• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

Winter Session Day 18 Roundup: ಕಲಾಪಗಳು ಅನಿರ್ದಿಷ್ಟಾವಧಿಗೆ ಮುಂದೂಡಿಕೆ

|
Google Oneindia Kannada News

ನವದೆಹಲಿ, ಡಿಸೆಂಬರ್ 22: ಗಲಾಟೆ ಗದ್ದಲಗಳ ನಡುವೆಯೇ ಸಂಸತ್ತಿನ ಚಳಿಗಾಲದ ಅಧಿವೇಶನ ಮುಕ್ತಾಯಗೊಂಡಿದೆ. ನಿಗದಿತ ಒಂದು ದಿನ ಮೊದಲೇ ಅಧಿವೇಶನ ಮೊಟಕುಗೊಳಿಸಲಾಗಿದ್ದು, ಲೋಕಸಭೆ ಹಾಗೂ ರಾಜ್ಯಸಭೆ ಕಲಾಪಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.

ಈ ಅಧಿವೇಶನಲ್ಲಿ ಒಟ್ಟು ಮೂರು ಮಸೂದೆಗಳನ್ನು ಸಂಸದೀಯ ಸ್ಥಾಯಿ ಸಮಿತಿಗೆ ಪರಿಶೀಲನೆಗೆಂದು ಒಪ್ಪಿಸಲಾಯ್ತು. ಒಂದು ಮಸೂದೆಯನ್ನು ಜಂಟಿ ಸಮಿತಿಗೆ ಒಪ್ಪಿಸಲಾಯ್ತು. ಮತದಾರರ ಗುರುತಿನ ಚೀಟಿಗೆ ಆಧಾರ್‌ ಜೋಡಣೆ ವಿಧೇಯಕವನ್ನೂ ಸ್ಥಾಯಿ ಸಮಿತಿಗೆ ಒಪ್ಪಿಸಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸಿದರೂ ಕೂಡ ಸರ್ಕಾರ ಅದಕ್ಕೆ ಮಣಿಯಲಿಲ್ಲ.

ಬಳಿಕ ಉಭಯ ಸದನಗಳಲ್ಲೂ ಕೂಡ ಗದ್ದಲದ ನಡುವೆಯೇ ಈ ಮಸೂದೆ ಅಂಗೀಕಾರವಾಯ್ತ ರಾಜ್ಯಸಭೆಯಲ್ಲಿ ವಿಪಕ್ಷಗಳು ಸಭಾ ತ್ಯಾಗ ಮಾಡಿ ಪ್ರತಿಭಟನೆ ನಡೆಸಿದವು. ಸಿಬಿಐ ಹಾಗೂ ಜಾರಿ ನಿರ್ದೇಶನಾಲಯದ ನಿರ್ದೇಶಕರ ಅಧಿಕಾರವಧಿ ವಿಸ್ತರಿಸುವ ಮಸೂದೆಗಳಿಗೆ ಉಭಯ ಸದನಗಳಲ್ಲೂ ಒಪ್ಪಿಗೆ ಸಿಕ್ಕಿತು.

ರಾಜ್ಯ ಸಭೆಯಲ್ಲಿ 12 ವಿರೋಧ ಪಕ್ಷಗಳ ಸಂಸದರ ಅಮಾನತು, ಮತದಾರರ ಗುರುತಿನ ಚೀಟಿಗೆ ಆಧಾರ್‌ ಜೋಡಣೆ ವಿಧೇಯಕ ಅಂಗೀಕಾರ, ಹೆಣ್ಮಕ್ಕಳ ಮದುವೆ ವಯಸ್ಸನ್ನು 18 ರಿಂದ 21ಕ್ಕೆ ಹೆಚ್ಚಿಸುವ ವಿಧೇಯಕವನ್ನು ಸಂಸದೀಯ ಸ್ಥಾಯಿ ಸಮಿತಿಗೆ ಒಪ್ಪಿಸುವ ನಿರ್ಧಾರ.

