• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಭಾರತ-ಪಾಕಿಸ್ತಾನ ನಡುವಿನ 'ಪೀಸ್‌ಬಸ್' ಸಂಚಾರ ರದ್ದು

|
   Pulwama : ಪಾಕಿಸ್ತಾನಕ್ಕೆ ಮತ್ತೊಂದು ಹೊಡೆತ ಕೊಟ್ಟ ಭಾರತ

   ನವದೆಹಲಿ, ಫೆಬ್ರವರಿ 18: ಪಾಕಿಸ್ತಾನಕ್ಕೆ ನೀಡಿದ್ದ ವಿಶೇಷ ಆಪ್ತ ರಾಷ್ಟ್ರ ಗೌರವವನ್ನು ಇತ್ತೀಚೆಗಷ್ಟೆ ವಾಪಸ್ ಪಡೆದಿದ್ದ ಭಾರತ ಈಗ ಪಾಕ್‌ಗೆ ಮತ್ತೊಂದು ಪೆಟ್ಟು ನೀಡಿದೆ.

   ಪಾಕಿಸ್ತಾನದ ಮುಜಪ್ಪರಾಬಾದ್ ಮತ್ತು ಶ್ರೀನಗರದ ನಡುವೆ ವಾರಕ್ಕೊಮ್ಮೆ ಸಂಚರಿಸುತ್ತಿದ್ದ ಪೀಸ್‌ ಬಸ್‌ ನ ಸಂಚಾರವನ್ನು ಭಾರತ ಸರ್ಕಾರವು ತಾತ್ಕಾಲಿಕವಾಗಿ ರದ್ದು ಮಾಡಿದೆ. ಪುಲ್ವಾಮಾ ದಾಳಿ ನಂತರ ಈ ನಿರ್ಣಯ ಕೈಗೊಳ್ಳಲಾಗಿದೆ.

   ಭಾರತದಿಂದ ರಾಯಭಾರಿಯನ್ನು ವಾಪಸ್ ಕರೆಸಿಕೊಂಡ ಪಾಕಿಸ್ತಾನ

   ಕಾನೂನು ಸುವ್ಯಸ್ಥೆ ಮತ್ತು ರಾಜತಾಂತ್ರಿಕ ಕಾರಣಗಳಿಂದಾಗಿ 'ಪೀಸ್ ಬಸ್' ಸಂಚಾರ ತಡೆಹಿಡಿಯಲಾಗಿದೆ ಎಂದು ಪೂಂಚ್ ಜಿಲ್ಲೆಯ ಜಿಲ್ಲಾಧಿಕಾರಿ ರಾಹುಲ್ ಯಾದವ್ ಮಾಧ್ಯಮಗಳಿಗೆ ಹೇಳಿದ್ದಾರೆ.

   ಪಾಕಿಸ್ತಾನದೊಂದಿಗೆ ಸಂಬಂಧಗಳನ್ನು ಪೂರ್ಣವಾಗಿ ಕಡಿದುಕೊಳ್ಳುವಂತೆ ಭಾರತದಲ್ಲಿ ಜನಾಕ್ರೋಶಕ್ಕೆ ಎದ್ದಿದ್ದು, ಇದಕ್ಕೆ ಪೂರಕವಾಗಿ ಭಾರತವು ಪಾಕ್‌ಗೆ ನೀಡಿದ್ದ ವಿಶೇಷ ಆಪ್ತ ರಾಷ್ಟ್ರ ಗೌರವವನ್ನು ವಾಪಸ್ ಪಡೆಯಿತು ಮತ್ತು ಅದರ ಹಿಂದೆ ಪೀಸ್ ಬಸ್ ಸ್ಥಗಿತಗೊಳಿಸಲಾಗಿದೆ.

   ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಪಾಕಿಸ್ತಾನಕ್ಕೆ ಮುಜುಗರ ಉಂಟುಮಾಡಿದ ಭಾರತ

   ಪಾಕಿಸ್ತಾನದ ನಟ-ನಟಿಯರಿಗೆ ಆಲ್‌ಇಂಡಿಯಾ ಸಿನಿ ವರ್ಕರ್ಸ್‌ ಅಸೋಸಿಯೇಷನ್ ಸಹ ನಿರ್ಬಂಧ ಹೇರಿದ್ದು, ಪಾಕಿಸ್ತಾನದ ನಟ-ನಟಿಯರು ಭಾರತದ ಚಿತ್ರಗಳಲ್ಲಿ ನಟಿಸದಿರುವಂತೆ ನಿರ್ಬಂಧ ಹೇರಿದೆ.

   English summary
   “peace bus” service and border trade between India and Pakistan have been suspended following the Pulwama terror attack on February 14 that left 49 CRPF personnel dead.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X