ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಒಂದು ದೇಶ ಒಂದೇ ಪಕ್ಷ' ಮಾಡಬೇಡಿ: ಗುಲಾಂ ನಬಿ ಆಜಾದ್

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 22: 'ಒಂದು ದೇಶ, ಒಂದೇ ಪಕ್ಷ' ಎಂಬ ನೀತಿಯನ್ನು ಜಾರಿಗೆ ತರುವುದರತ್ತ ಹೋಗಬೇಡಿ ಎಂದು ಕಾಂಗ್ರೆಸ್ ಸಂಸದ ಗುಲಾಮ್ ನಬಿ ಆಜಾದ್, ಕೇಂದ್ರ ಸರ್ಕಾರದ ಕೃಷಿ ಸಂಬಂಧಿತ ಮಸೂದೆಗಳನ್ನು ಉಲ್ಲೇಖಿಸಿ ಹೇಳಿದ್ದಾರೆ.

'ಒಂದು ದೇಶ ಒಂದು ಮಂಡಿ' ಎಂದು ನೀವು ಹೇಳುತ್ತಿದ್ದೀರಿ. ಒಂದು ದೇಶ-ಒಂದು ರೇಷನ್ ಕಾರ್ಡ್, ಒಂದು ದೇಶ-ಒಂದು ತೆರಿಗೆ ಹಾಗೂ ಇತರೆ ಸಂಗತಿಗಳನ್ನು ಹೇಳಿಕೊಳ್ಳುತ್ತಿದ್ದೀರಿ. ಆದರೆ ಒಂದು ದೇಶ ಒಂದೇ ಪಕ್ಷದೆಡೆಗೆ ಹೋಗಬೇಡಿ. ಎಂಟು ಸದಸ್ಯರ ಅಮಾನತನ್ನು ಹಿಂದಕ್ಕೆ ಪಡೆದುಕೊಳ್ಳಬೇಕು. ಈ ಅಧಿವೇಶನವನ್ನು ಕಾಂಗ್ರೆಸ್ ಹಾಗೂ ಇತರೆ ವಿರೋಧಪಕ್ಷಗಳು ಬಹಿಷ್ಕರಿಸುತ್ತಿವೆ. ನಮ್ಮ ಬೇಡಿಕೆಗಳು ಈಡೇರುವವರೆಗೂ ಅಧಿವೇಶನವನ್ನು ಬಹಿಷ್ಕರಿಸುತ್ತೇವೆ ಎಂದು ಗುಲಾಂ ನಬಿ ಆಜಾದ್ ತಿಳಿಸಿದ್ದಾರೆ.

ರಾಜ್ಯಸಭೆ ಗದ್ದಲ: ಉಪವಾಸ ಪ್ರತಿಭಟನೆಗೆ ಮುಂದಾದ ಉಪಾಧ್ಯಕ್ಷ ಹರಿವಂಶ್ ಸಿಂಗ್ರಾಜ್ಯಸಭೆ ಗದ್ದಲ: ಉಪವಾಸ ಪ್ರತಿಭಟನೆಗೆ ಮುಂದಾದ ಉಪಾಧ್ಯಕ್ಷ ಹರಿವಂಶ್ ಸಿಂಗ್

ಸದನದಲ್ಲಿ ನಡೆದ ಘಟನೆಯ ಬಗ್ಗೆ ಯಾರೂ ಖುಷಿಯಾಗಿಲ್ಲ. ತಮ್ಮ ನಾಯಕರ ಮಾತುಗಳನ್ನು ಆಲಿಸಬೇಕು ಎಂದು ಜನರು ಅಪೇಕ್ಷಿಸುತ್ತಿದ್ದಾರೆ. ತಮ್ಮ ಅಭಿಪ್ರಾಯಗಳನ್ನು ಯಾರೂ 2-3 ನಿಮಿಷಗಳಲ್ಲಿ ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

 Parliament Monsoon Session: Ghulam Nabi Azad Said Dont Move Towards One Nation One Party

ರೈತರ ಉತ್ಪನ್ನಗಳ ಖರೀದಿಯು ಎಂಎಸ್‌ಪಿಗಿಂತ ಕಡಿಮೆ ಇರುವಂತಿಲ್ಲ. ಎಂಎಸ್‌ಪಿಗಿಂತ ಕಡಿಮೆ ಮೊತ್ತದಲ್ಲಿ ಯಾವ ಖಾಸಗಿ ವ್ಯಾಪರಿಯಖರೀದಿ ಮಾಡದಂತೆ ಸರ್ಕಾರ ಮತ್ತೊಂದು ಮಸೂದೆ ತರಲಿ. ಎಲ್ಲ ಎಂಟು ಸಂಸದರ ಮೇಲಿನ ಅಮಾನತು ತೆಗೆದುಹಾಕಲಿ. ಈ ಬೇಡಿಕೆಗಳನ್ನು ಈಡೇರಿಸುವವರೆಗೂ ಸದನವನ್ನು ಬಹಿಷ್ಕರಿಸುತ್ತೇವೆ ಎಂದು ಹೇಳಿದ್ದಾರೆ.

English summary
Parliament Monsoon Sessions 2020: Rajya Sabha Congress MP Ghulam Nabi Azad said, don't move towards one nation one party like one nation one mandi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X