ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಸತ್ ಅಧಿವೇಶನ: ಗಾಂಧಿ ಪ್ರತಿಮೆ ಮುಂದೆ ಚಿಕನ್ ತಂದೂರಿ- ಬಿಜೆಪಿ ಆಕ್ರೋಶ

|
Google Oneindia Kannada News

ಹೊಸದಿಲ್ಲಿ ಜುಲೈ 28: ಸಂಸತ್ತಿನ ಮುಂಗಾರು ಅಧಿವೇಶನ ಭರದಿಂದ ಸಾಗುತ್ತಿದೆ. ಕಳೆದ ಹಲವು ದಿನಗಳಿಂದ, ಸಂಸತ್ತಿನ ಉಭಯ ಸದನಗಳಲ್ಲಿ ಅಸಭ್ಯವಾಗಿ ವರ್ತಿಸಿದ್ದಕ್ಕಾಗಿ ಸುಮಾರು ಎರಡು ಡಜನ್ ವಿರೋಧ ಪಕ್ಷದ ಸಂಸದರನ್ನು ಸದನದ ಕಲಾಪದಿಂದ ಅಮಾನತುಗೊಳಿಸಲಾಗಿದೆ.

ಈ ಕ್ರಮವನ್ನು ವಿರೋಧಿಸಿ ವಿರೋಧ ಪಕ್ಷದ ಸಂಸದರು ಸಂಸತ್ತಿನ ಸಂಕೀರ್ಣದಲ್ಲಿರುವ ಗಾಂಧಿ ಪ್ರತಿಮೆಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಇದೀಗ ಈ ವಿರೋಧ ಪಕ್ಷದ ಸಂಸದರು ಗಾಂಧಿ ಪ್ರತಿಮೆ ಎದುರು ಚಿಕನ್ ತಂದೂರಿ ತಿಂದು ಅವಮಾನ ಮಾಡಿದ್ದಾರೆ ಎಂಬ ಹೊಸ ವಿವಾದ ಎದ್ದಿದೆ. ಈ ವಿಚಾರದಲ್ಲಿ ಬಿಜೆಪಿ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಆದರೆ ವಿರೋಧ ಪಕ್ಷದ ಪರವಾಗಿ ಟಿಎಂಸಿ ಸಂಸದರು ಈ ಆರೋಪಗಳನ್ನು ಸುಳ್ಳು ಎಂದು ಹೇಳಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಕುರಿತು ಕಾಂಗ್ರೆಸ್ ನಾಯಕರ ಟೀಕೆಗಳು ಮತ್ತು ಬೆಲೆ ಏರಿಕೆ ಮತ್ತಿತರ ವಿಷಯಗಳ ಬಗ್ಗೆ ಪ್ರತಿಪಕ್ಷಗಳ ಪ್ರತಿಭಟನೆಯಿಂದಾಗಿ ಮುಂಗಾರು ಅಧಿವೇಶನದ ಒಂಬತ್ತನೇ ದಿನವೂ ಸಂಸತ್ತಿನ ಉಭಯ ಸದನಗಳ ಕಲಾಪಗಳು ಸ್ಥಗಿತಗೊಂಡಿವೆ. ಅಶಿಸ್ತಿನ ವರ್ತನೆಗಾಗಿ ಅಮಾನತುಗೊಂಡಿರುವ 20 ಸಂಸದರು ಪ್ರಸ್ತುತ ಸಂಸತ್ತಿನ ಆವರಣದಲ್ಲಿ ಗಾಂಧಿ ಪ್ರತಿಮೆ ಬಳಿ 50 ಗಂಟೆಗಳ ಕಾಲ ಪ್ರತಿಭಟನೆ ನಡೆಸುತ್ತಿದ್ದಾರೆ.

