• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಂಸತ್‌ನಲ್ಲಿ ಇನ್ನು ಪಾತ್ರೆ, ಊಟದ ಬಾಕ್ಸ್ ತೊಳೆಯುವಂತಿಲ್ಲ!

|

ನವದೆಹಲಿ, ಅಕ್ಟೋಬರ್ 22: ಸಂಸತ್‌ಗೆ ದಿನವೂ ಮಧ್ಯಾಹ್ನದ ಊಟ ತರುವ ನೂರಾರು ಉದ್ಯೋಗಿಗಳು ವಿಚಿತ್ರ ಸಮಸ್ಯೆಯೊಂದಕ್ಕೆ ಸಿಲುಕಿದ್ದಾರೆ. ಅವರಿಗೆ ಇನ್ನು ಮುಂದೆ ಸಂಸತ್ ಆವರಣದಲ್ಲಿ ಎಲ್ಲಿಯೂ ಪಾತ್ರೆಗಳು ಹಾಗೂ ಊಟದ ಬಾಕ್ಸ್‌ಗಳನ್ನು ತೊಳೆಯಲು ಅವಕಾಶ ನೀಡುವುದಿಲ್ಲ.

ಸಂಸತ್ ಭವನದ ಉದ್ಯೋಗಿಗಳು ಮಧ್ಯಾಹ್ನ ಊಟದ ಬಳಿಕ ಸಂಕೀರ್ಣದಲ್ಲಿನ ವಾಶ್‌ರೂಮ್‌ಗಳಲ್ಲಿ ಊಟದ ಬಾಕ್ಸ್ ಹಾಗೂ ಪಾತ್ರೆಗಳನ್ನು ತೊಳೆಯುತ್ತಿದ್ದಾರೆ. ಇದರಿಂದ ಚರಂಡಿ ಕೊಳವೆಗಳು ಕಟ್ಟಿಕೊಂಡು ಸಮಸ್ಯೆಯಾಗುತ್ತಿದೆ. ಶೌಚಾಲಯ ಬಳಕೆದಾರರಿಗೆ ತೊಂದರೆಯಾಗುತ್ತಿದೆ. ಹಾಗೆಯೇ ಸಂಸತ್‌ನಲ್ಲಿ ಸ್ವಚ್ಛತೆ ಹಾಗೂ ನೈರ್ಮಲ್ಯದ ಗುಣಮಟ್ಟ ಹಾಳಾಗುತ್ತಿದೆ ಎಂದು ಲೋಕಸಭೆ ಕಾರ್ಯಾಲಯ ಬುಧವಾರ ಹೊರಡಿಸಿರುವ ಸುತ್ತೋಲೆಯಲ್ಲಿ ಹೇಳಲಾಗಿದೆ.

861.9 ಕೋಟಿ ರೂ ವೆಚ್ಚದಲ್ಲಿ ಹೊಸ ಸಂಸತ್ ಭವನ: ಬಿಡ್ ಗೆದ್ದ ಟಾಟಾ ಸಮೂಹ

ಈ ವಿಚಾರವನ್ನು ಅಧಿಕಾರಿಗಳು ಬಹಳ ಗಂಭೀರವಾಗಿ ಪರಿಗಣಿಸಿದ್ದಾರೆ. ಇನ್ನು ಮುಂದೆ ಸ್ವಚ್ಛತೆ ಹಾಗೂ ನೈರ್ಮಲ್ಯದ ಗುಣಮಟ್ಟವನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಸಂಸತ್ ಭವನದಲ್ಲಿ ಪಾತ್ರೆ ಹಾಗೂ ಊಟದ ಬಾಕ್ಸ್‌ಗಳನ್ನು ತೊಳೆಯುವಂತಿಲ್ಲ ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

ಸಂಸತ್‌ನಲ್ಲಿ ಉತ್ತರ ರೈಲ್ವೇಸ್ ಕ್ಯಾಟೀಂನ್ ನಡೆಸುತ್ತಿತ್ತು. ಕ್ಯಾಂಟೀನ್‌ನಲ್ಲಿ ಊಟದ ವೇಳೆ ಹೆಚ್ಚಿನ ಜನರು ಸೇರುವುದನ್ನು ತಪ್ಪಿಸಲು ಕ್ಯಾಂಟೀನ್‌ನಲ್ಲಿ ಊಟ ತಯಾರಿಸುತ್ತಿಲ್ಲ. ಸಣ್ಣಪುಟ್ಟ ತಿನಿಸು ಮತ್ತು ಪಾನೀಯವನ್ನು ಪೂರೈಸಲು ಮಾತ್ರವೇ ಕ್ಯಾಂಟೀನ್‌ಗಳಿಗೆ ಅವಕಾಶ ನೀಡಲಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಉದ್ಯೋಗಿಗಳು ಮನೆಯಿಂದಲೇ ಊಟ ತರುತ್ತಿದ್ದಾರೆ. ಸಂಸತ್ ಭವನದಲ್ಲಿ 2,000ಕ್ಕೂ ಅಧಿಕ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ 1,000 ಭದ್ರತಾ ಸಿಬ್ಬಂದಿ ಇದ್ದಾರೆ.

English summary
Lok Sabha secretariat has issued a internal circular on restricting Parliament employees to wash utinsils and lunch boxes in the complex.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X