ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಿಳೆಯರಿಗೆ ಸಿಹಿಸುದ್ದಿ- ತಾಯ್ತನದ ರಜೆ ಇನ್ಮುಂದೆ 26 ವಾರ

|
Google Oneindia Kannada News

ನವದೆಹಲಿ, ಮಾರ್ಚ್ 10: ತಾಯ್ತನ ನಿರೀಕ್ಷಿಸುತ್ತಿರುವ ಉದ್ಯೋಗಸ್ಥ ಮಹಿಳೆಯರಿಗೆ ಇಲ್ಲೊಂದು ಸಿಹಿ ಸುದ್ದಿ ಇದೆ. 12 ವಾರವಿದ್ದ ವೇತನ ಸಹಿತ ತಾಯ್ತನದ ರಜೆಯನ್ನು 26 ವಾರಗಳಿಗೆ ವಿಸ್ತರಿಸುವ ಹೊಸ ಕಾಯಿದೆಯನ್ನು ಸಂಸತ್ತಿನಲ್ಲಿ ಗುರುವಾರ ಅಂಗೀಕರಿಸಲಾಗಿದೆ.

ದಿ ಮೆಟರ್ನಿಟಿ ಬೆನಿಫಿಟ್ (ತಿದ್ದುಪಡಿ) ಕಾಯಿದೆ- 2016 ನ್ನು ಕಳೆದ ವರ್ಷದ ಆಗಸ್ಟ್ ತಿಂಗಳಿನಲ್ಲೇ ರಾಜ್ಯಸಭೆ ಅಂಗೀಕರಿಸಿತ್ತಾದರೂ, ಲೋಕಸಭೆಯಲ್ಲಿ ಅದಕ್ಕೆ ಅಂಗೀಕಾರ ಸಿಕ್ಕಿದ್ದು ನಿನ್ನೆ. ಇದು ಅಂತಾರಾಷ್ಟ್ರೀಯ ಮಹಿಳಾ ದಿನದ ಮರುದಿನ ಸರ್ಕಾರ ಮಹಿಳೆಯರಿಗೆ ನೀಡುತ್ತಿರುವ ಕೊಡುಗೆ ಎಂದು ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಹೇಳಿದ್ದಾರೆ.

ಆರೋಗ್ಯವಂತ ಮಗು, ನೆಮ್ಮದಿಯ ತಾಯ್ತನ

ಆರೋಗ್ಯವಂತ ಮಗು, ನೆಮ್ಮದಿಯ ತಾಯ್ತನ

ಮಹಿಳೆಯರು ಆರೋಗ್ಯವಂತ ಮಗುವನ್ನು ಪಡೆಯಲು ಮತ್ತು ನೆಮ್ಮದಿಯ ತಾಯ್ತನ ಅನುಭವಿಸಲು ಸರ್ಕಾರ ತೆಗೆದುಕೊಂಡಿರುವ ಈ ನಿರ್ಧಾರ ನಿಜಕ್ಕೂ ಶ್ಲಾಘನೀಯ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಖಾತೆ ಸಚಿವೆ ಮನೇಕಾ ಗಾಂಧಿ ಹೇಳಿದ್ದಾರೆ.

ಎಲ್ಲಿ ಅನ್ವಯ?

ಎಲ್ಲಿ ಅನ್ವಯ?

ಈ ಮೆಟರ್ನಿಟಿ ರಜೆ 10ಕ್ಕಿಂತ ಹೆಚ್ಚು ಜನ ಕೆಲಸ ಮಾಡುವ ಎಲ್ಲಾ ಕಚೇರಿಗಳಿಗೂ ಅನ್ವಯಿಸುತ್ತದೆ.

ಯಾರಿಗೆ ಅನ್ವಯ?

ಯಾರಿಗೆ ಅನ್ವಯ?

ಮೊದಲ ಎರಡು ಮಕ್ಕಳಿಗೆ ಮಾತ್ರ ತಾಯಂದಿರು 26 ವಾರಗಳ ರಜೆಯ ಉಪಯೋಗ ಪಡೆಯಬಹುದು. ಮೂರನೇ ಮಗುವಿಗಾದರೆ 12 ವಾರವಷ್ಟೇ ರಜೆ ಸಿಕ್ಕುತ್ತದೆ.

 ಉಪಯೋಗ ಯಾರಿಗೆ?

ಉಪಯೋಗ ಯಾರಿಗೆ?

ಸರ್ಕಾರದ ಈ ನಿರ್ಧಾರದಿಂದ ಭಾರತದ 1.8 ಮಿಲಿಯನ್ ಉದ್ಯೋಗಸ್ಥ ಮಹಿಳೆಯರಿಗೆ ಉಪಯೋಗವಾಗಲಿದೆ.

ಬಾಡಿಗೆ ತಾಯಿಯರಿಗೂ ಉಪಯೋಗ?

ಬಾಡಿಗೆ ತಾಯಿಯರಿಗೂ ಉಪಯೋಗ?

ಬಾಡಿಗೆ ತಾಯ್ತನದಿಂದ ತಾಯಿಯಾಗಿದ್ದರೆ ಅಥವಾ ಮೂರು ತಿಂಗಳಿಗಿಂತ ಕಡಿಮೆ ವಯಸ್ಸಿನ ಮಗುವನ್ನು ಕಾನೂನಾತ್ಮಕವಾಗಿ ದತ್ತು ತೆಗೆದುಕೊಂಡಿದ್ದರೆ ಅಂಥವರಿಗೆ 12 ವಾರಗಳ ರಜೆ ಅನ್ವಯಿಸುತ್ತದೆ.

ಭಾರತಕ್ಕೆ ಮೂರನೇ ಸ್ಥಾನ

ಭಾರತಕ್ಕೆ ಮೂರನೇ ಸ್ಥಾನ

ಇದರಿಂದಾಗಿ ಹೆಚ್ಚು ಅವಧಿಯ ತಾಯ್ತನದ ರಜೆ ನೀಡುತ್ತಿರುವ ದೇಶಗಳ ಪೈಕಿ ಭಾರತ ಮೂರನೇ ಸ್ಥಾನ ಪಡೆದಂತಾಗಿದೆ. ಕೆನಡಾ (50 ವಾರ) ಮತ್ತು ನಾರ್ವೆ (44 ವಾರ) ಕ್ರಮವಾಗಿ ಮೊದಲೆರಡು ಸ್ಥಾನದಲ್ಲಿವೆ.

English summary
Parliament passes bill to increase maternity leave to 26 months. It will be helpful for more than 1.8 million employed women in the country. This is a gift to women a day after international womens day, Union Labour minister Bandaru Dattatryeya told.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X