರ್ಧದಲ್ಲಿ ಸೋರಿಕೆಯಾದ ದಾಖಲೆಗಳಲ್ಲಿ ಇದೆ.

ಭಾರತದ ಪತ್ರಕರ್ತರು, ರಾಜಕಾರಣಿಗಳ ಮೇಲೆ ಇಸ್ರೇಲ್‌ನ ಗೂಢಚರ್ಯೆ ತಂತ್ರಾಂಶ ಭಾರತದ ಪತ್ರಕರ್ತರು, ರಾಜಕಾರಣಿಗಳ ಮೇಲೆ ಇಸ್ರೇಲ್‌ನ ಗೂಢಚರ್ಯೆ ತಂತ್ರಾಂಶ "ಪೆಗಾಸಸ್" ಕಣ್ಣು

ಕಳೆದ ಸಂಪುಟ ರಚನೆ ಸಂದರ್ಭ ವೈಷ್ಣವ್‌ ಐಟಿ ಮತ್ತು ರೈಲ್ವೆ ಸಚಿವಾಲಯಗಳ ಉಸ್ತುವಾರಿ ಪಡೆಯುವ ಮೂಲಕ ಖಕಿತಗೊಳಿಸಿದ್ದಾರೆ. ಆ ಸಂದರ್ಭದಲ್ಲಿ ಸರ್ಕಾರದ ಸದಸ್ಯರಾಗಲಿ ಅಥವಾ ರಾಜ್ಯಸಭೆಯಲ್ಲಿ ಆಗಲಿ ವೈಷ್ಣವ್‌ ಇರಲಿಲ್ಲ. ಹಾಗೆಯೇ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರ್ಪಡೆಯೂ ಆಗಿರಲಿಲ್ಲ. ಆದರೆ ಈ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ವೈಷ್ಣವ್‌ ಹೆಸರು ಬಗ್ಗೆ ಸಚಿವರು ಇನ್ನೂ ಪ್ರತಿಕ್ರಿಯಿಸಿಲ್ಲ.

ಇನ್ನು ಇಂದು ಬಿಡುಗಡೆಯಾದ ಪಟ್ಟಿಯಲ್ಲಿ ಸಂಪುಟದಲ್ಲಿರುವ ಪ್ರಹ್ಲಾದ್ ಸಿಂಗ್ ಪಟೇಲ್, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮತ್ತು ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಸೇರಿದ್ದಾರೆ. ಫೋನ್ ಜುಲೈ 14 ರ ಹೊತ್ತಿಗೆ ಹ್ಯಾಕ್ ಮಾಡಲಾಗಿದೆ ಎಂದು ವರದಿಯಾಗಿದೆ.

(ಒನ್‌ಇಂಡಿಯಾ ಸುದ್ದಿ)

English summary
Pegasus Report Day Before Parliament Session No Coincidence says IT Minister Ashwini Vaishnaw on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X