• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆರ್ಮಿ ಕ್ಯಾಂಟೀನ್ ನಿಂದ ಪತಂಜಲಿ ನೆಲ್ಲಿ ಜ್ಯೂಸ್ ಗೆ ಕೊಕ್

By ಒನ್ಇಂಡಿಯಾ ಪ್ರತಿನಿಧಿ
|

ನವದೆಹಲಿ, ಏಪ್ರಿಲ್ 24: ಭಾರತೀಯ ಸೇನೆಗೆ ಸರಬರಾಜು ಮಾಡುತ್ತಿರುವ ದ ಕ್ಯಾಂಟೀನ್ ಸ್ಟೋರ್ಸ್ ಪತಂಜಲಿ ಆಯುರ್ವೇದದವರ ನೆಲ್ಲಿಕಾಯಿ ಜ್ಯೂಸ್ ಮಾರಾಟವನ್ನು ನಿಲ್ಲಿಸಿದೆ. ಪ್ರಯೋಗಾಲಯದ ಪರೀಕ್ಷೆಯಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಆದರೆ, ಯೋಗ ಗುರು ಬಾಬಾ ರಾಮದೇವ್ ಪ್ರಚಾರ ಮಾಡುತ್ತಿರುವ ಗ್ರಾಹಕ ವಸ್ತು ಮಾರಾಟ ಕಂಪೆನಿಯ ಹೇಳಿಕೆ ಪ್ರಕಾರ, ನೆಲ್ಲಿಕಾಯಿ ಜ್ಯೂಸ್ ಮಾರುಕಟ್ಟೆಯಲ್ಲಿರುವ ಉಳಿದ ಉತ್ಪನ್ನಗಳಂತಲ್ಲ. ಮನುಷ್ಯರ ಸೇವನೆಗೆ ಇದು ಯೋಗ್ಯವಾಗಿದೆ. ಇದು ವೈದ್ಯಕೀಯ ಉತ್ಪನ್ನ ಎಂದು ಹೇಳಲಾಗಿದೆ.[ಚಂಡಿಘಡದ ಪೌಷ್ಠಿಕ್ ಹೊಟೇಲ್ ಬಾಬಾ ರಾಮ್ ದೇವ್ ಗೆ ಸೇರಿದ್ದಾ?!]

ರಕ್ಷಣಾ ಸಚಿವಾಲಯದ ಮೂಲಗಳ ಪ್ರಕಾರ, ಪ್ರಯೋಗಾಲಯ ಪರೀಕ್ಷೆಯಲ್ಲಿ ವಿಫಲವಾದ ನಂತರ ಕಂಪೆನಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಪಶ್ಚಿಮ ಬಂಗಾಲದ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯದಲ್ಲಿ ನೆಲ್ಲಿಕಾಯಿ ಜ್ಯೂಸ್ ನ ಪರೀಕ್ಷೆ ನಡೆಸಲಾಗಿತ್ತು.

ನಿಯಮಗಳ ಪ್ರಕಾರ ಆ ನಿರ್ದಿಷ್ಟ ಬ್ಯಾಚ್ ನ ಮಾರಾಟವನ್ನು ನಿಲ್ಲಿಸಲಾಗಿದೆ. ಮತ್ತು ಈ ರೀತಿ ತಪ್ಪಾಗಲು ಕಾರಣಗಳ ಬಗ್ಗೆ ಪರಿಶೀಲನೆ ನಡೆಸಿ, ಆ ಬಗ್ಗೆ ವಿವರಣೆ ನೀಡುವಂತೆ ಶೋಕಾಸ್ ನೋಟಿಸ್ ನೀಡಲಾಗಿದೆ. ಉತ್ತರ ಬಂದ ನಂತರ ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಲಾಗಿದೆ.[ಚೀನಾ, ಮ್ಯಾನ್ಮಾರ್, ಬಾಂಗ್ಲಾಕ್ಕೆ ರಾಮದೇವ್ ಪತಂಜಲಿ ಉತ್ಪನ್ನ!]

ಆಮ್ಲಾ ಜ್ಯೂಸ್ ನ ಇಂಡೆಕ್ಸ್ ಸಂಖ್ಯೆ 85417, ಬ್ಯಾಚ್ ಸಂಖ್ಯೆ GH1502 ಅನ್ನು ಕೋಲ್ಕತ್ತಾದ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಪತಂಜಲಿ ಆಯುರ್ವೇದದವರು ಈ ಬಗ್ಗೆ ಮಾತನಾಡಿದ್ದು, ನೆಲ್ಲಿಕಾಯಿ ಜ್ಯೂಸ್ ಆಯುರ್ವೇದ ಔಷಧ. ಆಯುಷ್ ಅಚಿವಾಲಯದ ನಿಯಮಾವಳಿ ಪ್ರಕಾರವೇ ಪರೀಕ್ಷೆ ನಡೆಸಲಾಗಿದೆ. ಎಫ್ಎಸ್ಎಸ್ಎಐ ನಿಯಮಗಳು ಈ ಜ್ಯೂಸ್ ಗೆ ಅನ್ವಯ ಆಗಲ್ಲ ಎಂದಿದ್ದಾರೆ.

English summary
The Canteen Stores Department, the retailing entity selling consumer goods to armed forces, has suspended sale of a batch of Patanjali Ayurveda's amla juice after it "failed" to clear a laboratory test.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more