ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಡಿಪಿ ನಾಯಕ ವಹೀದ್ ಉರ್ ರೆಹಮಾನ್‌ನನ್ನು ಬಂಧಿಸಿದ ಎನ್‌ಐಎ

|
Google Oneindia Kannada News

ನವದೆಹಲಿ, ನವೆಂಬರ್ 25: ಪಿಡಿಪಿ ಯೂಥ್ ವಿಂಗ್ ಅಧ್ಯಕ್ಷ ವಹೀದ್ ಉರ್ ರೆಹಮಾನ್ ಪರನನ್ನು ನ್ಯಾಷನಲ್ ಇನ್‌ವೆಸ್ಟಿಗೇಷನ್ ಏಜೆನ್ಸಿ ಎರಡು ದಿನಗಳ ವಿಚಾರಣೆ ಬಳಿಕ ಬಂಧಿಸಿದೆ.

ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂದು ಆರೋಪಿಸಿ ಅಮಾನತುಗೊಳಿಸಿರುವ ಡಿಎಸ್‌ಪಿ ದವಿಂದರ್ ಸಿಂಗ್ ಜತೆ ಈತ ಸಂಪರ್ಕ ಹೊಂದಿದ್ದ ಎಂದು ಹೇಳಲಾಗಿದೆ.

ಜೈಶ್ ಉಗ್ರರ ಸಂಚಿನ ಹಿಂದೆ ಮಸೂದ್ ಅಜರ್ ಸಂಬಂಧಿಜೈಶ್ ಉಗ್ರರ ಸಂಚಿನ ಹಿಂದೆ ಮಸೂದ್ ಅಜರ್ ಸಂಬಂಧಿ

ದೆಹಲಿಯ ಎನ್‌ಐಎ ಮುಖ್ಯ ಕಚೇರಿಯಲ್ಲಿ ವಹೀದ್‌ನನ್ನು ಪ್ರಶ್ನಿಸಲಾಗುತ್ತಿದೆ. ಎನ್‌ಐಎ ಜುಲೈನಲ್ಲಿ ಆರು ಮಂದಿ ಮೇಲೆ ಚಾರ್ಜ್ ಶೀಟ್ ಹಾಕಿತ್ತು. ಅದರಲ್ಲಿ ಡಿಎಸ್‌ಪಿ ದವಿಂದರ್ ಸಿಂಗ್ ಕೂಡ ಇದ್ದಾರೆ. ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿದ್ದರು ಎಂದು ಆರೋಪಿಸಲಾಗಿದೆ.

PDP Leader Waheed-Ur-Rehman Para Arrested By NIA

ಸಿಂಗ್ ಜತೆಗೆ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಸೈಯದ್ ನವೀದ್ ಮುಷ್ತಾಖ್, ಇರ್ಫಾನ್ ಶಾಫಿ ಮಿರ್, ರಾಫಿ ಅಹಮದ್, ತನ್ವೀರ್ ಅಹಮದ್ , ಸೈಯದ್ ಇರ್ಫಾನ್ ಅಹಮದ್ ಮೇಲೆ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು.

ಪಾಕಿಸ್ತಾನ ಹೈಕಮಿಷನ್ ಜತೆ ಸಂಪರ್ಕದಲ್ಲಿದ್ದ ಆರೋಪದ ಮೇರೆ ಇದೇ ವರ್ಷ ಡಿಎಸ್‌ಪಿ ದವಿಂದರ್ ಅವರನ್ನು ಬಂಧಿಸಲಾಗಿತ್ತು.

ತಮ್ಮ ಮನೆಯಲ್ಲಿ ಉಗ್ರರಿಗೆ ಆಶ್ರಯ ನೀಡಿದ್ದ ಜಮ್ಮು-ಕಾಶ್ಮೀರದ ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್‌ ಪೊಲೀಸ್‌ ದವೀಂದರ್ ಸಿಂಗ್ ಅವರನ್ನು ಅಮಾನತು ಮಾಡಲಾಗಿತ್ತು. ಇದರ ಬೆನ್ನಲ್ಲೇ ದವೀಂದರ್ ಸಿಂಗ್ ಅವರಿಗೆ ನೀಡಲಾಗಿದ್ದ ಶೇರ್-ಇ-ಕಾಶ್ಮೀರ್ ಪೊಲೀಸ್ ಪದಕವನ್ನು ಹಿಂಪಡೆಯಲಾಗಿದೆ.

ದವೀಂದರ್ ಸಿಂಗ್ ಅವರಿಗೆ ನೀಡಲಾಗಿದ್ದ ಶೇರ್-ಇ-ಕಾಶ್ಮೀರ ಎಂಬ ಶೌರ್ಯ ಪ್ರಶಸ್ತಿಯನ್ನು ಜಮ್ಮು ಕಾಶ್ಮೀರ ಆಡಳಿತದಿಂದ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಶ್ರೀನಗರದ ಬಾದಾಮಿ ಬಾಗ್ ಕಂಟೋನ್ಮೆಂಟ್ ಬಳಿಯ ಎಕ್ಸ್​​ ವಿ ಕಾರ್ಪ್ಸ್ ಸೇನೆಯ ಪ್ರಧಾನ ಕಚೇರಿಯ ಪಕ್ಕದ ತನ್ನ ಮನೆಯಲ್ಲಿ ಮೂವರು ಉಗ್ರರಿಗೆ ದವೀಂದರ್​​ ಸಿಂಗ್ ಆಶ್ರಯ ನೀಡಿದ್ದ ವಿಷಯ ಬಹಿರಂಗವಾಗುತ್ತಿದ್ದಂತೆ ದವೀಂದರ್ ಅವರನ್ನು ಅಮಾನತು ಮಾಡಲಾಗಿತ್ತು.

English summary
The National Investigation Agency has arrested the youth president of the PDP in connection with the terror conspiracy case of suspended Jammu and Kashmir Police DSP Davinder Singh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X