ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಸತ್ ಅಧಿವೇಶನಕ್ಕೂ 72 ಗಂಟೆ ಮುನ್ನ ಸಂಸದರಿಗೆ ಕೋವಿಡ್ ಪರೀಕ್ಷೆ

|
Google Oneindia Kannada News

ನವದೆಹಲಿ, ಆಗಸ್ಟ್ 28: ಸಂಸತ್‌ನ ಮುಂಗಾರು ಅಧಿವೇಶನ ಪ್ರಾರಂಭವಾಗುವ ಕನಿಷ್ಠ 72 ಗಂಟೆಗಳ ಮೊದಲು ಕೊರೊನಾ ವೈರಸ್ ಪರೀಕ್ಷೆಗೆ ಒಳಪಡುವಂತೆ ಸಂಸದರಿಗೆ ಮನವಿ ಮಾಡಲಾಗುವುದು ಎಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಶುಕ್ರವಾರ ತಿಳಿಸಿದ್ದಾರೆ.

ಸೆಪ್ಟೆಂಬರ್ 14ರಂದು ಮಳೆಗಾಲದ ಅಧಿವೇಶನ ಶುರುವಾಗುವ ಸಾಧ್ಯತೆಯಿದ್ದು, ಅಕ್ಟೋಬರ್ 1ರಂದು ಮುಕ್ತಾಯವಾಗಲಿದೆ.

ಗೌರವ್ ಗೊಗೋಯ್‌ಗೆ ಲೋಕಸಭೆಯಲ್ಲಿ ಕಾಂಗ್ರೆಸ್ ಉಪನಾಯಕನ ಪಟ್ಟ ಗೌರವ್ ಗೊಗೋಯ್‌ಗೆ ಲೋಕಸಭೆಯಲ್ಲಿ ಕಾಂಗ್ರೆಸ್ ಉಪನಾಯಕನ ಪಟ್ಟ

ಸಂಸದರು ಮಾತ್ರವಲ್ಲದೆ, ಸಂಸತ್‌ನ ಆವರಣಕ್ಕೆ ಪ್ರವೇಶಿಸುವ ಸಚಿವರುಗಳ ಅಧಿಕಾರಿಗಳು, ಮಾಧ್ಯಮ ಪ್ರತಿನಿಧಿಗಳು, ಲೋಕಸಭೆ ಮತ್ತು ರಾಜ್ಯಸಭೆಯ ಸಿಬ್ಬಂದಿ ಹಾಗೂ ಕಾರ್ಯದರ್ಶಿಗಳು ಕೂಡ ಅಧಿವೇಶನ ಆರಂಭಕ್ಕೂ ಮುನ್ನ ಕೊರೊನಾ ವೈರಸ್ ಪರೀಕ್ಷೆಗೆ ಒಳಪಡಲಿದ್ದಾರೆ ಎಂದು ಬಿರ್ಲಾ ಹೇಳಿದರು.

 Parliaments Monsoon Session: Mps To Get Tested 72 Hours Prior

ಆರೋಗ್ಯ ಸಚಿವಾಲಯ, ಐಸಿಎಂಆರ್, ಏಮ್ಸ್, ಡಿಆರ್‌ಡಿಒ ಮತ್ತು ದೆಹಲಿ ಸರ್ಕಾರದ ಅಧಿಕಾರಿಗಳ ಜತೆಗೆ ಶುಕ್ರವಾರ ಸಭೆ ನಡೆಸಿದ ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಕೋವಿಡ್-19 ಸೋಂಕಿನ ಭೀತಿಯ ನಡುವೆ ಸಂಸತ್ ಅಧಿವೇಶನಕ್ಕೆ ತಯಾರಿ ನಡೆಸುವ ಪ್ರಕ್ರಿಯೆಗಳನ್ನು ಅಂತಿಮಗೊಳಿಸಲು ಚರ್ಚಿಸಿದರು.

ಅಧಿವೇಶನದ ಸಂದರ್ಭದಲ್ಲಿ ಶೂನ್ಯ ಸ್ಪರ್ಶ ಭದ್ರತಾ ತಪಾಸಣೆಗಳಿಗೆ ವ್ಯವಸ್ಥೆ ಮಾಡಲಾಗುತ್ತದೆ. ಅಗತ್ಯ ಕಂಡುಬಂದರೆ ಅಧಿವೇಶನ ನಡೆಯುವ ವೇಳೆ ಯಾದೃಚ್ಛಿಕ (Random) ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗುತ್ತದೆ ಎಂದು ತಿಳಿಸಿದರು.

English summary
Lok Sabha speaker Om Birla said, MPs will be requested to get themselves tested for Covid-19 at least 72 hours befre start of the Monsoon session of Parliament.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X