• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರು-ದೆಹಲಿ ವಿಮಾನದಲ್ಲಿ ಮದ್ಯದ ಅಮಲಿನಲ್ಲಿ ಬೆತ್ತಲಾದ ಪ್ರಯಾಣಿಕ!

|

ನವದೆಹಲಿ, ಏಪ್ರಿಲ್ 9: ಬೆಂಗಳೂರಿನಿಂದ ದೆಹಲಿಗೆ ಏರ್ ಏಷ್ಯಾ ವಿಮಾನದಲ್ಲಿ ತೆರಳುತ್ತಿದ್ದ ಅಮಲಿನಲ್ಲಿದ್ದ ಪ್ರಯಾಣಿಕನೊಬ್ಬ ಬಟ್ಟೆಗಳನ್ನು ಕಳಚಿ ಬೆತ್ತಲಾಗಿ, ವಿಮಾನದ ಸಿಬ್ಬಂದಿ ಜತೆ ಅನುಚಿತವಾಗಿ ವರ್ತಿಸಿದ ಘಟನೆ ನಡೆದಿದೆ.

ಆ ಪ್ರಯಾಣಿಕ ಲೈಫ್ ಜಾಕೆಟ್ ತೆಗೆದುಕೊಂಡು ಅದರಲ್ಲಿ ಆಟವಾಡುತ್ತಿದ್ದ. ವಿಮಾನದಲ್ಲಿ ಬಾಂಬ್ ತಂದಿರುವುದಾಗಿ ಬೆದರಿಕೆಗಳನ್ನು ಹಾಕುತ್ತಿದ್ದ. ಕೊನೆಗೆ ಎದ್ದು ನಿಂತು ತನ್ನ ಬಟ್ಟೆಗಳನ್ನು ಕಳಚಿ ಬೆತ್ತಲಾದ. ಅವನನ್ನು ನಿಯಂತ್ರಿಸಲು ವಿಮಾನದ ಸಿಬ್ಬಂದಿ ಹರಸಾಹಸಪಡಬೇಕಾಯಿತು. ಈ ಘಟನೆ ಮಂಗಳವಾರ ಬೆಂಗಳೂರು-ದೆಹಲಿ ವಿಮಾನದಲ್ಲಿ ಸಂಭವಿಸಿದೆ.

ಏರ್ ಇಂಡಿಯಾ ವಿಮಾನದಲ್ಲಿ ಬೆಂಕಿ, ಕೇರಳದಲ್ಲಿ ತುರ್ತು ಲ್ಯಾಂಡಿಂಗ್ಏರ್ ಇಂಡಿಯಾ ವಿಮಾನದಲ್ಲಿ ಬೆಂಕಿ, ಕೇರಳದಲ್ಲಿ ತುರ್ತು ಲ್ಯಾಂಡಿಂಗ್

'ಅಮಲಿನಲ್ಲಿದ್ದ ಅತಿಥಿಯೊಬ್ಬರು 2021ರ ಏಪ್ರಿಲ್ 6ರಂದು ಬೆಂಗಳೂರಿನಿಂದ ನವದೆಹಲಿಗೆ ತೆರಳುವ i5-722 ವಿಮಾನವೇರಿದ್ದರು. ವಿಮಾನದಲ್ಲಿ ಕರ್ತವ್ಯದಲ್ಲಿದ್ದ ಕ್ಯಾಬಿನ್ ಸಿಬ್ಬಂದಿ ಸೇರಿದಂತೆ ಎಲ್ಲರ ಜತೆಗೆ ಅನುಚಿತ ರೀತಿಯಲ್ಲಿ ವರ್ತಿಸಲಾರಂಭಿಸಿದರು. ಆ ಅತಿಥಿಗೆ ತಮ್ಮನ್ನು ನಿಯಂತ್ರಿಸಿಕೊಳ್ಳುವಂತೆ ಪದೇಪದೇ ಸಲಹೆ ನೀಡಲಾಯಿತು. ವಿಮಾನದ ಸಿಬ್ಬಂದಿಯು ಅನೇಕ ಬಾರಿ ಮನವಿ ಮಾಡಿದ ಬಳಿಕ ಅವರು ತಮ್ಮನ್ನು ನಿಯಂತ್ರಿಸಿಕೊಂಡರು' ಎಂದು ಏರ್ ಏಷ್ಯಾ ಹೇಳಿಕೆ ಬಿಡುಗಡೆ ಮಾಡಿದೆ.

'ದೆಹಲಿ ವಿಮಾನ ನಿಲ್ದಾಣದಲ್ಲಿ ವಿಮಾನ ಭೂಸ್ಪರ್ಶ ಮಾಡಿದ ಬಳಿಕ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಅಡ್ಡಿಯುಂಟುಮಾಡುವ ಪ್ರಯಾಣಿಕರ ನಿರ್ವಹಣೆ ನೀತಿಯದಡಿ ವಿಮಾನ ಹಾಗೂ ಪ್ರಯಾಣಿಕರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ನಿಯಂತ್ರಣ ನಿಯಮಗಳ ಆಧಾರದಲ್ಲಿ ಏರ್ ಏಷ್ಯಾ ಇಂಡಿಯಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ' ಎಂದು ಅದು ತಿಳಿಸಿದೆ.

      Glenn Maxwell RCB ಅಭಿಮಾನಿಗಳಿಗೆ ನಿರಾಸೆ ಮೂಡಿಸಲಿಲ್ಲ | Oneindia Kannada

      ಈ ಘಟನೆಯನ್ನು ಖಂಡಿಸಿರುವ ವಿಮಾನಯಾನ ಸಂಸ್ಥೆ, ವಿಮಾನದಲ್ಲಿ ಅನುಚಿತ ವರ್ತನೆಗಳನ್ನು ಯಾವುದೇ ರೀತಿ ಸಹಿಸುವುದಿಲ್ಲ ಎಂದು ಹೇಳಿದೆ.

      English summary
      A passenger on Bengaluru-New Delhi Air Asia flight tried to strip naked in an inebriated state.
      ತಾಜಾ ಸುದ್ದಿ ತಕ್ಷಣ ಪಡೆಯಿರಿ
      Enable
      x
      Notification Settings X
      Time Settings
      Done
      Clear Notification X
      Do you want to clear all the notifications from your inbox?
      Settings X