ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಭೀತಿ: ಲೋಕಸಭೆಯಲ್ಲೂ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ

|
Google Oneindia Kannada News

ದೆಹಲಿ, ಮಾರ್ಚ್ 16: ಕೊರೊನಾ ಭೀತಿ ದೆಹಲಿಯ ಸಂಸತ್ ಭವನಕ್ಕೂ ತಟ್ಟಿದೆ. ಕೇಂದ್ರದ ಉಭಯ ಸದನದಲ್ಲೂ ಸೋಮವಾರದಿಂದ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಆರಂಭಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಕೊರೊನಾ ವೈರಸ್‌ನ್ನು ಸಾಂಕ್ರಾಮಿಕ ರೋಗ ಎಂದು ಘೋಷಿಸಿದ್ದು, ಸಂಸದರು ಈ ವಿಚಾರವನ್ನು ಸದನದಲ್ಲಿ ಚರ್ಚಿಸಿದ್ದರು.

ಇದೀಗ, ದೆಹಲಿ ಅಂಗಳದಲ್ಲಿ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಆರಂಭವಾಗಿದ್ದು, ಸೋಮವಾರ ಸಂಸತ್ ಭವನಕ್ಕೆ ಆಗಮಿಸಿದ ಪತ್ರಕರ್ತರು ಮತ್ತು ಸಿಬ್ಬಂದಿ ವರ್ಗದವರನ್ನು ಥರ್ಮಲ್ ಸ್ಕ್ರೀನಿಂಗ್‌ಗೆ ಒಳಪಡಿಸಲಾಯಿತು. ಸದ್ಯಕ್ಕೆ ಸಂಸದರು ಥರ್ಮಲ್ ಸ್ಕ್ರೀನಿಂಗ್ ಒಳಪಟ್ಟಿದ್ದಾರಾ ಎಂಬುದು ತಿಳಿದು ಬಂದಿಲ್ಲ.

ವಿಧಾನಸೌಧ, ವಿಕಾಸಸೌಧದಲ್ಲೂ ಕೊರೊನಾ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆವಿಧಾನಸೌಧ, ವಿಕಾಸಸೌಧದಲ್ಲೂ ಕೊರೊನಾ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ

ಲೋಕಸಭೆ ಮತ್ತು ರಾಜ್ಯಸಭೆಯ ಕುರಿತು ಆಸಕ್ತಿ ಹೊಂದಿದ್ದ ಜನರಿಗೆ ಪಾಸ್ ನೀಡುವುದನ್ನು ಈಗಾಗಲೇ ನಿಲ್ಲಿಸಲಾಗಿದೆ. ಸದ್ಯಕ್ಕೆ ಸಂಸದರು, ಪತ್ರಕರ್ತರು ಮತ್ತು ಸಿಬ್ಬಿಂದಿ ವರ್ಗದವರನ್ನು ಮಾತ್ರ ಸಂಸತ್ ಭವನಕ್ಕೆ ಪ್ರವೇಶ ನೀಡಲಾಗಿದೆ.

Parliament Starts Thermal Screeing For Visitors

ಈ ಕಡೆ ಕರ್ನಾಟಕದಲ್ಲಿ ವಿಧಾನಸಭೆ ಮತ್ತು ವಿಕಾಸಸೌಧ ಎರಡರಲ್ಲೂ ಥರ್ಮಲ್ ಸ್ಲ್ರೀನಿಂಗ್ ವ್ಯವಸ್ಥೆ ಚಾಲನೆಯಲ್ಲಿದೆ. ಜೊತೆಗೆ ಹೈಕೋರ್ಟ್, ಶಾಸಕರ ಭವನ, ಬಹುಮಹಡಿ ಕಟ್ಟಡ, ಸಿಟಿ ಸಿವಿಲ್ ಕೋರ್ಟ್ ಪ್ರಮುಖದ್ವಾರಗಳಲ್ಲಿಯೂ ಥರ್ಮಲ್ ಸ್ಕ್ರೀನಿಂಗ್ ಮಾಡಲಿ ಸರ್ಕಾರ ಆದೇಶ ನೀಡಿದೆ.

English summary
Coronavirus effects: Parliament starts thermal screening of visitors amid coronavirus scare.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X