ಬಿಜೆಪಿ ಆಕ್ರೋಶ

ಬಿಜೆಪಿ ಆಕ್ರೋಶ

ಸಂಸತ್ ಭವನದ ಸಂಕೀರ್ಣದಲ್ಲಿರುವ ಗಾಂಧಿ ಪ್ರತಿಮೆ ಸಂಕೀರ್ಣದ ಮುಂಭಾಗದಲ್ಲಿ ಉಭಯ ಸದನಗಳಿಂದ ಅಮಾನತುಗೊಂಡ ಸುಮಾರು ಎರಡು ಡಜನ್ ಪ್ರತಿಪಕ್ಷಗಳ ಸಂಸದರ 50 ಗಂಟೆಗಳ ರಿಲೇ ಧರಣಿ ಈಗ ವಿವಾದಕ್ಕೆ ಸಿಲುಕಿದೆ. ತಮ್ಮ ಆಹಾರ ಮೆನುವಿನಲ್ಲಿ ಚಿಕನ್ ತಂದೂರಿಯನ್ನು ಸೇರಿಸಿದ ಬಗ್ಗೆ ಮಾಧ್ಯಮ ವರದಿ ಮಾಡಿದ ನಂತರ ಬಿಜೆಪಿ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದೆ. ಪಕ್ಷದ ನಾಯಕ ಶಹಜಾದ್ ಪೂನವಾಲಾ ಅವರು, 'ಮಾಧ್ಯಮ ವರದಿಗಳ ಪ್ರಕಾರ, ಸಂಸತ್ತಿನ ಗಾಂಧಿ ಪ್ರತಿಮೆಯ ಮುಂದೆ ಪ್ರತಿಭಟನೆ ನಡೆಸುತ್ತಿರುವ ಕೆಲವು ಅಮಾನತುಗೊಂಡ ಸಂಸದರು 'ತಂಡೂರಿ ಚಿಕನ್' ತಿಂದಿದ್ದಾರೆ. ಗಾಂಧೀಜಿಯವರು ಪ್ರಾಣಿಗಳ ಹತ್ಯೆಯ ಕುರಿತಾದ ಅಭಿಪ್ರಾಯಗಳನ್ನು ಕಟುವಾಗಿ ವಿರೋಧಿಸಿದ್ದರು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಇದು ಪ್ರತಿಭಟನೆಯೋ ಅಥವಾ ವಿಹಾರವೋ ಎಂದು ಹಲವರು ಕೇಳುತ್ತಿದ್ದಾರೆ.

ಇದು ಸುಳ್ಳು ಆರೋಪ- ಟಿಎಂಸಿ ಸಂಸದ

ಇದು ಸುಳ್ಳು ಆರೋಪ- ಟಿಎಂಸಿ ಸಂಸದ

ಅಮಾನತುಗೊಂಡಿರುವ ಸಂಸದರಲ್ಲಿ ಒಬ್ಬರಾದ ಟಿಎಂಸಿಯ ಸುಶ್ಮಿತಾ ದೇವ್ ಈ ಆರೋಪಗಳಿಗೆ ಪ್ರತ್ಯಾರೋಪ ಮಾಡಿದ್ದಾರೆ. ಅವರು ಹೇಳಿದರು, 'ಇದು ಸುಳ್ಳು. ಹಣದುಬ್ಬರದಿಂದಾಗಿ ಸರ್ಕಾರದ ನಾಯಕರು ಮತ್ತು ಸಚಿವರು ವಿಚಲಿತರಾಗಿದ್ದಾರೆ. ಅವರ ಬಳಿ ಉತ್ತರವಿಲ್ಲ, ಹಾಗಾಗಿ ಇದು ಪ್ರಚಾರವಾಗಿದೆ. ಆರ್‌ಎಸ್‌ಎಸ್‌ನವರು ಮತ್ತು ಮಂತ್ರಿಗಳು ಬಾಗಿಲುಗಳನ್ನು ಮುಚ್ಚಿ ಎಲ್ಲವನ್ನೂ ತಿನ್ನುತ್ತಾರೆ. ಹಾಗಾಗಿ ನಮ್ಮ ಆಹಾರದ ಬಗ್ಗೆ ಕಾಮೆಂಟ್ ಮಾಡಬೇಡಿ. ಊಟವನ್ನು ಬಗ್ಗೆ ಕಾಮೆಂಟ್ ಮಾಡಬೇಡಿ ಎಂದು ಹೇಳಿದರು. ಬಿಜೆಪಿ ಈ ಒಗ್ಗಟ್ಟಿಗೆ ಹೆದರುತ್ತಿದೆ. ಬಿಜೆಪಿ-ಆರ್‌ಎಸ್‌ಎಸ್ ಹೊರಗೆ ಏನು ಹೇಳುತ್ತಾರೆ ಮತ್ತು ಖಾಸಗಿಯಾಗಿ ಏನು ತಿನ್ನುತ್ತಾರೆ ಎಂಬುದು ನಮಗೆ ತಿಳಿದಿದೆ ಎಂದು ಕುಟುಕಿದ್ದಾರೆ.

ಡಿಎಂಕೆ ಸಂಸದ ತಿರುಚಿ ಸಿವಾ ಅವರು ಬುಧವಾರ ಉಪಹಾರವನ್ನು ಆಯೋಜಿಸಿದ್ದರು ಎಂದು ಮಾಧ್ಯಮ ವರದಿಗಳು ಬಂದವು. ಇದರಲ್ಲಿ ಪ್ರತಿಭಟನಾನಿರತ ವಿರೋಧ ಪಕ್ಷದ ಸಂಸದರಿಗೆ ಇಡ್ಲಿ-ಸಾಂಬಾರ್ ಬಡಿಸಲಾಯಿತು. ಡಿಎಂಕೆಯಿಂದಲೇ ಊಟದ ವ್ಯವಸ್ಥೆ ಕೂಡ ಮಾಡಲಾಗಿತ್ತು. ಆದರೆ, ಭೋಜನವನ್ನು ತೃಣಮೂಲ ಕಾಂಗ್ರೆಸ್ ಏರ್ಪಡಿಸಿತ್ತು. ಊಟದ ಮೆನು ರೋಟಿ, ದಾಲ್, ಪನೀರ್ ಮತ್ತು ಚಿಕನ್ ತಂದೂರಿಯನ್ನು ಒಳಗೊಂಡಿತ್ತು. ಸಂಸದರಿಗೆ ಕ್ಯಾರೆಟ್ ಹಲ್ವಾವನ್ನು ಆರ್ಡರ್ ಮಾಡಲಾಗಿತ್ತು. ಸಂಸದರ ಸೇವೆಯಲ್ಲಿ ಟಿಎಂಸಿಯಿಂದ ಹಣ್ಣುಗಳನ್ನೂ ಆರ್ಡರ್ ಮಾಡಲಾಗಿತ್ತು.

