ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Winter Session Day 14 Roundup:ಕಲಾಪದ ಪ್ರಮುಖಾಂಶಗಳು

|
Google Oneindia Kannada News

ನವದೆಹಲಿ, ಡಿಸೆಂಬರ್ 16: ಸಂಸತ್ ಚಳಿಗಾಲ ಅಧಿವೇಶನದ 14ನೇ ದಿನ ಲೋಕಸಭೆ, ರಾಜ್ಯಸಭೆ ಕಲಾಪಗಳು ಮುಕ್ತಾಯಗೊಂಡಿವೆ.

ಲಖಿಂಪುರ್‌ ಖೇರಿ ಘಟನೆಗೆ ಸಂಬಂಧಿಸಿದಂತೆ ವಿರೋಧಪಕ್ಷದವರು ಸಚಿವ ಅಜಯ್ ಮಿಶ್ರಾ ಅವರನ್ನು ರಾಜೀನಾಮೆ ನೀಡುವಂತೆ ಒತ್ತಾಯಿಸಿದರು.

ಸಚಿವ ಭೂಪೇಂದ್ರ ಯಾದವ್ ಅವರು ಜೀವವೈವಿದ್ಯ ಅಮೆಂಡ್‌ಮೆಂಟ್ ಮಸೂದೆ ಮಂಡಿಸಿದರು. ಬಳಿಕ ಕಲಾಪವನ್ನು ಶುಕ್ರವಾರಕ್ಕೆ ಮುಂದೂಡಲಾಯಿತು.

Parliament

ಲಖಿಂಪುರ ಖೇರಿ ಹಿಂಸಾಚಾರ ಘಟನೆಗೆ ಸಂಬಂಧಿಸಿದಂತೆ ಸಚಿವ ಅಜಯ್ ಮಿಶ್ರಾ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಆತ ಒಬ್ಬ ಅಪರಾಧಿ ಎಂದು ಹೇಳಿದ್ದಾರೆ.

ಅಲ್ಲದೇ ತಕ್ಷಣ ಅಜಯ್​ ಮಿಶ್ರಾ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ನಾಲ್ವರು ರೈತರನ್ನು ಹತ್ಯೆಗೈದ ಲಖಿಂಪುರ ಖೇರಿ ಹಿಂಸಾಚಾರ ಘಟನೆಯಲ್ಲಿ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಕೂಡ ಓರ್ವ ಆರೋಪಿಯಾಗಿದ್ದಾರೆ.

ಅಜಯ್ ಮಿಶ್ರಾ ರಾಜೀನಾಮೆಗೆ ಒತ್ತಾಯಿಸಿ ಪ್ರತಿಪಕ್ಷಗಳ ಸಂಸದರು ಘೋಷಣೆಗಳನ್ನು ಕೂಗಿದಾಗ ಲೋಕಸಭೆಯಲ್ಲಿ ಗದ್ದಲ ಉಂಟಾಯಿತು. "ಸಚಿವರು ರಾಜೀನಾಮೆ ನೀಡಬೇಕು. ಅವರು ಓರ್ವ ಅಪರಾಧಿ" ಎಂದು ರಾಹುಲ್​ ಗಾಂಧಿ ಲೋಕಸಭೆಯಲ್ಲಿ ಹೇಳಿದರು. ತನಿಖಾ ಪೊಲೀಸ್ ತಂಡ ಈ ಘಟನೆ "ಯೋಜಿತ ಪಿತೂರಿ" ಎಂದು ಹೇಳಿದ್ದು, ಈ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕೆಂದು ಪ್ರತಿಪಕ್ಷಗಳು ಆಗ್ರಹಿಸಿದವು.

ಲಖಿಂಪುರ ಖೇರಿಯಲ್ಲಿ ನಡೆದ ಹತ್ಯೆಯ ಬಗ್ಗೆ ಮಾತನಾಡಲು ಪ್ರತಿಪಕ್ಷಗಳಿಗೆ ಅವಕಾಶ ನೀಡಬೇಕು. ಈ ಘಟನೆಯಲ್ಲಿ ಸಚಿವರ ಕೈವಾಡವಿದೆ. ಇದು ಪಿತೂರಿ ಎಂದು ಹೇಳಲಾಗಿದೆ ಎಂದು ಗಾಂಧಿ ಹೇಳಿದರು.

ಪ್ರತಿಪಕ್ಷಗಳು "ಲಖಿಂಪುರ ಸಂತ್ರಸ್ತರಿಗೆ ನ್ಯಾಯ" ಒದಗಿಸಬೇಕು ಎಂದು ಆಗ್ರಹಿಸುವ ಫಲಕಗಳನ್ನು ಹಿಡಿದು, "ಗೃಹ ಸಚಿವರನ್ನು ವಜಾಗೊಳಿಸುವಂತೆ" ಸರ್ಕಾರಕ್ಕೆ ಕರೆ ನೀಡಿದರು. ಲೋಕಸಭೆಯಲ್ಲಿ ಗುರುವಾರ ಈ ವಿಷಯಕ್ಕೆ ಸಂಬಂಧಿಸಿದಂತೆ ಭಾರಿ ಗದ್ದಲ ನಡೆಯಿತು.

