ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ದಶಕದಲ್ಲಿ ಭಾರತದ ಉಜ್ವಲ ಭವಿಷ್ಯದ ಆರಂಭ: ನರೇಂದ್ರ ಮೋದಿ

|
Google Oneindia Kannada News

ನವದೆಹಲಿ, ಜನವರಿ 29: ಹೊಸ ದಶಕದಲ್ಲಿನ ಸಂಸತ್‌ನ ಬಜೆಟ್ ಅಧಿವೇಶನ ಉಜ್ವಲ ಭವಿಷ್ಯ ಭಾರತವನ್ನು ಕಾಣಿಸಲಿದೆ. 2020ರಲ್ಲಿ ನೀಡಿದ ನಾಲ್ಕೈದು ಆರ್ಥಿಕ ಪ್ಯಾಕೇಜ್‌ಗಳು ಮಿನಿ ಬಜೆಟ್‌ಗಳಷ್ಟೇ ಉತ್ತಮವಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಶುಕ್ರವಾರ ಬಜೆಟ್ ಅಧಿವೇಶನ ಆರಂಭಕ್ಕೂ ಮುನ್ನ ಸಂಸತ್ ಆವರಣದಲ್ಲಿ ಮಾತನಾಡಿದ ಪ್ರಧಾನಿ ಮೋದಿ, 'ಇಂದು ಈ ದಶಕದ ಮೊದಲ ಅಧಿವೇಶನ ಆರಂಭವಾಗುತ್ತಿದೆ. ಈ ದಶಕವು ಭಾರತದ ಉಜ್ವಲ ಭವಿಷ್ಯಕ್ಕೆ ಬಹಳ ಮುಖ್ಯವಾಗಿದೆ. ಸ್ವಾತಂತ್ರ್ಯ ಹೋರಾಟಗಾರರು ಕಂಡಿದ್ದ ಕನಸನ್ನು ಈಡೇರಿಸಲು ದೇಶದ ಮುಂದೆ ಸುವರ್ಣಾವಕಾಶ ಎದುರಾಗಿದೆ' ಎಂದು ಹೇಳಿದ್ದಾರೆ.

ಇಂದಿನಿಂದ ಬಜೆಟ್ ಅಧಿವೇಶನ: ಹೇಗಿರಲಿದೆ ಈ ಬಾರಿಯ ಕಲಾಪ?ಇಂದಿನಿಂದ ಬಜೆಟ್ ಅಧಿವೇಶನ: ಹೇಗಿರಲಿದೆ ಈ ಬಾರಿಯ ಕಲಾಪ?

'ಇದು ಬಜೆಟ್ ಅಧಿವೇಶನ. ಭಾರತದ ಇತಿಹಾಸದಲ್ಲಿಯೇ ಮೊದಲ ಬಾರಿಗೆ, ವಿಭಿನ್ನ ಬಗೆಯ ಪ್ಯಾಕೇಜ್‌ಗಳ ಮೂಲಕ ಹಣಕಾಸು ಸಚಿವರು 4-5 ಮಿನಿ ಬಜೆಟ್‌ಗಳನ್ನು ಮಂಡಿಸಿದ್ದಾರೆ. ಹೀಗಾಗಿ ಈ ಬಜೆಟ್ ಆ 4-5 ಮಿನಿ ಬಜೆಟ್‌ಗಳ ಭಾಗವಾಗಿ ಕಾಣಿಸಲಿದೆ. ನನಗೆ ಈ ನಂಬಿಕೆ ಇದೆ' ಎಂದಿದ್ದಾರೆ.

Parliament Session Of A New Decade Important For The Bright Future Of India: Narendra Modi

Union Budget 2021; ರೈತರು ತಿಂದ ಪೆಟ್ಟಿಗೆ ಮದ್ದಾಗಬಹುದೇ ಈ ಬಾರಿಯ ಬಜೆಟ್? Union Budget 2021; ರೈತರು ತಿಂದ ಪೆಟ್ಟಿಗೆ ಮದ್ದಾಗಬಹುದೇ ಈ ಬಾರಿಯ ಬಜೆಟ್?

'ಈ ದಶಕವನ್ನು ನಾವು ಸಂಪೂರ್ಣವಾಗಿ ಬಳಸಿಕೊಳ್ಳಬೇಕು. ದಶಕದ ಮೇಲೆ ಗಮನವಿರಿಸಿ ಅಧಿವೇಶನದಲ್ಲಿ ಚರ್ಚೆಗಳು ನಡೆಬೇಕಿದೆ. ದೇಶ ಇದನ್ನು ನಿರೀಕ್ಷಿಸಿದೆ. ಜನರ ಮಹತ್ವಾಕಾಂಕ್ಷೆಗಳನ್ನು ಈಡೇರಿಸುವಲ್ಲಿ ನಮ್ಮ ಕಾಣಿಕೆ ನೀಡುವುದರಲ್ಲಿ ನಾವು ಹಿಂದೆ ಬೀಳುವುದಿಲ್ಲ ಎಂದು ನಂಬುತ್ತೇನೆ' ಎಂದು ಹೇಳಿದ್ದಾರೆ.

English summary
Prime Minister Narendra Modi said, this decade is very important for the bright future of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X