ಮೆನುವಿನಲ್ಲಿ ಚಿಕನ್ ತಂದೂರಿ

ಮೆನುವಿನಲ್ಲಿ ಚಿಕನ್ ತಂದೂರಿ

ಗುರುವಾರ ಮಧ್ಯಾಹ್ನದ ಊಟವನ್ನು ತೆಲಂಗಾಣ ರಾಷ್ಟ್ರ ಸಮಿತಿ ಮತ್ತು ಆಮ್ ಆದ್ಮಿ ಪಕ್ಷದಿಂದ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಪ್ರತಿಭಟನಾ ನಿರತ ಸಂಸದರಿಗೆ ಟೆಂಟ್ ಹಾಕುವ ಹೊಣೆಯನ್ನೂ ಆಮ್ ಆದ್ಮಿ ಪಕ್ಷಕ್ಕೆ ನೀಡಲಾಗಿತ್ತಾದರೂ ಸಂಸತ್ತಿನ ಸಂಕೀರ್ಣದಲ್ಲಿ ಕಟ್ಟಡ ನಿರ್ಮಾಣ ನಿಯಮಗಳ ಕೊರತೆಯಿಂದಾಗಿ ಅನುಮತಿ ಸಿಗಲಿಲ್ಲ. ಒಟ್ಟಿನಲ್ಲಿ ಸಂಸದರಿಗೆ ಪ್ರಾದೇಶಿಕ ಖಾದ್ಯಗಳ ವ್ಯವಸ್ಥೆ ಮಾಡಲಾಗುತ್ತಿದ್ದು, ಅದರಲ್ಲಿ ಚಿಕನ್ ತಂದೂರಿ ನೀಡುತ್ತಿರುವ ವಿಚಾರ ಗದ್ದಲ ಸೃಷ್ಟಿಸಿದ್ದು, ಇದನ್ನು ಟಿಎಂಸಿ ನಾಯಕ ನಿರಾಕರಿಸಲು ಯತ್ನಿಸುತ್ತಿದ್ದಾರೆ.

ಪ್ರತಿಭಟನೆಯಿಂದ ಹಿಂದೆ ಸೆರಿಯದ ಪ್ರತಿಪಕ್ಷಗಳ

ಪ್ರತಿಭಟನೆಯಿಂದ ಹಿಂದೆ ಸೆರಿಯದ ಪ್ರತಿಪಕ್ಷಗಳ

ಸೋಮವಾರ ಮತ್ತು ಮಂಗಳವಾರ ಸದನದಿಂದ ಅಮಾನತುಗೊಂಡ ಸಂಸದರೆಂದರೆ ಟಿಎಂಸಿಯ 7, ಡಿಎಂಕೆಯ 6, ಟಿಆರ್‌ಎಸ್‌ನ 3, ಸಿಪಿಎಂನ 2 ಮತ್ತು ಸಿಪಿಐ ಮತ್ತು ಆಮ್ ಆದ್ಮಿ ಪಕ್ಷದ ತಲಾ ಒಬ್ಬರು. ಆದರೆ, ಗುರುವಾರ ಕೂಡ ಸದನದಲ್ಲಿ ಅಸಭ್ಯವಾಗಿ ವರ್ತಿಸಿದ ಮೂವರು ರಾಜ್ಯಸಭಾ ಸಂಸದರನ್ನು ಅಮಾನತುಗೊಳಿಸಲಾಗಿದೆ. ಆಮ್ ಆದ್ಮಿ ಪಕ್ಷದ ಸುಶೀಲ್ ಕುಮಾರ್ ಗುಪ್ತಾ ಮತ್ತು ಸಂದೀಪ್ ಪಾಠಕ್ ಮತ್ತು ಸ್ವತಂತ್ರ ಸಂಸದ ಅಜಿತ್ ಕುಮಾರ್ ಭುಯಾನ್ ಅವರನ್ನು ಅಮಾನತುಗೊಳಿಸಲಾಗಿದೆ.

English summary
Monsoon session of Parliament: BJP accuses suspended members of eating chicken tandoori in front of Gandhi statue. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X