ಮಾತುಕತೆಗೆ ಕರೆದಿದ್ದೇವೆ, ಆದರೆ ನಿರಾಕರಿಸಿದ್ದಾರೆ: ಪ್ರಲ್ಹಾದ್ ಜೋಶಿ
ಲಖಿಂಪುರ್ ಖೇರಿ ಘಟನೆಗೆ ಸಂಬಂಧಿಸಿದಂತೆ ಮಾತುಕತೆಗೆ ಕರೆದಿದ್ದೇವೆ, ಆದರೆ ಅವರು ನಿರಾಕರಿಸುತ್ತಿದ್ದಾರೆ. ವಿರೋಧಪಕ್ಷದಿಂದ ಸಲಹೆಗಳನ್ನು ಪಡೆಯಲು ಸರ್ಕಾರ ಸಿದ್ಧವಿದೆ ಎಂದು ಪ್ರಲ್ಹಾದ್ ಜೋಶಿ ಹೇಳಿದ್ದಾರೆ.

ಲಖಿಂಪುರ್ ಖೇರಿ ಘಟನೆಗೆ ಸಂಬಂಧಿಸಿದಂತೆ ಸಚಿವ ಅಜಯ್ ಮಿಶ್ರಾ ಸಭೆ ನಡೆಸಿದ್ದಾರೆ. ಕೂನೂರಿನಲ್ಲಿ ನಡೆದ ಐಎಎಫ್ ವಿಮಾನ ಅಪಘಾತದಲ್ಲಿ ತೀವ್ರ ಗಾಯಗೊಂಡು ನಿಧನರಾದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರಿಗೆ ಸಂತಾಪ ಸೂಚಿಸಿ ಲೋಕಸಭೆ ಒಂದು ಕ್ಷಣ ಮೌನ ಆಚರಿಸಿತು.

ಸಾರ್ವಜನಿಕ ವಲಯದ ಬ್ಯಾಂಕ್‌ಗಳನ್ನು (ಪಿಎಸ್‌ಬಿ) ದುರ್ಬಲಗೊಳಿಸುವ ಸರ್ಕಾರದ ಪ್ರಯತ್ನಗಳ" ಕುರಿತು ಚರ್ಚಿಸಲು ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಲೋಕಸಭೆಯಲ್ಲಿ ಮುಂದೂಡಿಕೆ ಸೂಚನೆ ನೀಡಿದರು. ಏತನ್ಮಧ್ಯೆ, ಲಖಿಂಪುರ ಖೇರಿ ಘಟನೆ, ಎಸ್‌ಐಟಿ ವರದಿ ಮತ್ತು ಸಚಿವ ಅಜಯ್ ಕುಮಾರ್ ಟೆನಿ ಅವರನ್ನು ತಕ್ಷಣ ವಜಾಗೊಳಿಸಬೇಕೆಂಬ ಬೇಡಿಕೆಯ ಕುರಿತು ಚರ್ಚಿಸಲು ಕಾಂಗ್ರೆಸ್ ಸಂಸದ ಮಾಣಿಕಂ ಠಾಗೋರ್ ಲೋಕಸಭೆಯಲ್ಲಿ ಮುಂದೂಡಿಕೆ ಸೂಚನೆ ನೀಡಿದರು.

Recommended Video

Virat Kohli ನ ಹಿಂದಿಕ್ಕಿದ Sachin Tendulkar | Oneindia Kannada

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಲೋಕಸಭೆಯಲ್ಲಿ "ತುರ್ತು ಪ್ರಾಮುಖ್ಯತೆಯ ನಿರ್ದಿಷ್ಟ ವಿಷಯವನ್ನು" ಚರ್ಚಿಸಲು ವ್ಯವಹಾರವನ್ನು ಮುಂದೂಡುವಂತೆ ನೋಟಿಸ್ ನೀಡಿದರು. ಲಖಿಂಪುರ ಖೇರಿ ಘಟನೆಗೆ ಸಂಬಂಧಿಸಿದಂತೆ ಮಿಶ್ರಾ ಅವರನ್ನು "ತಕ್ಷಣ ವಜಾಗೊಳಿಸಬೇಕು" ಮತ್ತು "ಸಂತ್ರಸ್ತರ ಕುಟುಂಬಗಳಿಗೆ ನ್ಯಾಯವನ್ನು ತಲುಪಿಸುವುದನ್ನು ಖಚಿತಪಡಿಸಿಕೊಳ್ಳಬೇಕು" ಎಂದು ರಾಹುಲ್ ಗಾಂಧಿ ಹೇಳಿದರು.

English summary
Parliament Winter Session 2021, Day 14 (December 2021) Roundup: Check out Key Questions to govt from opposition, Bills tabled, key Decisions taken, latest News and day 14 Highlights in Kannada. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X