ಇವೆಲ್ಲಾ ಈ ಅಧಿವೇಶನದಲ್ಲಿ ಚರ್ಚೆಯಾದ ಪ್ರಮುಖಾಂಶಗಳು. ಬಹು ನಿರೀಕ್ಷಿತ ಕ್ರಿಪ್ಟೋ ಕರೆನ್ಸಿ ನಿಷೇಧಕ್ಕೆ ಮಸೂದೆ ಈ ಅಧಿವೇಶನದಲ್ಲಿ ಚರ್ಚೆಗೆ ಬರಲಿಲ್ಲ.
ಮೊದಲ ದಿನದಿಂದಲೇ ಸರ್ಕಾರದ ವಿರುದ್ಧ ಪ್ರಹಾರ ನಡೆಸಲು ಮುಂದಾಗಿದ್ದವು. ಯಾವುದೇ ಚರ್ಚೆ ಇಲ್ಲದೇ ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ವಾಪಸ್‌ ಪಡೆದಿದ್ದು ಹಾಗೂ ರಾಜ್ಯಸಭೆಯಲ್ಲಿ 12 ಸಂಸದರನ್ನು ಅಮಾನತು ಮಾಡಿದ್ದು ವಿಪಕ್ಷಗಳನ್ನು ಮತ್ತಷ್ಟು ಕೆರಳುವಂತೆ ಮಾಡಿದ್ದವು. ಸಂಸದರನ್ನು ಅಮಾನತು ಮಾಡಿದ ವಿಷಯ ಸಂಬಂಧ ಸಂಸತ್ತಿನ ಒಳಗೂ ಹೊರಗೂ ಹಲವು ಪ್ರತಿಭಟನೆಗಳು ನಡೆದವು.

ರಾಜ್ಯಸಭೆಯಲ್ಲಿ ಪ್ರತೀ ಚರ್ಚೆಯ ವೇಳೆಯೂ, ಸಂಸದರ ಅಮಾನತು ಕುರಿತು ಪ್ರಸ್ತಾಪ ಮಾಡಿ ವಿರೋಧ ಪಕ್ಷಗಳ ಸದಸ್ಯರು ಪ್ರತಿಭಟಿಸಿದರು. ಅವರ ಅಮಾನತು ಅದೇಶವನ್ನು ವಾಪಸ್‌ ಪಡೆಯಬೇಕು ಎಂದು ಆಗ್ರಹಿಸಿದರು.

ಕ್ಷಮೆ ಕೇಳದ ಹೊರೆತು ಅದು ಸಾಧ್ಯವಿಲ್ಲ ಎಂದು ಅಧ್ಯಕ್ಷರು ಅಚಲ ನಿಲುವು ತಾಳಿದ್ದರಿಂದ ಗಲಾಟೆಯಲ್ಲೇ ಕಲಾಪ ಅಂತ್ಯವಾಗಿದೆ. ಅಲ್ಲದೇ ಮಂಗಳವಾರ ಟಿಎಂಸಿ ಸಂಸದ ಡೆರೆಕ್‌ ಓಬ್ರಿಯಾನ್‌ ಅವರನ್ನೂ ಕೂಡ ಅಮಾನತು ಮಾಡಲಾಗಿತ್ತು.

ನವೆಂಬರ್ 29ರಂದು ಸಂಸತ್ ಚಳಿಗಾಲದ ಅಧಿವೇಶನ ಶುರುವಾಗಿತ್ತು. ಇನ್ನು ಅಧಿವೇಶನದ ಬಗ್ಗೆ ಮಾಹಿತಿ ನೀಡಿದ ಲೋಕಸಭಾ ಸ್ಪೀಕರ್‌, ಒಟ್ಟು 18 ದಿನ ಕಲಾಪ ನಡೆದಿದ್ದು, ಇದರಲ್ಲಿ 18 ಗಂಟೆ 48 ನಿಮಿಷ ಪ್ರತಿಭಟನೆಯಲ್ಲಿ ಸಮಯ ವ್ಯರ್ಥವಾಗಿದೆ. ಡಿಸೆಂಬರ್‌ 2 ರಂದು ನಡೆದ ಕಲಾಪ ಅತೀ ಹೆಚ್ಚು ಅಂದರೆ ಶೇ. 204 ರಷ್ಟು ಫಲಪ್ರದವಾಗಿದೆ.

ಲೋಕಸಭೆ ಕಲಾಪಗಳು ಶೇ. 82 ರಷ್ಟು ಫಲಪ್ರದಗೊಂಡರೆ, ರಾಜ್ಯಸಭೆಯ ಕಲಾಪಗಳು ಬಹುಪಾಲು ಗಲಾಟೆ ಗದ್ದಲದಲ್ಲೇ ನಡೆಯಿತು. ರಾಜ್ಯಸಭೆ ಕಲಾಪ ಕೇವಲ ಶೇ.47 ರಷ್ಟು ಫಲಪ್ರದವಾಗಿದೆ. ಸಂಸದರ ಅಮಾನತು ಇಡೀ ಕಲಾಪವನ್ನೇ ನುಂಗಿ ಹಾಕಿತು.

English summary
Parliament Winter Session 2021, Day 18(December 2021) Roundup: Check out Key Questions to govt from opposition, Bills tabled, key Decisions taken, latest News and day 17 Highlights in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X