ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ಪಕ್ಷದ ಮುಂದಾಳತ್ವ ವಹಿಸಿಕೊಳ್ಳುತ್ತಾರಾ ರಾಹುಲ್ ಗಾಂಧಿ?

|
Google Oneindia Kannada News

ನವದೆಹಲಿ, ಆಗಸ್ಟ್.09: ಸೋನಿಯಾ ಗಾಂಧಿ ಅವರು ಪಕ್ಷದ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಆಗಸ್ಟ್.10ಕ್ಕೆ ಸರಿಯಾಗಿ ಒಂದು ವರ್ಷ ಪೂರ್ಣಗೊಳ್ಳಲಿದೆ. ಇದರ ಬೆನ್ನಲ್ಲೇ ಅಖಿಲ ಭಾರತ ಕಾಂಗ್ರೆಸ್ ಕಮಿಟಿ(AICC)ಗೆ ಶಾಶ್ವತ ಅಧ್ಯಕ್ಷರ ಅಗತ್ಯವಿದೆ ಎಂದು ಕೇಂದ್ರದ ಮಾಜಿ ಸಚಿವ ಶಶಿ ತರೂರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಪಕ್ಷವನ್ನು ಮುನ್ನೆಡೆಸಲು ರಾಹುಲ್ ಗಾಂಧಿಯವನ್ನು ಸಮರ್ಥರಾಗಿದ್ದಾರೆ. ಅವರನ್ನೇ ಮತ್ತೊಮ್ಮೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು. ಇದನ್ನು ವಿರೋಧಿಸಿದ್ದಲ್ಲಿ ಬೇರೊಬ್ಬ ನಾಯಕರನ್ನು ಆಯ್ಕೆ ಮಾಡಬೇಕು ಎಂದು ಸಂಸದ ಶಶಿ ತರೂರ್ ತಿಳಿಸಿದ್ದಾರೆ.

ಸೋನಿಯಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಕ್ಷದ ವಿರುದ್ದವೇ ಸಿಡಿದೆದ್ದ ಕಾಂಗ್ರೆಸ್ ಸಂಸದರುಸೋನಿಯಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಕ್ಷದ ವಿರುದ್ದವೇ ಸಿಡಿದೆದ್ದ ಕಾಂಗ್ರೆಸ್ ಸಂಸದರು

ರಾಷ್ಟ್ರೀಯ ವಿರೋಧ ಪಕ್ಷವಾಗಿರುವ ಕಾಂಗ್ರೆಸ್, ಕೇಂದ್ರ ಸರ್ಕಾರವನ್ನು ಸಮರ್ಥವಾಗಿ ಎದುರಿಸುವಲ್ಲಿ ಸೋತಿದೆ ಎಂಬ ಗ್ರಹಿಕೆಯನ್ನು ಹುಟ್ಟು ಹಾಕಲಾಗುತ್ತಿದೆ. ಈ ಸವಾಲನ್ನು ಎದುರಿಸಲು ಕಾಂಗ್ರೆಸ್ ಪಕ್ಷಕ್ಕೊಬ್ಬರು ಸಮರ್ಥ ನಾಯಕರ ಅವಶ್ಯಕತೆಯಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Party Need To Find Full-Term Chief To Lead Congress: MP Shashi Tharoor

ಕೇಂದ್ರದ ಹೊಣೆಗಾರಿಕೆ ನೆನಪಿಸಿದ ರಾಹುಲ್ ಗಾಂಧಿ:

ಕೊರೊನಾವೈರಸ್ ಸೋಂಕು ಹರಡುವಿಕೆಯನ್ನು ನಿಭಾಯಿಸುವಲ್ಲಿ ಕೇಂದ್ರ ಸರ್ಕಾರದ ವೈಫಲ್ಯ ಮತ್ತು ಹೊಣೆಗಾರಿಕೆಯನ್ನು ಜ್ಞಾಪಿಸುವಲ್ಲಿ ಸಂಸದ ರಾಹುಲ್ ಗಾಂಧಿ ಅವರು ಉತ್ತಮ ಕೆಲಸವನ್ನು ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಹೊಣೆಯನ್ನು ನಿರಂತರವಾಗಿ ಹೊತ್ತುಕೊಳ್ಳುವುದು ಸೋನಿಯಾ ಗಾಂಧಿಯವರಿಗೆ ಈಗಿನ ಸಂದರ್ಭದಲ್ಲಿ ಒತ್ತಡ ಎನ್ನಿಸಬಹುದು. ಈ ಹಿನ್ನೆಲೆ ರಾಹುಲ್ ಗಾಂಧಿಯವರನ್ನು ಮತ್ತೆ ಎಐಸಿಸಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು ಎಂದು ಸಂಸದ ಶಶಿ ತರೂರು ತಿಳಿಸಿದ್ದಾರೆ.

ಕಳೆದ ವರ್ಷ ಮಧ್ಯಂತರ ಅಧ್ಯಕ್ಷರನ್ನಾಗಿ ಸೋನಿಯಾ ಗಾಂಧಿ ಅವರ ನೇಮಕ ಗೊಂಡಿದ್ದನ್ನು ನಾನು ಸ್ವಾಗತಿಸಿದ್ದೆವು. ಆದರೆ ಈ ಹೊಣೆಯನ್ನು ಅನಿರ್ದಿಷ್ಟವಾಗಿ ಹೊತ್ತುಕೊಳ್ಳುವ ನಿರೀಕ್ಷೆ ಅವರಲ್ಲೀಗ ಇಲ್ಲ ಎಂದು ನಾನು ನಂಬುತ್ತೇನೆ, "ಎಂದು ಸಂಸದ ಶಶಿ ತರೂರ್ ಹೇಳಿದ್ದಾರೆ.

English summary
Party Need To Find Full-Term Chief To Lead Congress: MP Shashi Tharoor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X